ಬೆಂಗಳೂರು: ಯಮಲೂರಿನ ದಿವ್ಯಶ್ರೀ ಟೆಕ್‌ಪಾರ್ಕ್ ಮನೆಯಲ್ಲಿ ವಜ್ರದ ಸರ, ಚಿನ್ನಾಭರಣ ಕಳ್ಳತನ ಮಾಡಿದ ಮಹಿಳೆ!

By Sathish Kumar KH  |  First Published Jul 30, 2024, 12:33 PM IST

ಮನೆ ಕೆಲಸ ಮಾಡ್ಕೊಂಡು, ಮಕ್ಕಳನ್ನು ನೋಡ್ಕೊಂಡಿರು ಎಂದು ಮನೆಯಲ್ಲಿಟ್ಟುಕೊಂಡರೆ ಮನೆಯಲ್ಲಿದ್ದ ವಜ್ರದ ನೆಕ್ಲೆಸ್, ಚಿನ್ನಾಭರಣ ಕದ್ದು ಪರಾರಿಯಾದ ಮಹಿಳೆ.


ಬೆಂಗಳೂರು (ಜು.30): ಮನೆಯಲ್ಲಿ ನಮ್ಮ ಕೆಲಸಗಳನ್ನು ನಾವು ಮಾಡಿಕೊಳ್ಳಲು ಆಗುವುದಿಲ್ಲವೆಂದು ಮನೆ ಕೆಲಸಕ್ಕೊಬ್ಬಳು ಮಹಿಳೆಯನ್ನು ಸೇರಿಸಿಕೊಂಡರೆ, ಕೆಲವು ದಿನಗಳು ಕೆಲಸ ಮಾಡಿ ನಂತರ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಮನೆಯಲ್ಲಿಯೇ ಕೆಲಸ ಮಾಡ್ತಾ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಕೆಲಸ ಮಾಡ್ತಿದ್ದ ಮನೆಯಲ್ಲಿ ಕಳ್ಳತನ ಮಾಡ್ತಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ದಿವ್ಯಾ (22) ಕಳ್ಳತನ ಆರೋಪದಡಿ ಪೊಲೀಸರಿಂದ ಬಂಧನವಾಗಿದ್ದಾಳೆ. ಬೆಂಗಳೂರಿನ ಹೊರವಲಯ ಯಮಲೂರಿನ ದಿವ್ಯಶ್ರೀ ಟೆಕ್ ಪಾರ್ಕ್ ವಿಲ್ಲಾ ಒಂದರಲ್ಲಿ ವಾಸವಿದ್ದ ಉದ್ಯಮಿಯ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ದಿವ್ಯಾಳನ್ನು ಕೆಲಸಕ್ಕೆ ಸೇರಿಕೊಳ್ಳಲಾಗಿತ್ತು. ಜೊತೆಗೆ, ಸಣ್ಣ ಪುಟ್ಟ ಮನೆ ಕೆಲಸಗಳನ್ನು ಕೂಡ ಮಾಡಿಕೊಂಡಿದ್ದಳು. ಆದರೆ, ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭವನ್ನು ನೋಡಿ, ದಿವ್ಯಾ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದಾಳೆ.

Latest Videos

undefined

20 ವರ್ಷದ ಲವರ್‌ನ ಕೊಂದು ಪೊದೆಯಲ್ಲಿ ಶವ ಎಸೆದು ಹೋಗಿದ್ದ ಬಾಯ್‌ಫ್ರೆಂಡ್‌ ದಾವೂದ್ ಬಂಧನ!

ಉದ್ಯಮಿಯ ಮನೆಯಲ್ಲಿದ್ದ ವಜ್ರದ ಹರಳುಗಳಿಳ್ಳ ನೆಕ್ಲೆಸ್‌ ಸೇರಿದಂತೆ ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿದ್ದಾಳೆ. ಇನ್ನು ಮನೆಯಲ್ಲಿ ಚಿನ್ನಾಭರಣ ಕಾಣದಿದ್ದಾಗ ಉದ್ಯಮಿ ದೂರು ನೀಡಿದ್ದನು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಾರತ್ತಹಳ್ಳಿ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ನಂತರ, ಆಕೆಯನ್ನು ವಿಚಾರಣೆ ಮಾಡಿದಾಗ ಹೈಡ್ರಾಮಾ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೌದು, ಪೊಲೀಸರ ವಶದಲ್ಲಿದ್ದಾಗಲು ದಿವ್ಯಾ ಹೈಡ್ರಾಮಾ ಮಾಡಿದ್ದಾಳೆ. ವಿಚಾರಣೆಗೆ ಕರೆದೊಯ್ಯುವ ವೇಳೆ ತನ್ನ ಕೈ ಕೊಯ್ದುಕೊಂಡು ಡ್ರಾಮಾ ಮಾಡಿದ್ದಾಳೆ. ಸಂಬಂಧಿಕರ ಸಹಾಯದಿಂದ ಚಿನ್ನಾಭರಣ ಮಾರಾಟವನ್ನೂ ಮಾಡಿದ್ದಾಳೆ. ಇದರಿಂದ ದಿವ್ಯಾಳನ್ನು ಬಂಧಿಸಿದ ಪೊಲೀಸರು ಆಕೆಯಿಂದ 30 ಲಕ್ಷ ರೂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಂತರ ಈಕೆ ಕದ್ದ ಆಭರಣಗಳನ್ನು ಮಾರಾಟ ಮಾಡುವುದಕ್ಕೆ ಸಹಾಯ ಮಾಡಿದ ಆಕೆಯ ಸಂಬಂಧಿಕರಾದ ಮತ್ತೋರ್ವ ಮಹಿಳೆ ಮಂಜು ಹಾಗೂ ಜೋಮನ್ ಎಂಬಾತನನ್ನೂ ಬಂಧಿಸಲಾಗಿದೆ. 

ಇನ್‌ಸ್ಟಾಗ್ರಾಂನಲ್ಲಿ ಸಿಕ್ಕ ಮಾಜಿ ಪ್ರಿಯಕರ: ಪ್ರೀತಿಸಿ ಮದುಯೆಯಾಗಿದ್ದ ಗಂಡನ ಕಥೆ ಮುಗಿಸಿದ ಐನಾತಿ ಹೆಂಡ್ತಿ..!

ಮನೆ ಕಳ್ಳತನ ಮಾಡಿದ ಪ್ರಕರಣದಲ್ಲಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ದಿವ್ಯಶ್ರೀ ಮನೆಯಲ್ಲಿ ಇದ್ದ ಚಿನ್ನಾಭರಣಗಳನ್ನು ಹಾಗೂ ಕಳ್ಳತನದ ವಸ್ತುಗಳನ್ನು ಮಾರಾಟ ಮಾಡಲು ಬಳಕೆ ಮಾಡಿದ್ದ ಮೊಬೈಲ್ ಫೋನ್‌ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.

click me!