ಪಕ್ಕದೂರಿನವನ ಜತೆ ಹೆಂಡತಿ ಚಕ್ಕಂದ; ಬೇಸತ್ತು ಗಂಡ ನೇಣಿಗೆ ಶರಣು

By Ravi Nayak  |  First Published Jul 26, 2022, 2:48 PM IST

ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಗಂಡ ನೇಣಿಗೆ ಶರಣಾದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಮೊದಲು ರೈತನ ಆತ್ಮಹತ್ಯೆವೆಂದು ನಂಬಿಸಲಾಗಿತ್ತು ಬಳಿಕ ಅನೈತಿಕ ಸಂಬಂಧದ ಪ್ರಕರಣ ಬೆಳಕಿಗೆ ಬಂದಿದೆ.


ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಜು.26): ಬೆಳಂಬೆಳಗ್ಗೆ ಜಾಲಿಗಿಡಕ್ಕೆ ಶವವೊಂದು ನೇತಾಡ್ತಿತ್ತು. ಶವ ನೋಡಿದವರೆಲ್ಲ ಸಾಲದ ಬಾಧೆಗೋ ಬಡತನಕ್ಕೋ ರೈತ ಆತ್ಮಹತ್ಯೆ ಮಾಡಿಕೊಂಡಿರಬಹುದು  ಅಂದ್ಕೊಂಡಿದ್ರು.  ಸ್ವತಃ ಶವವಾಗಿ ನೇತಾಡ್ತಿದ್ದವನ ಪತ್ನಿಯೇ  ಊರವರಿಗೆ ಹೀಗೆ ಸುದ್ದಿ ಮುಟ್ಟಿಸಿದ್ದಾಳೆ. ಆದರೆ ಆದರೆ ಸಂಜೆ ಹೊತ್ತಿಗೆ ಅವನ ಸಾವಿಗೆ ಟ್ಬಿಸ್ಟ್ ಸಿಕ್ಕಿತ್ತು‌. ನೇಣು ಬಿಗಿದು ಸತ್ತವನು ಸಾಲಬಾಧೆಯಿಂದ ಅಲ್ಲ. ಅವನ ಪತ್ನಿಯ ಅನೈತಿಕ ಸಂಬಂಧವೇ ಕಾರಣ ಅನ್ನೋದ ಬಟಾ ಬಯಲಾಗಿದೆ.

Tap to resize

Latest Videos

undefined

ಪತ್ನಿ ಇನ್ನೊಬ್ಬನಿಗೆ ಮುತ್ತಿಟ್ಟರೂ ಪ್ರಶ್ನಿಸದ ಪತಿ

ಕೊಪ್ಪಳ ಜಿಲ್ಲೆ ಇದು ಬಿಸಿಲು ಹಾಗೂ ಬರಕ್ಕೆ ಹೆಸರುವಾಸಿಯಾದ ಜಿಲ್ಲೆ.‌ಆದರೆ ಈ ಜಿಲ್ಲೆಯಲ್ಲಿ ಆಗೊಂದು ಈಗೊಂದು ಅಪರಾಧ ಪ್ರಕರಣಗಳು  ಅನೈತಿಕಿ ಸಂಬಂಧಗಳು ದೊಡ್ಡು ಸುದ್ದಿಯಾಗುತ್ತವೆ. ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರೋದಿಲ್ಲ. ‌ ಈ ಬಾರಿ ಅಪರಾಧ ಜರುಗಿರುವುದು ಕೊಪ್ಪಳ ತಾಲೂಕಿನ ಚಿಕ್ಕಸಿಂದೋಗಿ ಗ್ರಾಮದಲ್ಲಿ. 

