ಚಿಕ್ಕಮಗಳೂರು ನಗರದ ವಿವಿಧ ಕಡೆಗಳಲ್ಲಿ ಮೋಟಾರು ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಅಂತರ್ಜಿಲ್ಲೆಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು (ಫೆ.19): ಚಿಕ್ಕಮಗಳೂರು ನಗರದ ವಿವಿಧ ಕಡೆಗಳಲ್ಲಿ ಮೋಟಾರು ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಅಂತರ್ಜಿಲ್ಲೆಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ನಗರಠಾಣೆ ಪೋಲಿಸರು ಹನ್ನೊಂದು ಲಕ್ಷದ ಐವತ್ತು ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಂಡಿದ್ದಾರೆ.
21 ಪ್ರಕರಣಗಳಲ್ಲಿ 21 ವಾಹನಗಳು ವಶಕ್ಕೆ
ನಗರದ ವಿವಿಧ ಕಡೆಗಳಲ್ಲಿ ಮೋಟಾರು ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಹಾಗೂ ಕಳ್ಳತನ ಮಾಡಿದ ವಾಹನಗಳನ್ನು ಮಾರಾಟ ಮಾಡುತ್ತಿದ್ದ 4 ಜನ ಆರೋಪಿಗಳಾದ ದಾವಣಗೆರೆ ಜಿಲ್ಲೆ ಸಂತ ಬೆನ್ನೂರು ವಾಸಿ ಗೌತಮ್, ನಗರದ ಲಕ್ಷ್ಮೀಶ,ಅಜ್ಜಂಪುರ ಚಿಕ್ಕನವಂಗಲದ ಸತೀಶ್, ತರೀಕೆರೆ ತಾಲ್ಲೂಕ್ ಇಟ್ಟಿಗೆ ಗ್ರಾಮದ ರಘು ಬಂಧಿತರಾಗಿದ್ದಾರೆ.
40ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ್ದ ಡೆಲಿವರಿ ಬಾಯ್ ಅರೆಸ್ಟ್!
ಚಿಕ್ಕಮಗಳೂರು ನಗರ ಠಾಣೆಯ 08 ,ಮೈಸೂರು ನಗರದ ಕೆ.ಆರ್. ಪೊಲೀಸ್ ಠಾಣೆಯ 1 ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ 5 ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯ 1 ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ 1, ಬೆಂಗಳೂರು ನಗರದ ಬೆಳ್ಳಂದೂರು, ಮಹಾಲಕ್ಷ್ಮಿಪುರಂ, ಬಾಗಲೂರು, ದೇವನಹಳ್ಳಿ ಹಾಗೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ತಲಾ 1ಪ್ರಕರಣಗಳಲ್ಲಿ ಒಟ್ಟು 21 ಪ್ರಕರಣಗಳಲ್ಲಿ 21ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಎಲ್ಲಾ ಮೋಟರ್ ಸೈಕಲ್ ಗಳ ಅಂದಾಜು ಮೌಲ್ಯ 11,50,000/- (ಹನ್ನೊಂದು ಲಕ್ಷದ ಐವತ್ತು ಸಾವಿರ) ರೂಪಾಯಿಗಳಾಗಿದ್ದು ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಅಪ್ರಾಪ್ತರಿಗೆ 'ಬಾ ಬಾ' ಎಂದು ಕರೆಯುವುದು ಲೈಂಗಿಕ ಕಿರುಕುಳ: ನ್ಯಾಯಾಲಯ
ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ:
ಚಿಕ್ಕಮಗಳೂರು ನಗರದ ವಿವಿಧ ಕಡೆಗಳಲ್ಲಿ ಕಳ್ಳತನವಾಗಿದ್ದ ಮೋಟಾರು ಸೈಕಲ್ ಗಳ ಮತ್ತು ಆರೋಪಿತರ ಪತ್ತೆ ಕಾರ್ಯಕ್ಕಾಗಿ ಎಸ್.ಎನ್. ಜಯರಾಂ ಪೊಲೀಸ್ ನಿರೀಕ್ಷಕರು ನಗರ ಠಾಣೆ ಚಿಕ್ಕಮಗಳೂರು ಮತ್ತು ನಾಗೇಂದ್ರ ನಾಯ್ಕ ಹೆಚ್ ಪೋಲೀಸ್ ಉಪನೀರೀಕ್ಷಕ ನಗರ ಠಾಣೆ ಚಿಕ್ಕಮಗಳೂರು ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ದಿನೇಶ್, ನಂಜಪ್ಪ, ಪ್ರದೀಪ, ಮಧುಕುಮಾರ, ನವೀನ ಹಬೀಬ್ ಖಾನ್ ಯುವರಾಜ ಹಾಗೂ ಚಾಲಕ ಪ್ರಸನ್ನ ಕುಮಾರ ರವರುಗಳು ಒಳಗೊಂಡಂತ ತಂಡಗಳನ್ನು ರಚನೆ ಮಾಡಲಾಗಿತ್ತು. ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಿರುವ ನಗರ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೋಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.