Woman Commits Suicide : 'ಕಂಪ್ಲೆಂಟ್ ಇದೆ, ಇತ್ಯರ್ಥ ಮಾಡಿಕೊಳ್ಳಿ'  ನಕಲಿ ಪೊಲೀಸ್ ಕರೆಗೆ ಪ್ರಾಣ ಕಳೆದುಕೊಂಡಳು!

Published : Dec 16, 2021, 09:38 PM IST
Woman Commits Suicide : 'ಕಂಪ್ಲೆಂಟ್ ಇದೆ, ಇತ್ಯರ್ಥ ಮಾಡಿಕೊಳ್ಳಿ'  ನಕಲಿ ಪೊಲೀಸ್ ಕರೆಗೆ ಪ್ರಾಣ ಕಳೆದುಕೊಂಡಳು!

ಸಾರಾಂಶ

* ಪೊಲೀಸರು ಅಂತೇಳಿ ಕರೆಮಾಡಿದ್ದಕ್ಕೆ  ಯುವತಿ ನೇಣಿಗೆ ಶರಣು..! * ಬೆಂಗಳೂರಿನ ಪೀಣ್ಯದ ಮುನೇಶ್ವರನಗರದಲ್ಲಿ ಘಟನೆ  * ಸಾಕ್ಷಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಯುವತಿ  * ಹರೀಶ್ ಸ್ನೇಹಿತ ಗೋಪಾಲ್ , ಪೊಲೀಸ್ರು ಅಂತೇಳಿ ಕರೆ ಮಾಡಿದ್ದ 

ಬೆಂಗಳೂರು(ಡಿ. 16)  ಇದೊಂದು ಘೋರ ಪ್ರಕರಣ.  ಪೊಲೀಸರು  ಅಂತ  ಹೇಳಿಕೊಂಡು ಕರೆ ಮಾಡಿದ್ದಕ್ಕೆ ಭಯಗೊಂಡ ಯುವತಿ ನೇಣಿಗೆ ಶರಣಾಗಿದ್ದಾಳೆ.  ಬೆಂಗಳೂರಿನ ಪೀಣ್ಯದ ಮುನೇಶ್ವರನಗರದಲ್ಲಿ ಘಟನೆ  ನಡೆದಿದೆ.

ಸಾಕ್ಷಿ(24) ನೇಣು ಬಿಗಿದುಕೊಂಡು ಸಾವನ್ನಪ್ಪಿದ ಯುವತಿ. ಸಾಕ್ಷಿ ಹಾಗು ಹರೀಶ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  ಇತ್ತೀಚೆಗೆ ಇಬ್ಬರ ನಡುವೆ ವೈ ಮನಸ್ಸು ಉಂಟಾಗಿ ದೂರವಾಗಿದ್ದರು.  ಈ ನಡುವೆ ಹರೀಶ್ ಸ್ನೇಹಿತ ಗೋಪಾಲ್  ನಾವು ಪೊಲೀಸರು ಎಂದು ಹೇಳಿಕೊಂಡು ಯುವತಿಗೆ ಕರೆ ಮಾಡಿದ್ದಾರೆ.

ಯುವತಿಗೆ ಕರೆ ಮಾಡಿ ಅದೇನು ಬಗೆಹರಿಸಿಕೊಳ್ಳಿ, ಕಂಪ್ಲೆಂಟ್ ಬಂದಿದ್ದು ಇತ್ಯರ್ಥ ಮಾಡಿಕೊಳ್ಳಿ. ಇಲ್ಲವೇ ಕೇಸು ದಾಖಲಾಗುತ್ತದೆ ಎಂದು ಭಯ ಬೀಳಿಸಿದ್ದ. ಇದರಿಂದ ಬೇಸತ್ತ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.  ಪೀಣ್ಯ ಪೊಲೀಸರು ಯುವತಿಯ ಲವರ್ ಎನಿಸಿಕೊಂಡಿದ್ದ ಅರುಣ್ ಮತ್ತು ಕರೆ ಮಾಡಿದ್ದ ಗೋಪಾಲ್ ನನ್ನು ಬಂಧಿಸಿದ್ದಾರೆ. 

Asianet Suvarna FIR : ಧಾರವಾಡದ ಹೆಣ್ಣು ಪ್ರಿಯಕರನ ತೆಕ್ಕೆ ಸೇರಲು ಗಂಡನ ಕೊಂದು ಮುಗಿಸಿದ್ದಳು!

 ಪ್ರೇಯಸಿ (Lover)ಕೈಕೊಟ್ಟ ಕಾರಣಕ್ಕೆ ಯುವಕನೊಬ್ಬ ಯುವತಿ ಮನೆ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ (Suicide)ಯತ್ನಿಸಿದ್ದಾನೆ.  ಹೊಸನಗರ(Hosnagar) ತಾಲೂಕಿನ ಜಯನಗರ ಗ್ರಾಮದಿಂದ ಪ್ರಕರಣ ವರದಿಯಾಗಿತ್ತು.   ಅಸ್ವಸ್ಥಗೊಂಡ ಯುವಕನನ್ನು ಆಸ್ಪತ್ರೆಗೆ(Shivamogga) ದಾಖಲಿಸಲಾಗಿತ್ತು.

ಪ್ರೀತಿಸಿದ ಯುವತಿಯ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಹೊಸನಗರ ತಾಲೂಕಿನ ಹೊರಬೈಲು ಗ್ರಾಮದ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.. 

