ಮನೆ ಕಟ್ಟುವ ವಿಚಾರಕ್ಕೆ ಪಕ್ಕದ ಮನೆಯವರು ಯುವಕ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಜಗಳ ಬಿಡಿಸಲು ಬಂದ ಯುವಕನಿಗೂ ಮನಸ್ಸೋಯಿಚ್ಚೆ ಹಲ್ಲೆ ಮಾಡಿದ ಘಟನೆ ಹೊಸಕೋಟೆ ಪಟ್ಟಣದ ಗಂಗಮ್ಮ ಗುಡಿ ರಸ್ತೆ ಬಳಿ ನಡೆದಿದೆ.
ಹೊಸಕೋಟೆ (ಡಿ.28): ಮನೆ ಕಟ್ಟುವ ವಿಚಾರಕ್ಕೆ ಪಕ್ಕದ ಮನೆಯವರು ಯುವಕ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಜಗಳ ಬಿಡಿಸಲು ಬಂದ ಯುವಕನಿಗೂ ಮನಸ್ಸೋಯಿಚ್ಚೆ ಹಲ್ಲೆ ಮಾಡಿದ ಘಟನೆ ಹೊಸಕೋಟೆ ಪಟ್ಟಣದ ಗಂಗಮ್ಮ ಗುಡಿ ರಸ್ತೆ ಬಳಿ ನಡೆದಿದೆ. ಹಲ್ಲೆಗೊಳಗಾದ ಯುವತಿ ಸಂಧ್ಯಾ ಮತ್ತು ಮಂಜುನಾಥ್.
ಮನೆ ಕಟ್ಟುವ ಸಾಮಗ್ರಿಗಳನ್ನ ಚರಂಡಿ ಮೇಲೆ ಹಾಕಿರುವ ಹಿನ್ನೆಲೆಯಲ್ಲಿ ಗಲಾಟೆಯಾಗಿದ್ದು, ಮಳೆ ಬಂದ ಮೇಲೆ ನೀರು ಸಂಪೂರ್ಣ ಮನೆ ಮುಂದೆ ನಿಂತುಕೊಳ್ಳುತ್ತದೆ ಎಂಬ ಕಾರಣಕ್ಕೆ ಪಕ್ಕದ ಮನೆಯವರು ಗಲಾಟೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆ ಮಾಡಿದ ನವೀನ್, ಜೈ ಕುಮಾರ್ ಮತ್ತು ರಾಜೇಶ್ವರಿ ಪರಾರಿಯಾಗಿದ್ದಾರೆ. ಇನ್ನು ಹಲ್ಲೆಗೊಳಗಾದ ಇಬ್ಬರನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಕ್ಸಿ ಬ್ಲಾಸ್ಟ್ ಪ್ರಕರಣ: ವಿಚ್ಚೇದಿತ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿಯೇ ಅನಾಹುತಕ್ಕೆ ಕಾರಣ
ಮೀನು ಹಿಡಿಯಲು ಹೋಗಿ ನಾಪತ್ತೆ, ಗೆಳೆಯನಿಗೆ ಹಲ್ಲೆ: ಮೀನು ಹಿಡಿಯಲು ಹೋಗಿ ವ್ಯಕ್ತಿಯೋರ್ವ ನಾಪತ್ತೆಯಾದ ಪ್ರಕರಣದಲ್ಲಿ ಜೊತೆಗಿದ್ದವ ನಾಪತ್ತೆಯಾದ ವ್ಯಕ್ತಿಯ ಮನೆಗೆ ಹೋಗಿ ತಿಳಿಸಿ ಬಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಾ ಕುಳಿತ ಕಾರಣಕ್ಕೆ ಗುಂಪೊಂದು ಆತನನ್ನು ಹಿಡಿದು ತಂದು ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ನಾಪತ್ತೆಯಾದ ವ್ಯಕ್ತಿಯನ್ನು ಮೊಗ್ರು ಗ್ರಾಮದ ದಂಡುಗ ಮನೆ ನಿವಾಸಿ ಜನಾರ್ದನ (42) ಎಂದು ಗುರುತಿಸಲಾಗಿದೆ.
ಅವರು ತನ್ನ ಸ್ನೇಹಿತ ಪದ್ಮುಂಜ ಗ್ರಾಮದ ಚಂದಪ್ಪ ಪೂಜಾರಿ ಎಂಬವರ ಮಗ ಮಹೇಶ್ ಎಂಬವರ ಜತೆ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ಬಲೆ ಹಾಕಿ ಮೀನು ಹಿಡಿಯಲು ನೀರಿಗಿಳಿದಿದ್ದರು. ನೀರಿಗಿಳಿದ ಸ್ಥಳವು ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಸ್ಥಳವಾಗಿದ್ದರಿಂದ ಕೆಸರು ತುಂಬಿ ಅಪಾಯಕಾರಿಯಾಗಿತ್ತು. ಮೊದಲು ನೀರಿಗಿಳಿದಿದ್ದ ಜನಾರ್ದನ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆಂದು ತಿಳಿದ ಮಹೇಶ್, ರಕ್ಷಣೆಗೆ ಸ್ಥಳೀಯರ ಸಹಕಾರ ಪಡೆಯದೇ ನೇರವಾಗಿ ಜನಾರ್ದನ್ ಮನೆಗೆ ಹೋಗಿ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಗಿದ್ದಾರೆಂದು ತಿಳಿಸಿದ್ದರೆನ್ನಲಾಗಿದೆ.
ಶಿವಮೊಗ್ಗ ಗ್ರಾಮಾಂತರದಲ್ಲಿ ಚುನಾವಣಾ ಕಾವು: ರಾರಾಜಿಸುತ್ತಿವೆ ಆಕಾಂಕ್ಷಿಗಳ ಫ್ಲೆಕ್ಸ್‌ಗಳು
ಮಾತ್ರವಲ್ಲದೆ ಬಾರ್‌ಗೆ ಹೋಗಿ ಮದ್ಯ ಸೇವಿಸಿ ಘಟನೆಯ ಬಗ್ಗೆ ವಿವರಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಜನಾರ್ದನ್ ಸಂಬಂಧಿಕರು ಹಾಗೂ ಗೆಳೆಯರ ಬಳಗ ಬಾರಿನಲ್ಲಿದ್ದ ಮಹೇಶ್‌ನನ್ನು ಹಿಡಿದು ಘಟನಾ ಸ್ಥಳಕ್ಕೆ ಕರೆ ತಂದು ಜನಾರ್ದನ್ ಮುಳುಗಿದ್ದ ಸ್ಥಳವನ್ನು ತೋರಿಸಲು ತಾಕೀತು ಮಾಡಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.