* ಅಂಗಡಿ ಅಂಗಡಿಗೆ ಹೋಗಿ ವಸೂಲಿ
* ಅಂಗಡಿಯ ಲೈಸನ್ಸ್ ತೋರಿಸಿ ಎಂದು ಒಬ್ಬೊಬ್ಬರಿಂದ 3000 ದಿಂದ 4 ಸಾವಿರ ಹಣ ದೋಚಿ ಪರಾರಿ
* ನಕಲಿ ಆಫೀಸರ್ ಕಳ್ಳಾಟ ವಿಡಿಯೋ CC TVಯಲ್ಲಿ ಬಯಲು
ಧಾರವಾಡ, (ಜೂನ್.16) : ಆತ ಜಗತ್ ಕಿಲಾಡಿ, ಅಂಗಡಿ ಅಂಗಡಿಗೆ ಹೋಗಿ ನಾನು ಆಫೀಸರ್ ಎಂದು ಅಂಗಡಿಕಾರರಿಂದ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ. ಧಾರವಾಡದ ಕಿರಾಣಿ ಅಂಗಡಿ, ಬೇಕರಿ, ಹೊಟೇಲ್ ಗಳಿಗೆ ಹೋಗಿ ಅಂಗಡಿಯ ಲೈಸನ್ಸ್ ತೋರಿಸಿ ಎಂದು ತಲಾ ಒಬ್ಬರಿಂದ 3000 ದಿಂದ 4 ಸಾವಿರ ವರೆಗೆ ಹಣ ದೊಚುತ್ತಿರುವ ವಿಡಿಯೋ ಸದ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡದ ಸಪ್ತಾಪುರ, ಬಾರಾಕೋಟ್ರಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ನೂರಾರು ವ್ಯಾಪಾರಿಗಳಿಗೆ ಫುಡ್ ಲೈಸನ್ಸ್ ಹೆಸರಿನಲ್ಲಿ ನಕಲಿ ಅಧಿಕಾರಿಯೊಬ್ಬ. ಪಂಗನಾಮ ಹಾಕಿದ್ದಾನೆ. ಮಂಜುನಾಥ ಚವ್ಹಾಣ ಎಂಬಾತನೇ ನಕಲಿ ಅಧಿಕಾರಿಯಾಗಿದ್ದಾನೆ. ಈ ವ್ಯಕ್ತಿ ಯಾರು ಎಂಬುದನ್ನ ಪೋಲಿಸರು ಪತ್ತೆ ಹಚ್ಚಬೇಕಿದೆ..ಇನ್ನು ಮೋಸ ಹೋದವರ ಪರವಾಗಿ ದೂರು ದಾಖಲಿಸಲು ಹೋದ್ರೆ ಉಪನಗರ ಪೋಲಿಸರು ಹಣ ಕಳೆದುಕದಕೊಂಡವರೆ ಬರಬೇಕು ಎಂದು ಹೇಳುತ್ತಿದ್ದಾರೆ.
undefined
OLXನಲ್ಲಿ ವಾಹನ ಖರೀದಿ ನೆಪದಲ್ಲಿ ವಂಚನೆ: ಟೆಸ್ಟ್ ಡ್ರೈವ್ ಹೋಗಿ ಬರೋದಾಗಿ ಎಸ್ಕೇಪಾಗಿದ್ದ ಆರೋಪಿ ಅಂದರ್
ಅಸಲಿಗೆ ಇತನಿಗೂ ಎಫ್ ಎಸ್ ಎ ಎ ಐ ಫುಡ್ ಸೇಪ್ಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ, ಕಚೇರಿಗೂ ಸಂಬಂಧವೇ ಇಲ್ಲ. ಆದರೂ ರಾಜಾರೋಷವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೆಸರು ಹೇಳಿಕೊಂಡು ಪ್ರತಿಯೊಂದು ಅಂಗಡಿಗೂ ತೆರಳಿ ನಿಮ್ಮ ಫುಡ್ ಲೈಸನ್ಸ್ ಎಲ್ಲಿ ತೋರಿಸಿ ಎಂದು ಪಾನಿ ಪುರಿ ಬಂಡಿ, ಎಗ್ ರೈಸ್ ಅಂಗಡಿ, ಹೋಟೆಲ್ ಹಾಗೂ ಕಿರಾಣಿ ಅಂಗಡಿಗಳಿಗೆ ತೆರಳಿ ಅವಾಜ್ ಹಾಕಿ ಕಾಯ್ದೆ, ಕಾನೂನು ಹೆಸರಿನಲ್ಲಿ ದರ್ಪ ಮೆರೆಯುತ್ತಿದ್ದಾನೆ.