ಏನಿದು ಪ್ರಕರಣ?:
ಮೂರು ದಿನಗಳ ಹಿಂದೆ ಬೇಳೂರು ಗ್ರಾಮದಲ್ಲಿ ಧನಗುಂಡಯ್ಯ ಎನ್ನುವ ರೈತನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ರೈತ ಆತ್ಮಹತ್ಯೆ ಅಂತಾ  ಸಾವಿನ ಸುದ್ದಿ  ಹರಡಿತ್ತು. ಆದ್ರೆ ಸಂಜೆ ಧನಗುಂಡಯ್ಯ ಸಾವಿಗೆ ಅಸಲಿ ಕಾರಣ ಬಯಲಾಗಿದೆ. ಧನಗುಂಡಯ್ಯ ಆತನ ಪತ್ನಿಯ ಅನೈತಿಕ ಸಂಬಧವೇ ಕಾರಣವಾಗಿದೆ.  ಹೌದು, ಧನಗುಂಡಯ್ಯ ಪತ್ನಿ ಗವಿಸಿದ್ದಮ್ಮ,ಕಳೆದ ಐದಾರು ವರ್ಷಗಳಿಂದ ಬೇಳೂರ ಗ್ರಾಮದ ವೀರಯ್ಯ ಜೊತೆ ಅನೈತಿಕ ಸಂಬಂಧ ಹೊಂದಿದ್ಲು.ಈ ವಿಷಯ ಗಂಡ ಧನಗುಂಡಯ್ಯನಿಗೆ ಗೊತ್ತಾಗಿತ್ತು.  ವೀರಯ್ಯ ಮನೆಗೆ ಹೋಗೋದು ಬರೋದು ಮಾಡ್ತಿದ್ದ. ಎಷ್ಟ ಹೇಳಿದ್ರೂ ,ಹೆಂಡತಿ ಗವಿ ಸಿದ್ದಮ್ಮ ಗಂಡನ ಮಾತು ಕೇಳಿರಲಿಲ್ಲ. ಗಂಡನಿಗೆ ನಿತ್ಯ ಕಿರುಕುಳ ಕೊಡೋದು ಹೊಡೆಯೋದು ಮಾಡ್ತಿದ್ಲಂತೆ.ಕಳೆದ ಎರಡು ದಿನಗಳ ಹಿಂದೆ ವೀರಯ್ಯ ಮನೆಗೆ ಬಂದಿದ್ದಾನೆ‌.ಇದನ್ನು ನೋಡಿದ ಧನಗುಂಡಯ್ಯ ಸಿಟ್ಟಾಗಿದ್ದಾನೆ. ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಆಗ ಹೆಂಡತಿ ಗವಿಸಿದ್ದಮ್ಮ ನೀ ಇರಬೇಡ ಸಾಯಿ ಎಂದಿದ್ಲಂತೆ.ಅಲ್ದೆ ವೀರಯ್ಯ ಕೂಡಾ ಧನಗುಂಡಯ್ಯನ್ನ ಬೈದಿದ್ಲಂತೆ, ಹೀಗಾಗಿ ಧನಗುಂಡಯ್ಯ ಮಾನಸಿಕವಾಗಿ ನೊಂದು ಜಾಲಿ ಗಿಡಕ್ಕೆ ನೇಣು ಬಿಗಿದುಕೊಂಡಿದ್ದಾನೆ. 

ಮತ್ತೊಬ್ಬನೊಂದಿಗೆ ಚಕ್ಕಂದ: ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿಯನ್ನು ಕೊಂದ ಗಂಡ

