ಹೆತ್ತ ಮೂರು ಮಕ್ಕಳಿಗೆ ವಿಷ ಉಣಿಸಿದ ತಂದೆ; ವಿಜಯಪುರದಲ್ಲಿ ದಾರುಣ ಘಟನೆ

By Gowthami K  |  First Published Sep 2, 2023, 3:51 PM IST

ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆಗೆ ಯತ್ನಸಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.


ವಿಜಯಪುರ (ಸೆ.2): ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆಗೆ ಯತ್ನಸಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಶಾಂತಾ ಹಾಗೂ ರಾಯಣ್ಣ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಶಾಂತಾ (7 ವರ್ಷ), ರಾಯಣ್ಣ (5 ವರ್ಷ) ಬದುಕುಳಿದ ಪುತ್ರ ಸಂಗಮೇಶ 2 ವರ್ಷದ ಮಗುವಾಗಿದೆ.

ಮಸಬಿನಾಳ ಗ್ರಾಮದ ನಿವಾಸಿ ಭೀರಣ್ಣ ಮಸಬಿನಾಳ ಎಂಬಾತ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ತನ್ನ ಮೂವರು ಮಕ್ಳಳಿಗೆ ವಿಷ ಹಾಕಿದ್ದಾನೆ. ಭೀರಣ್ಣ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

Tap to resize

Latest Videos

click me!