* ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ನಡೆದ ಘಟನೆ
* ಪತ್ನಿಯ ಮೇಲೆ ಸಂಶಯ ಪಟ್ಟು ತನ್ನ ಸ್ವಂತ ಮಗನನ್ನೇ ಕೊಂದ ತಂದೆ
* ಪೊಲೀಸ್ ತನಿಖೆ ವೇಳೆ ಎಲ್ಲವನ್ನೂ ಬಾಯಿಬಿಟ್ಟ ಕೊಲೆಗಡುಕ ಸಿದ್ದಪ್ಪ
ಬೆಳಗಾವಿ(ಸೆ.19): ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು, ಪತ್ನಿಯ ಮೇಲೆ ಸಂಶಯ ಪಟ್ಟ ತಂದೆ ತನ್ನ ಸ್ವಂತ ಮಗನನ್ನೇ ಹತ್ಯೆ ಮಾಡಿ ಬೋರ್‌ವೆಲ್ ಎಸೆದಿದ್ದಾನೆ.
ಮಗು ನನ್ನದಲ್ಲ ಅಂತ ಸಿದ್ದಪ್ಪ ಪತ್ನಿಯ ಜತೆ ಪದೇ ಪದೇ ಕಿರಿಕ್ ಮಾಡುತ್ತಿದ್ದನಂತೆ. ಈ ಕುರಿತು ಗ್ರಾಮದ ಮುಖಂಡರು ಹಲವು ಬಾರಿ ರಾಜಿ ಪಂಚಾಯಿತಿ ಕೂಡ ನಡೆಸಿದ್ದರು ಎಂದು ತಿಳಿದು ಬಂದಿದೆ. ಸಾಕಷ್ಟು ಬಾರಿ ಹೆಂಡತಿ ಮನವಿ ಮಾಡಿದ್ರೂ ಕ್ಯಾರೆ ಅನ್ನದ ಸಿದ್ದಪ್ಪ, ನಿತ್ಯವೂ ಹೆಂಡತಿ ಜತೆಗೆ ಕಿರಿಕ್ ಮಾಡುತ್ತಿದ್ದ.
ಕರ್ನಾಟಕದಲ್ಲಿ ಮತ್ತೆ ಸಂಭವಿಸಿದ ಬೋರ್‌ವೆಲ್ ದುರಂತ: ಎರಡೂವರೆ ವರ್ಷದ ಮಗು ಸಾವು
ಪತ್ನಿಯ ತಾಯಿ ಮನೆಯಲ್ಲಿಯೇ ಮಗು ಶರತ್ ಇತ್ತು. ಒಂದು ವಾರದ ಹಿಂದೆ ಶರತ್‌ನ ಎರಡನೇ ವರ್ಷದ ಹುಟ್ಟುಹಬ್ಬ ಸಹ ಆಚರಿಸಿದ್ದರು. ಮಗ ತನ್ನ ಮನೆಗೆ ಬರ್ತಿದ್ದಂತೆ ಸಿದ್ದಪ್ಪ ಕೊಲೆ ಮಾಡಲು ಸಂಚು ರೂಪಿಸಿದ್ದನಂತೆ. ಇದೀಗ ಮಗನನ್ನ ಕೊಂದ ಸಿದ್ದಪ್ಪ ಜೈಲು ಸೇರಿದ್ದಾನೆ.
ಪೊಲೀಸ್ ತನಿಖೆ ವೇಳೆ ಕೊಲೆಗಡುಕ ಸಿದ್ದಪ್ಪ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಈ ಸಂಬಂಧ ಹಾರೂಗೇರಿ ಪೊಲೀಸರು ಸಿದ್ದಪ್ಪನನ್ನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೋಸ್ಟ್ ಮಾರ್ಟ್ಂ ಬಳಿಕ ಶವ ತಂದು ಅಂತ್ಯಕ್ರಿಯೆ ಮಾಡಲಾಗಿದೆ. ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟ್ಂ ಮುಗಿದ ಬಳಿಕ ಶರತ್‌ನ ಅಂತ್ಯಸಂಸ್ಕಾರವನ್ನ ಕುಟುಂಬಸ್ಥರು ನೆರವೇರಿಸಿದ್ದಾರೆ. ಪಾಪಿ ತಂದೆ ಸಿದ್ದಪ್ಪನ ಸ್ವಂತ ಜಮೀನಿನಲ್ಲಿ ಮಗ ಶರತ್‌ನ ಅಂತ್ಯಕ್ರಿಯೆ ನೆರವೇರಿದೆ.