ಅಪರಾಧ ಜಗತ್ತಿನ ಮೇಲೂ ಕೊರೋನಾ ಪರಿಣಾಮ/ ಬೆಂಗಳೂರಿನ ಕ್ರೈಮ್ ರೇಟ್ ಗಣನೀಯ ಇಳಿಕೆ/ ಕೊರೋನಾದಿಂದ ಅಪರಾಧ ಜಗತ್ತಿನಲ್ಲಿಯೂ ಅಲ್ಲೋಲ ಕಲ್ಲೋಲ/
ಬೆಂಗಳೂರು(ಮಾ. 19) ಕೊರೋನಾ ವೈರಸ್ ಪರಿಣಾಮ ಅಪರಾಧ ಜಗತ್ತಿನ ಮೇಲೂ ಆಗಿದೆ. ಬೆಂಗಳೂರಿನಲ್ಲಿ ಕೊರೋನಾ ಬಂದ ನಂತರ ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅಪರಾಧ ಜಗತ್ತಿನ ದಾಖಲೆಗಳೇ ಈ ಎಲ್ಲ ಸಂಗತಿಗಳನ್ನು ಸ್ಪಷ್ಟ ಮಾಡುತ್ತಿವೆ.
ಪ್ರಿಯತಮನೊಂದಿಗಿನ ಕಾಮನೆ ತೀರಿಸಿಕೊಳ್ಳಲು ಗಂಡನ ರುಂಡ, ಕೈಕಾಲು ಲಕ್ಷ್ಮಣ ತೀರ್ಥದಲ್ಲಿ!
ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಕ್ರೈಮ್ ರೇಟ್ ಗಣನೀಯ ಇಳಿಕೆ ಕಂಡಿದೆ. ಶೇಕಡಾ 30 ರಷ್ಟು ಇಳಿಕೆ ಕಂಡಿದೆ. ಫೆಬ್ರವರಿಯಲ್ಲಿ 3643 ಕೇಸ್ ಗಳು ದಾಖಲಾಗಿದ್ದವು. ಅದೇ ಮಾರ್ಚ್ ತಿಂಗಳಲ್ಲಿ 2236 ಕೇಸ್ ಗಳು ದಾಖಲಾಗಿವೆ.
ಫೆಭ್ರವರಿಯಲ್ಲಿ 4 ಚೈನ್ ಸ್ಯಾನಚಿಂಗ್ -, 7 ಮರ್ಡರ್, 18 ಡಕಾಯಿತಿ, 49 ಮನೆಗಳ್ಳತನದ ಪ್ರಕರಣದ ದಾಖಲಾಗಿದ್ದವು. ಆದರೆ ಈ ತಿಂಗಳಿನಲ್ಲಿ ಅವುಗಳ ಸಂಖ್ಯೆ ಇಳಿಕೆಯಾಗಿದೆ.ಕೊರೋನಾ ಮಹಾಮಾರಿ ಇಡೀ ಪ್ರಪಂಚವನ್ನೇ ಕಾಡುತ್ತಿದೆ. ಒಂದರ್ಥಲ್ಲಿ ಜಗತ್ತೇ ಸ್ಥಬ್ಧವಾಗಿದೆ