
ಧಾರವಾಡ(ಜು.21): ತಂದೆ- ಮಗನ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣ ಇಲ್ಲಿನ ಶಹರ ಠಾಣಾ ವ್ಯಾಪ್ತಿಯ ಶಿವಗಂಗಾ ನಗರದ ತೆಲಗರ ಓಣಿಯಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ.
ಬಸವರಾಜ ಹಿರೇಕುಂಬಿ (36) ಎಂಬಾತನೇ ತಂದೆಯಿಂದ ಕೊಲೆಯಾದ ಪುತ್ರ. ಆತನ ತಂದೆ ಫಕ್ಕೀರಪ್ಪ ಕೊಲೆಗೈದ ಆರೋಪಿ. ದಿನನಿತ್ಯ ಮದ್ಯ ಸೇವಿಸಿ ಬಂದು ಬಸವರಾಜ ಮನೆಯವರೊಂದಿಗೆ ಜಗಳವಾಡುತ್ತಿದ್ದನು. ಹಾಗೆಯೇ, ಮನೆಯವರೊಂದಿಗೆ ಜಗಳವಾಡುತ್ತಿದ್ದ ಸಮಯದಲ್ಲಿ ತಂದೆ ಫಕ್ಕೀರಪ್ಪ ಮಧ್ಯೆ ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿದಾಗ ಮಗನನ್ನು ತಂದೆ ಫಕ್ಕೀರಪ್ಪ ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಯಲ್ಲಾಪುರ: ಪರ ಪುರುಷನ ಸಂಗಕ್ಕೆ ಅಡ್ಡಿಯಾದ ಗಂಡನನ್ನೇ ಕೊಂದ ಹೆಂಡ್ತಿ..!
ಮೂರ್ನಾಲ್ಕು ದಿನಗಳ ಹಿಂದೆ ಬಸವರಾಜ ತನ್ನ ಹೆಂಡತಿಯನ್ನು ಹೊಡೆದಿದ್ದನು. ಇದೇ ಕಾರಣಕ್ಕೆ ಶಹರ ಠಾಣೆಯಲ್ಲಿ ಬಸವರಾಜನ ತಂದೆ-ತಾಯಿ ಹಾಗೂ ಮಡದಿ ದೂರು ನೀಡಿದ್ದರು. ಈ ವಿಷಯ ಗೊತ್ತಾಗಿ ಬಸವರಾಜ ಮತ್ತೆ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದನು. ಸುದ್ದಿ ತಿಳಿಯುತ್ತಿದ್ದಂತೆ ಶಹರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿ ಫಕ್ಕೀರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