Hassan: ಮಿಕ್ಸಿ ಬ್ಲಾಸ್ಟ್ ಪ್ರಕರಣ: ವಿಚ್ಚೇದಿತ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿಯೇ ಅನಾಹುತಕ್ಕೆ ಕಾರಣ

By Govindaraj SFirst Published Dec 28, 2022, 10:04 AM IST
Highlights

ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್‌ನಲ್ಲಿ ನಡೆದಿದ್ದ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಉಗ್ರಗಾಮಿ ಕೃತ್ಯ ಅಲ್ಲ,ಪಾಗಲ್ ಪ್ರೇಮಿ ಕೃತ್ಯ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. 

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ (ಡಿ.28): ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್‌ನಲ್ಲಿ ನಡೆದಿದ್ದ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಉಗ್ರಗಾಮಿ ಕೃತ್ಯ ಅಲ್ಲ,ಪಾಗಲ್ ಪ್ರೇಮಿ ಕೃತ್ಯ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಇದು ವಿವಾಹವಾಗಲು ಒಂದಾಗಿದ್ದ ಜೋಡಿಯ ಆಸೆ- ಮೋಸದಾಟದ ಸ್ಟೋರಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಹಾಸನದ ಮಹಿಳೆ ವಸಂತಾ ವಿವಾಹ ವಿಚ್ಚೇದನ ನಂತರ ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಪ್‌ಲೋಡ್ ಮಾಡಿದ್ದಳು. ಮಹಿಳೆಯ ಚೆಂದಕ್ಕೆ ಮಾರುಹೋದ ಬೆಂಗಳೂರು ಮೂಲದ ಅನೂಪ್ ಮದುವೆ ಪ್ರಸ್ತಾಪ ಮಾಡಿದ್ದನು.

ಅನೂಪ್ ಪ್ರಸ್ತಾಪ ಒಪ್ಪಿಕೊಂಡು ಜೊತೆ ಜೊತೆಯಾಗಿ ಮಹಿಳೆ ಓಡಾಡಿಕೊಂಡಿದ್ದಳು. ಅನೂಪ್‌ಕುಮಾರ್‌ ವಿಶ್ವಾಸ ಗಳಿಸಿದ್ದ ಆತನಿಂದ ಲಕ್ಷಾಂತರ ರೂ ಹಣವನ್ನು ಪಡೆದಿದ್ದಳು. ಇತ್ತೀಚೆಗೆ ಪ್ರಿಯಕರ ಅನೂಪ್ ಕೊಟ್ಟ ಹಣ ವಾಪಸ್ಸೂ ನೀಡದೆ, ಮದುವೆಯು ಆಗದೆ ಕಡೆಗೆ ಆತನಿಂದ ಅಂತರವನ್ನು ಮಹಿಳೆ ಕಾಯ್ದುಕೊಂಡಿದ್ದಳು. ಇದರಿಂದ ತೀವ್ರ ನಿರಾಸೆಗೆ ಒಳಗಾಗಿ ಮದುವೆಯಾಗಬೇಕು ಇಲ್ಲವೇ ಹಣ ವಾಪಾಸ್ ನೀಡಬೇಕು ಎಂದು ಅನೂಪ್ ಬೆನ್ನು ಬಿದ್ದಿದ್ದನು. ಇದರ ನಡುವೆ ಒಂದೆರಡು ಬಾರಿ ಹಾಸನಕ್ಕೆ ಬಂದು ಮಹಿಳೆಯ ಮನೆ ಎದುರು ಗಲಾಟೆ ಸಹ ಮಾಡಿದ್ದನು. 

ಹಾಸನ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್, ಮಾಲೀಕನಿಗೆ ಗಂಭೀರ ಗಾಯ

ಪ್ರಿಯಕರ ಅನೂಪ್ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ವಸಂತಾ ದೂರು ನೀಡಿದ್ದಳು. ತನಗೆ ಮೋಸ ಮಾಡಿದಳೆಂದು ಮಹಿಳೆ ವಿರುದ್ದ ಕೆರಳಿದ ಪ್ರಿಯಕರ ಅನೂಪ್ ಆಕೆಯನ್ನು ಮುಗಿಸೋಕೆ ಖತರ್ನಾಕ್ ಪ್ಲಾನ್ ಮಾಡಿದ್ದನು. ಮೊದಲು ಸೀರೆ, ನಂತರ ಸೀರಿಯಲ್ ಸೆಟ್ ಪಾರ್ಸೆಲ್ ಕಳುಹಿಸಿದ್ದನು. ಸೀರೆಯನ್ನು ವಾಪಾಸ್ ಕಳುಹಿಸಿ ಪ್ರಿಯಕರ ಅನೂಪ್‌ನನ್ನು ನಿಂದಿಸಿದ್ದಳು. ಆದರೆ ಮೂರನೇ ಬಾರಿಗೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ ಅನೂಪ್, ತನಗೆ ಮೋಸ ಮಾಡಿದವಳ ಮುಖ ವಿಕಾರವಾಗಬೇಕು ಇಲ್ಲಾ ಆಕೆ ಸಾಯಬೇಕು ಎಂದು ಡಿಟಿಡಿಸಿ ಕೊರಿಯರ್ ಮೂಲಕ ಮಿಕ್ಸಿ ಪಾರ್ಸೆಲ್ ಕಳುಹಿಸಿದ್ದನು. 

