ಆಸ್ತಿ ವಿವಾದ: ನಡುರಸ್ತೆಯಲ್ಲೇ ಕುಟುಂಬದ ಮೇಲೆ ದೊಣ್ಣೆಯಿಂದ ಹಲ್ಲೆ

Suvarna News   | Asianet News
Published : Feb 13, 2022, 02:53 PM IST
ಆಸ್ತಿ ವಿವಾದ: ನಡುರಸ್ತೆಯಲ್ಲೇ ಕುಟುಂಬದ ಮೇಲೆ ದೊಣ್ಣೆಯಿಂದ ಹಲ್ಲೆ

ಸಾರಾಂಶ

ಸಂಬಂಧಿಕರಿಂದಲೇ  ಕುಟುಂಬದ ಮೇಲೆ ದೊಣ್ಣೆಯಿಂದ ಹಲ್ಲೆ ಆಸ್ತಿ ವಿವಾದದ ಹಿನ್ನೆಲೆ ನಡುರಸ್ತೆಯಲ್ಲಿ ಹಲ್ಲೆ ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್

ನವದೆಹಲಿ(ಫೆ.13): ದೆಹಲಿಯ ಉಸ್ಮಾನ್‌ಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಕುಟುಂಬಸ್ಥರ ಮೇಲೆಯೇ ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಈಶಾನ್ಯ ದಿಲ್ಲಿಯ ನ್ಯೂ ಉಸ್ಮಾನ್‌ಪುರ (New Usmanpur) ಪ್ರದೇಶದಲ್ಲಿ ಶುಕ್ರವಾರ ಸಂಜೆ(ಫೆ.11) ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪುರುಷರ ಗುಂಪೊಂದು ಅವರ ಸಂಬಂಧಿಕರ ಮೇಲೆ ಕೋಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಹಾಡಹಗಲೇ ನಡುರಸ್ತೆಯಲ್ಲೇ ಥಳಿಸುತ್ತಿರುವ ಘಟನೆಯ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಗಲಭೆಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸ್‌ ಠಾಣೆಗೆ ಬಂದ ಕರೆ ಸ್ವೀಕರಿಸಿದ ನಂತರ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಕೆಲ ಪುರುಷರಿಗೆ ಗುಂಪೊಂದು ಅಮಾನುಷವಾಗಿ ಥಳಿಸಿರುವುದು ಬೆಳಕಿಗೆ ಬಂದಿದೆ.. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಗಾಯಾಳುಗಳನ್ನು ಜೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು 62 ವರ್ಷದ ಜಗತ್ (Jagat), 41 ವರ್ಷದ ಹರೇಂದರ್ (Harender), 29 ವರ್ಷದ ಸುಮಿತ್ (Sumit) ಮತ್ತು 24 ವರ್ಷದ ಅಮಿತ್ (Amit) ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ಇಲ್ಲಿಯವರೆಗೆ ಜಗತ್‌ ಎಂಬಾತನನ್ನು ಮಾತ್ರ ಬಂಧಿಸಿದ್ದಾರೆ. ತನಿಖೆ ವೇಳೆ ಜಗತ್ ಹಾಗೂ ಆತನ ಮಕ್ಕಳು ಹಾಗೂ  ಶ್ಯಾಮ್ ಎಂಬುವರು ನಡುವೆ ಮಾರಾಮಾರಿ ನಡೆದಿರುವುದು ಬೆಳಕಿಗೆ ಬಂದಿದೆ.

Raichur: ಜಮೀನು ಖರೀದಿ ವಿಚಾರಕ್ಕೆ ಕಿರಿಕ್‌: 2 ಗುಂಪುಗಳ ಮಧ್ಯೆ ಹೊಡೆದಾಟ..!

ಈ ಪ್ರದೇಶದಲ್ಲಿ ಎಲ್ಲರೂ ಭಯಪಡುವಂತೆ ಮಾಡಲು, ಆರೋಪಿ ಜಗತ್, ವಕೀಲರು ಮತ್ತು ಬಿಜೆಪಿಯ ನಕಲಿ ಬೋರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ. ಈ ವಿಷಯವನ್ನು ಬಿಜೆಪಿ ಸಿಬ್ಬಂದಿ ಮತ್ತು ಬಾರ್ ಕೌನ್ಸಿಲ್‌ಗೆ ಕೊಂಡೊಯ್ಯಲಾಗುವುದು ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಸಂಜಯ್ ಸೈನ್ (Sanjay Sain) ಅವರು ಹೇಳಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯಸೆಕ್ಷನ್ 147 (ಗಲಭೆಗೆ ಶಿಕ್ಷೆ), ಸೆಕ್ಷನ್‌ 148 (ಗಲಭೆ, ಮಾರಣಾಂತಿಕ ಆಯುಧಗಳ ಬಳಕೆ), ಸೆಕ್ಷನ್‌ 307 (ಕೊಲೆಗೆ ಯತ್ನ), ಸೆಕ್ಷನ್‌ 308 ( ನರಹತ್ಯೆಗೆ ಯತ್ನ) ಮತ್ತು ಸೆಕ್ಷನ್‌ 34 ರ ಅಡಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. 

ಅಪ್ರಾಪ್ತೆ ಮದುವೆ ಮಾಡಿಕೊಡುವಂತೆ ರಂಪಾಟ: ಲಾಂಗ್‌ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ ಭೂಪ

ಡಿಸಿಪಿ ಪ್ರಕಾರ, ಇದುವರೆಗೆ ನಡೆಸಿದ ತನಿಖೆಯಲ್ಲಿ, ಎರಡೂ ಕಡೆಯವರು ಹಳೆಯ ಆಸ್ತಿ ವಿವಾದಗಳನ್ನು ಹೊಂದಿದ್ದು, ಈ ಹಿಂದೆಯೂ ಈ ಬಗ್ಗೆ ಅಡ್ಡ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅವರು ಶಾಂತಿಯನ್ನು ಕಾಪಾಡಲು ಬದ್ಧರಾಗಿದ್ದರು ಆದರೆ ಆರೋಪಿಗಳು ಈ ಪ್ರದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!