ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ತಂದೆ: ಕಾರಣ?

By Suvarna News  |  First Published Mar 21, 2020, 7:45 AM IST

ಹೆತ್ತಕರುಳ ಉಸಿರನ್ನೇ ನಿಲ್ಲಿಸಿದ ನೀಚ ತಂದೆ| ಹೆತ್ತ ತಂದೆಯಿಂದಲೇ ಇಬ್ಬರು ಮಕ್ಕಳ ಕೊಲೆ| ಮನೆಯಲ್ಲಿ ಸೈಕೋ ರೀತಿ ವರ್ತಿಸುತ್ತಿದ್ದ ಜತಿನ್| ಪ್ರೀತಿಸಿ ಟೆಕ್ಕಿಯನ್ನು ಮದ್ವೆ ಆಗಿದ್ದ ಸೈಕೋ| ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರ್ತಿದ್ದ ಸೈಕೊ|


ಬೆಂಗಳೂರು[ಮಾ.21]: ಮಕ್ಕಳು ನನ್ನ ರೀತಿ ಬೆಳಿತಾ ಇಲ್ಲ, ಇಂತಹ ಮಕ್ಕಳು ಬೇಡ್ವೇ ಬೇಡ ಎಂದು ತಂದೆಯೊಬ್ಬ ಇಬ್ಬರು ಮಕ್ಕಳನ್ನ ಕೊಲೆ ಮಾಡಿದ ಘಟನೆ ಹುಳಿಮಾವು ಠಾನಾ ವ್ಯಾಪ್ತಿ ಅಕ್ಷಯನಗರದ HONEY DEW ಅಪಾರ್ಟ್ಮೆಂಟ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ತೌಶಿನಿ( 3),ಶಾಸ್ತಾ(1.5) ಮೃತ ದುರ್ದೈವಿಗಳಾಗಿದ್ದಾರೆ. ಯಂದೆ ಜತಿನ್ ( 35 ) ಕೊಲೆ ಮಾಡಿದ ತಂದೆಯಾಗಿದ್ದಾನೆ. 

ಸಂಬಳ ಕೇಳಿದ್ದೇ ತಪ್ಪಾಯ್ತಾ? ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಾಲೀಕ!

Tap to resize

Latest Videos

ಕೇರಳ ಮೂಲದ ಜತಿನ್ ತಮಿಳುನಾಡು ಮೂಲದ ಟೆಕ್ಕಿ ಲಕ್ಷ್ಮಿಶಂಕರಿ ಎಂಬುವರೊಮದಿಗೆ ಪ್ರೀತಿಸಿ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಮೆನಯಲ್ಲಿಯೇ ಕೂತು ಕೂತು ಸೈಕೋ ತರ ವರ್ತಿಸುತ್ತಿದ್ದ. ಇದೇ ವಿಚಾರವಾಗಿ ಗಂಡ, ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು, ನಿನ್ನೆ ರಾತ್ರಿ ಕೂಡ ಜಗಳವಾಡಿದ್ದಾರೆ. ಈ ವೇಳೆ ಕೋಪಗೊಂಡ ಈತ ಏಕಾಏಕಿ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾನೆ. 

ಪ್ರಿಯತಮನೊಂದಿಗಿನ ಕಾಮನೆ ತೀರಿಸಿಕೊಳ್ಳಲು ಗಂಡನ ರುಂಡ, ಕೈಕಾಲು ಲಕ್ಷ್ಮಣ ತೀರ್ಥದಲ್ಲಿ!

ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ಧಾರೆ. 

click me!