ವಿಷ ಪದಾರ್ಥ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟಘಟನೆ ಮಂಗಳವಾರ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ (80) ಹಾಗೂ ಇವರ ಪುತ್ರ ಓಡಿಯಪ್ಪ (41) ಮೃತರು.
ಬೆಳ್ತಂಗಡಿ (ನ.23): ವಿಷ ಪದಾರ್ಥ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟಘಟನೆ ಮಂಗಳವಾರ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ (80) ಹಾಗೂ ಇವರ ಪುತ್ರ ಓಡಿಯಪ್ಪ (41) ಮೃತರು. ಮನೆಯಲ್ಲಿ ಗುರುವ ಸಹಿತ ಇಬ್ಬರು ಮಕ್ಕಳು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು. ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆ ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದರಿಂದ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಮತ್ತೊಂದು ಅವಘಡ ತಪ್ಪಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿನ ನಿಖರ ಕಾರಣ ತನಿಖೆ ಬಳಿಕ ಸ್ಪಷ್ಟವಾಗಿ ತಿಳಿದು ಬರಬೇಕಾಗಿದೆ. ತೀರಾ ಬಡ ಕುಟುಂಬವಾಗಿದ್ದು,ಮನೆಯಲ್ಲಿ ಮೂವರು ಪುರುಷರು ಮಾತ್ರ ವಾಸವಾಗಿದ್ದರು. ಬೆಳಗಿನ ವೇಳೆ ಮನೆಯಲ್ಲಿದ್ದ ಇಬ್ಬರ ಶವಗಳು ಅಂಗಳದಲ್ಲಿ ಕಂಡು ಬಂದಿದ್ದವು. ಮನೆ ಒಳಗೆ ಅನ್ನ ಹಾಗೂ ಉಳಿದ ಅಣಬೆ ಪದಾರ್ಥ ಪಾತ್ರೆಗಳಲ್ಲಿ ಕಂಡು ಬಂದಿದೆ.
ಬೆಂಗಳೂರು: ಸ್ನೇಹಿತನ ಕೊಂದು ಠಾಣೆಗೆ ಶವ ಸಮೇತ ಠಾಣೆಗೆ ಬಂದ..!
ಅಣಬೆಗಳನ್ನು ಅವುಗಳ ಬಣ್ಣಗಳ ಮೂಲಕ ಗುರುತಿಸಿ ಉಪಯೋಗಿಸಲಾಗುತ್ತದೆ. ‘ಅಮಾನಿಟ’ ಎಂಬ ಜಾತಿಯ ಅಣಬೆಗಳು ಕಾಡಲ್ಲಿ ಸಾಮಾನ್ಯವಾಗಿ ಸಿಗುತ್ತವೆ. ಇವು ತೀವ್ರ ವಿಷಕಾರಿ ಹಾಗೂ ಇವನ್ನು ಸೇವಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆಹಾರಕ್ಕೆ ಬಳಸುವ ‘ಪ್ಲೀವ್ ರೋಟಸ್’ ಜಾತಿ ಅಣಬೆಗಳನ್ನು ಎರಡು ಮೂರು ದಿನ ಯಾವುದೇ ಮುಂಜಾಗ್ರತೆ ವಹಿಸದೆ ಇಟ್ಟು ಸೇವಿಸಿದರೆ ಇದರಲ್ಲಿಯು ತೀವ್ರ ಅನಾರೋಗ್ಯ ಬರುವ ಸಂಭವ ಇದೆ.
-ಡಾ.ಕುಮಾರ್ ಹೆಗ್ಡೆ, ಮುಖ್ಯಸ್ಥರು, ಸಸ್ಯಶಾಸ್ತ್ರ ವಿಭಾಗಹಾಗೂ ವಿಜ್ಞಾನ ನಿಕಾಯದ ಡೀನ್, ಎಸ್‌ಡಿಎಂ ಕಾಲೇಜ್ ಉಜಿರೆ.
ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು: ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ದನಕರುಗಳಿಗೆ ಮೇವು ತರಲು ಹೋಗಿದ್ದ ಯುವಕನೊಬ್ಬ ನೀರು ತುಂಬಿದ ಸವಳಿನ ಹೊಂಡಕ್ಕೆ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಈವರೆಗೂ ಮೃತದೇಹ ಪತ್ತೆಯಾಗಿಲ್ಲ ಎಂದು ಪಿಎಸ್‌ಐ ಸುಖಾನಂದ ಸಿಂಧೆ ತಿಳಿಸಿದ್ದಾರೆ. ಸುಲೇಪೇಟ ಗ್ರಾಮದ ಸಿದ್ದಾರ್ಥ ನಗರದ ನಿವಾಸಿ ಪ್ರಕಾಶ ಶಾಮರಾವ (27) ಮೃತಪಟ್ಟಿರುವ ಯುವಕ. ಮೃತನು ಮೊನ್ನೆ ಸಂಜೆ ಹುಲ್ಲು ತರಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ. ಶವ ಪತ್ತೆಗಾಗಿ ಚಿಂಚೋಳಿ ಅಗ್ನಿಶಾಮಕ ದಳ ಮತ್ತು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಶೋಧನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಸಹೋದರನ ಮಗನ ಸಾವಿನ ಸುದ್ದಿ ಕೇಳಿ ಚಿಕ್ಕಪ್ಪನೂ ಸಾವು..!
ಮೃತ ಯುವಕನು ಸೇಂದಿ ಮರದ ಪೊರಕೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು. ಮೃತನ ಶವ ಈವರೆಗೂ ಪತ್ತೆಯಾಗಿಲ್ಲ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಚಿಂಚೋಳಿ-ಕಲಬುರಗಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆಂದು ಗ್ರಾಪಂ ಸದಸ್ಯ ರುದ್ರಮುನಿ ರಾಮತೀರ್ಥಕರ ತಿಳಿಸಿದ್ದಾರೆ. ಸವಳು ಮಣ್ಣಿನ ಅಕ್ರಮ ಗಣಿಗಾರಿಕೆಗಳು ಸುಲೇಪೇಟ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇವುಗಳ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಆಳವಾದ ಹೊಂಡಾದಲ್ಲಿ ದನಕರುಗಳು ಅಮಾಯಕರು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಮಾಡಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು. ಅಲ್ಲದೇ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸಮಾಜ ಸೇವಕ ಅಂಬರೀಶ ಗೋಣಿ ಒತ್ತಾಯಿಸಿದ್ದಾರೆ.