ಕೊರಿಯರ್ ಮೂಲಕ ಬಂದ ಮಿಕ್ಸಿಯನ್ನು ಡಿಸೆಂಬರ್ 17 ರಂದೇ ಕೊರಿಯರ್ ಸೆಂಟರ್ ಮಾಲೀಕ ಶಶಿ ಡಿಲವೆರಿ ಮಾಡಿಸಿದ್ದನು. ಮೂರನೇ ಸಲ ಕಳುಹಿಸಿದ್ದ ಪಾರ್ಸಲ್ ಬಿಚ್ಚಿ ನೋಡಿ ಅದು ಮಿಕ್ಸಿ ಎಂದು ಗೊತ್ತಾಗಿ ಆತನ ವಸ್ತು ತನಗೆ ಬೇಡಾ ಎಂದು ಹಿಂದಿರುಗಿಸಲು ನಿರ್ಧರಿಸಿ, ಡಿಸೆಂಬರ್ 26ರಂದು ಮಿಕ್ಸಿ ವಾಪಸ್ ಕಳಿಸುವಂತೆ ಕೊರಿಯರ್ ಅಂಗಡಿಗೆ ಕೊಟ್ಟಿದ್ದಳು. ಕೊರಿಯರ್ ಮಾಡಿದವರ ಪೂರ್ಣ ವಿಳಾಸ ಇಲ್ಲದ ಕಾರಣ ಅದನ್ನ ವಾಪಸ್ ಕಳಿಸಲು 350 ಶುಲ್ಕವನ್ನು ಕೊರಿಯರ್ ಸೆಂಟರ್‌ ಮಾಲೀಕ ಶಶಿ ಕೇಳಿದ್ದಾನೆ. ಇಷ್ಟು ಹಣ ನನ್ನ ಬಳಿಯಿಲ್ಲ ಮಿಕ್ಸಿಯನ್ನು ಏನಾದರೂ ಮಾಡಿಕೊಳ್ಳಿ ಎಂದು ಹೇಳಿ ಮಿಕ್ಸಿ ನೀಡಿ ಅಲ್ಲಿಂದ ಹೋಗಿದ್ದಳು. 

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಗೆಲುವು ನನ್ನದೇ: ವರ್ತೂರು ಪ್ರಕಾಶ್‌

ಮಿಕ್ಸಿ ವಾಪಸ್ ‌ಕಳಿಸಲು ಸೂಕ್ತ ವಿಳಾಸ ಇಲ್ಲದ ಕಾರಣ ಅದನ್ನ ಬಿಚ್ಚಿ ಕೊರಿಯರ್ ಶಾಪ್ ಮಾಲೀಕ ಶಶಿ ಪರಿಶೀಲಿಸಲು ಮುಂದಾಗಿದ್ದನು. ಈ ವೇಳೆ ಸ್ಪೋಟಕ ಇಟ್ಟಿದ್ದ ಮಿಕ್ಸಿ ಸ್ಪೋಟಗೊಂಡು ತೀವ್ರವಾಗಿ ಅಮಾಯಕ ಶಶಿ ಗಾಯಗೊಂಡಿದ್ದನು. ಮಿಕ್ಸಿ ಸ್ಪೋಟದ ಬಳಿಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಎಫ್‌ಎಸ್‌ಎಲ್ ತಂಡ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಸಹ ಸ್ಯಾಂಪಲ್ ಕಲೆಕ್ಟ್ ಪರಿಶೀಲನೆ ನಡೆಸಿತ್ತು. ಹಾಸನ ಎಸ್ಪಿ ಹರಿರಾಂ ಶಂಕರ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣದ ಅಸಲಿಯತ್ತು ಬಯಲು ಮಾಡಿದ್ದಾರೆ. ಕೊರಿಯರ್ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರೇಮಿ ಮತ್ತು ಪ್ರಿಯತಮೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!