ಕಳೆದ 8 ವರ್ಷದಿಂದ ಯುವತಿ ಪ್ರೀತಿ ಮಾಡುತ್ತಿದ್ದ.  ಯುವಕ  ತನ್ನ ಅಪ್ಪ ಅಮ್ಮನಿಗೆ ಪೀಡಿಸಿ ಇದ್ದ ಜಮೀನನ್ನು ಮಾರಿಸಿದ್ದ.  ಅದರಲ್ಲಿ ಬಂದ 6 ಲಕ್ಷ ಹಣದೊಂದಿಗೆ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ. ತನ್ನ ಬೈಕನ್ನ ತಾನು ಕೆಲಸ ಮಾಡುತ್ತಿದ್ದ ಆಫೀಸಿನ ಎದುರು ನಿಲ್ಲಿಸಿ ,ಮೊಬೈಲ್ ಸ್ವಿಚ್ ಆಫ್ ಮಾಡಿ ಹೊರಟು ಹೋಗಿದ್ದ. ಎಲ್ಲಿ ಹೋದ ಎಂಬ ಹುಡುಕಾಟ ನಡೆಯುತ್ತಿದ್ದಾಗಲೇ ತಾನು ಪ್ರೀತಿಸಿದ ಯುವತಿ ಮನೆ ಮುಂದೆ ಆತ್ಮಹತ್ಯೆ ಯತ್ನ ಮಾಡಿರುವುದು ಗೊತ್ತಾಗಿತ್ತು. ಅಸ್ವಸ್ಥಗೊಂಡಿರುವ ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಶವ ತಬ್ಬಿ ಮಲಗಿದ್ದ:  ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದವ ಕೊನೆಗೆ ಆಕೆಯನ್ನು ಹತ್ಯೆ ಮಾಡಿದ್ದು ಅಲ್ಲದೇ  ಆಕೆಯ ಶವವನ್ನೇ ತಬ್ಬಿ ಮಲಗಿದ್ದ ಪ್ರಕರಣ ಜೈಪುರದಿಂದ ವರದಿಯಾಗಿತ್ತು. 

ಮಹಿಳೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು.    ಶಾಂತಿ ಗಂಡ ಮನೆಯಲ್ಲಿ ಇಲ್ಲದೆ ವೇಳೆ ಅಲ್ಲಿಗೆ ಬಂದ 21 ವರ್ಷದ  ಗಣೇಶ್ ಮೀನಾ ಎಂಬಾತ ನಿನ್ನನ್ನು ಪ್ರೀತಿ ಮಾಡುತ್ತೇನೆ  ಎಂದು ಹೇಳಿದ್ದಾನೆ.

ಈ ಹಿಂದೆಯೂ ಗಣೇಶ್ ಇಂಥದ್ದೇ ಕೆಲಸ ಮಾಡಿಕೊಂಡು ಬಂದಿದ್ದ.  ಸಿಟ್ಟುಗೊಂಡಿದ್ದ ಶಾಂತಿ ದೇವಿ ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ನನಗೆ ಈಗಾಗಲೇ ಮದುವೆ ಆಗಿ ಮಕ್ಕಳಿವೆ ಎಂದಿದ್ದಾರೆ.   ಇದರಿಂದ ಕೋಪಗೊಂಡ ಗಣೇಶ್ ಕೊಡಲಿಯಿಂದ ಮಹಿಳೆ ಮೇಲೆ ಮನಸಿಗೆ ಬಂದ ಹಾಗೆ ಹಲ್ಲೆ ನಡೆಸಿದ್ದ.  ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.

ಪಾಗಲ್ ಪ್ರೇಮಿ ಟೆಕ್ಕಿ; ಪ್ರೀತ್ಸೆ ಪ್ರೀತ್ಸೆ ಅಂತ ಬೆಂಗಳೂರಿನ ನಟಿ ಹಿಂದೆ ಬಿದ್ದ ಟೆಕ್ಕಿಯನ್ನು ಬಂಧಿಸಲಾಗಿತ್ತು.  ಇಷ್ಟ ಇಲ್ಲದೇ ಇದ್ದರೂ ನಟಿಯ ಹಿಂದೆ ಬಿದ್ದು ಒತ್ತಡ ಹಾಕುತ್ತಿದ್ದ. ಕಾಲೇಜು ಓದುತ್ತಾ ಇದ್ದಾಗಿನಿಂದ ಪ್ರೀತಿಸುವಂತೆ ಪೀಡಿಸುತ್ತಾ ಇದ್ದ.

ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು  ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಮನೆ ಬದಲಾಯಿಸಿದ್ದ ಪ್ರಕರಣ ಬೆಂಗಳೂರಿನಿಂದ ವರದಿಯಾಗಿತ್ತು.

ಚಾಕು ಇರಿದಿದ್ದ:  ಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ ನಂತರ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಘಟನೆ ಉಡುಪಿ ಅಂಬಾಗಿಲು ಸಮೀಪದ ಸಂತೆಕಟ್ಟೆಯ ಪೆಟ್ರೋಲ್‌ ಬಂಕ್‌ ಬಳಿ ನಡೆದಿತ್ತು.

ಸೌಮ್ಯಶ್ರೀ ಭಂಡಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದರೆ ಸೌಮ್ಯಳಿಗೆ ಚೂರಿ ಇರಿದು, ತಾನು ಕತ್ತು ಕೊಯಿದುಕೊಂಡ ಸಂದೇಶ್ ಕುಲಾಲ್ ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.  ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿ ಜೋಡಿ ನಡುವೆ ಗೊಂದಲ ಹುಟ್ಟಿಕೊಂಡಿದ್ದು ಯುವತಿ ಸುಸೈಡ್‌ ಗೆ ಶರಣಾಗಿದ್ದಳು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!