  ಧನಗುಂಡಯ್ಯ ಮೂಲತಃ ಕೊಪ್ಪಳ ತಾಲೂಕಿನ ಚಿಕ್ಕಸಿಂದೋಗಿ ನಿವಾಸಿ. ಊರಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದ ಇಬ್ಬರು ಮಕ್ಕಳು ಹೆಂಡತಿ ಸಣ್ಣ ಮನೆಯಲ್ಲಿ ವಾಸ ಮಾಡ್ತಿದ್ರು .ಆದ್ರೆ ಹೆಂಡತಿ ಹಾದಿ ಬಿಟ್ಟು ಬಹಳ ವರ್ಷಗಳೇ ಕಳೆದಿತ್ತಂತೆ. ಪಕ್ಕದ ಊರಿನ ವೀರಯ್ಯ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದು ,ಮೊದಲು ಗುಟ್ಟಾಗಿತ್ತು. ನಂತರ ರಟ್ಟಾಗಿ,ವೀರಯ್ಯ ಮನೆಗೆ ಬರೋಕೆ ಶುರುಮಾಡಿದ್ದ. ಇನ್ನು ಧನಗುಂಡಯ್ಯನ ಹೆಂಡತಿ ಗವಿ ಸಿದ್ದಮ್ಮ ಇದನ್ನು ರೈತ ಆತ್ಮಹತ್ಯೆ ಎಂದು ಬಿಂಬಿಸಿದ್ಲು. ಆದರೆ ಧನಗುಂಡಯ್ಯ ಸಹೋದರ, ತಮ್ಮನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ,ಅಸಲಿ ಕಹಾನಿ ಬಯಲಾಗಿದೆ.  ಮೊದಲಿಂದಲೂ ಅನೈತಿಕ ಸಂಬಂಧಕ್ಕೆ ವಿರೋಧ ಮಾಡಿದ್ದ ಧನಗುಂಡಯ್ಯ

ಇನ್ನು ವೀರಯ್ಯ ಆಗಾಗ ಬಂದು ಹೋಗ್ತಿದ್ದ.ಇದು ಅಕ್ಕ ಪಕ್ಕದ ಮನೆಯವರಿಗೂ ಕಿರಿಕಿರಿಯಾಗಿತ್ತು. ಈ ಬಗ್ಗೆ ಗ್ರಾಮದವರು ತಿಳಿ ಹೇಳಿದ್ರು. ಧನಗುಂಡಯ್ಯ ಹಿರಿಯರನ್ನ ಕರೆಸಿ ಹೆಂಡತಿಗೆ ಬುದ್ದಿ ಹೇಳಿದ್ರು,ಗವಿ ಸಿದ್ದಮ್ಮ ತನ್ಮ ಚಾಳಿ ಬಿಟ್ಟಿರಲಿಲ್ಲ.ಕೆಲ ಸಲ ಇಬ್ಬರು ಕೂಡಿ ಧನಗುಂಡಯ್ಯನ ಮೇಲೆ ಹಲ್ಲೆ ಮಾಡಿದ್ದಾರಂತೆ.  ಗಂಡನಿಗೆ ನೀ ಮನೆ ಬಿಟ್ಟು ಹೋಗು ಅಂತಾ ಹೆಂಡತಿ ಪೀಡಿಸುತ್ತಿದ್ಲಂತೆ. ಹೀಗಿದ್ದಾಗ ಕಳೆದ ಎರಡು ದಿನಗಳ ಹಿಂದೆ ವೀರಯ್ಯನ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಗಲಾಟೆ ಮಾಡಿರೋದೆ ಧನಗುಂಡಯ್ಯ ಸಾವಿಗೆ ಕಾರಣವಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ:

ಗವಿಸಿದ್ದಮ್ಮ ಹಾಗೂ ವೀರಯ್ಯನನ್ನ ವಶಕ್ಕೆ ಪಡೆದ ವಿಚಾರಣೆ ಮಾಡಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.ಸದ್ಯ ಇಬ್ಬರೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜೈಲು ಸೇರಿದ್ದಾರೆ. ಒಟ್ಟಾರೆ ಗಂಡ ಇದ್ರೂ ಇನಿಯನಿಗಾಗಿ ಗಂಡನೇ ಸಾಯಿ ಎಂದ ಹೆಂಡತಿ ಇದೀಗ ಜೈಲು ಪಾಲಾಗಿದ್ದಾಳೆ.ಅವಳ ಜೊತೆ ಪ್ರೀಯಕರನೂ ಜೈಲು ಸೇರಿದ್ದು,ರೈತ ಆತ್ಮಹತ್ಯೆ ಎಂದು ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

click me!