ಅಳಿಯನ ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಕುಟುಂಬಕ್ಕೆ ಮೃತ್ಯುವಾದ ಲಾರಿ

Published : Aug 04, 2020, 04:59 PM ISTUpdated : Aug 04, 2020, 05:02 PM IST
ಅಳಿಯನ ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಕುಟುಂಬಕ್ಕೆ ಮೃತ್ಯುವಾದ ಲಾರಿ

ಸಾರಾಂಶ

ಕ್ರೇನ್ ಅಪಘಾತದಲ್ಲಿ ಮೃತಪಟ್ಟ ಅಳಿಯನ ಅಂತಿಮ ಸಂಸ್ಕಾರಕ್ಕೆ ತೆರಳುತ್ತಿದ್ದ ಕುಟುಂಬ/ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ/ ಸ್ಥಳದಲ್ಲೇ ಮೂವರ ಸಾವು/ ಇನ್ನುಳಿದವರ ಸ್ಥಿತಿ ಗಂಭೀರ

ವಿಶಾಖಪಟ್ಟಣಂ(ಆ.04): ವಿಶಾಖಪಟ್ಟಣದಲ್ಲಿ  ಕ್ರೇನ್ ಕುಸಿದು ಬಿದ್ದ ಪರಿಣಾಮ ಸಾವು ನೋವುಗಳು ಸಂಭವಿಸಿತ್ತು.  ದುರ್ಘಟನೆಯಲ್ಲಿ ಸಾವನ್ನಪ್ಪಿದ್ದ ವ್ಯಕ್ತಿ ಅಂತ್ಯ ಸಂಸ್ಕಾರಕ್ಕೆಂದು   ತೆರಳುತ್ತಿದ್ದವರು ಮಸಣ ಸೇರಿದ್ದಾರೆ.

ಶನಿವಾರ ವಿಶಾಖಪಟ್ಟಣದಲ್ಲಿ ಹಿಂದೂಸ್ಥಾನ್ ಶಿಪ್ಯಾರ್ಡ್ ಲಿಮಿಟೆಡ್ ಗೆ ಸೇರಿದ ಕ್ರೇನ್ ಕುಸಿದು  ಹತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಕಾರಿನಲ್ಲಿ ತೆರಳುತ್ತಿದ್ದವರು ಮತ್ತು ಟ್ರಕ್ ನಡುವೆ ಘೋರ ಅಪಘಾತ ಸಂಭವಿಸಿದೆ. ಆಂಧ್ರದ ಶ್ರಿಕಕುಲಂ ಜಿಲ್ಲೆಯಲ್ಲಿ  ವೇಗವಾಗಿ ಸಂಚರಿಸುತ್ತಿದ್ದ ಕಾರು ಲಾರಿಗೆ  ಹಿಂದಿನಿಂದ ಡಿಕ್ಕಿಯಾಗಿದೆ.

ಏಕಾಏಕಿ ಕುಸಿದು ಬಿದ್ದ ಕ್ರೇನ್, ದಾರುಣ ಅಪಘಾತ

ಕ್ರೇನ್ ಅಪಘಾತದಲ್ಲಿ ಮೃತಪಟ್ಟ ಅಳಿಯ ಭಾಸ್ಕರ್ ರಾವ್ ಅಂತಿಮ ವಿಧಿ ವಿಧಾನಕ್ಕೆ ತೆರಳುತ್ತಿದ್ದ ಅತ್ತೆ ನಾಗಮಣಿ(48) ಸೊಸೆ ಲಾವಣ್ಯ(23)  ಮತ್ತು ಚಾಲಕ ರೋತು ದ್ವಾರಕಾ(23)  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಲಾರಿಗೆ ಕಾರು ಹಿಂದಿನಿಂದ ಗುದ್ದಿದೆ.  ನಾಗಮಣಿಯ ಮಕ್ಕಳು ಮತ್ತು ಇನ್ನೊಬ್ಬ ಸೊಸೆ ಗಂಭೀರ ಗಾಯಗೊಂಡಿದ್ದಾರೆ.  ಪಶ್ಚಿಮ ಬಂಗಾಳದ ಖರ್ಗಾಪುರದಿಂದ ಕುಟುಂಬ ವಿಶಾಖಪಟ್ಟಣಕ್ಕೆ ತೆರಳುತ್ತಿತ್ತು.  ಕ್ರೇನ್ ಅಪಘಾತದಲ್ಲಿ ಮೃತರಾದ ಭಾಸ್ಕರ್ ರಾವ್ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.  ಕ್ರೇನ್ ಅಪಘಾತದ ತನಿಖೆ ನಡೆಯುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!