ಅಲ್ಲದೆ, ಪ್ರತಿಯೊಬ್ಬರ ಬಳಿ ಮೂರುವರೆ ಸಾವಿರ ರೂಪಾಯಿ ಪೀಕುತ್ತಿದ್ದಾನೆ. ಈಗಾಗಲೇ ನೂರಾರು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು, ಅನೇಕರಿಗೆ ಪರವಾನಿಗೆ ಕೊಟ್ಟಿರುವುದಾಗಿ ಪೋಸು ಕೊಡುತ್ತಾನೆ. ಇತ ಕೊಟ್ಟಿರುವ ಪ್ರಮಾಣ ಪತ್ರ ಅಸಲಿನಾ ಅಥವಾ ನಕಲಿನಾ ಎಂಬುದು ಪಡೆದವರಿಗೆ ಕೂಡ ಗೊತ್ತಿಲ್ಲ..
ಈ ಬಗ್ಗೆ ಅನೇಕರು ಅವರ ಬಳಿ ದೂರಿದ್ದಾರೆ. ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಬದಲಿಗೆ ಹಣ ಕಳೆದುಕೊಂಡವರಿಗೆ ಪೊಲೀಸರ ಬಳಿ ಹೋಗಲು ಸಲಹೆ ನೀಡುತ್ತಿದ್ದಾರೆ. ಇವರು ತಮ್ಮ ಸರಕಾರಿ ಕಚೇರಿಯ ಹೆಸರು ಹೇಳಿ ಹಣ ಪಡೆದು ದುರುಪಯೋಗ ಮಾಡಿಕೊಂಡರೂ ಈ ಬಗ್ಗೆ ದೂರು ನೀಡದಿರುವುದು ಇಲ್ಲವೇ ಸಾರ್ವಜನಿಕರ ಗಮನಕ್ಕೆ ತರದಿರುವುದು ಬೇಸರದ ಸಂಗತಿಯಾಗಿದೆ ಎಂದು ಧಾರವಾಡದ ಶ್ರೀ ಮೈಲಾರಲಿಂಗೇಶ್ವರ ಟ್ರೇಡರ್ಸ್ ಮಾಲೀಕ ನಾಗರಾಜ ಕಿರಣಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಹಾರ ತಯಾರು ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಫುಡ್ ಲೈಸನ್ಸ್ ಅಗತ್ಯವಿದೆ.
ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸಿದ್ದ ವಸ್ತು ಮಾರಾಟ ಮಾಡುವ ಕಿರಾಣಿ ಅಂಗಡಿಗಳಿಗೆ ಫುಡ್ ಲೈಸನ್ಸ್ ಅಗತ್ಯವಿಲ್ಲದಿದ್ರೂ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿರುವುದು ಬೇಸರದ ಸಂಗತಿಯಾಗಿದೆ. ಈಗಲಾದರೂ ಎಫ್ ಎಸ್ ಎ ಎ ಐ ( ಫುಡ್ ಸೇಪಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ ) ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಧಾರವಾಡದ ಬಾರಾಕೋಟ್ರಿ ವ್ಯಾಪಾರಸ್ಥರು ಕೇಳಿಕ್ಕೊಂಡಿದ್ದಾರೆ..
ಒಟ್ಟಿನಲ್ಲಿ ನಾನೊಬ್ಬ ಅಧಿಕಾರಿ ಎಂದು ಅಂಗಡಿಗಳಿಗೆ ಹೋಗಿ ಲೈಸನ್ಸ್ ಹೇಸರಿನಲ್ಲಿ ಮೋಸ ಮಾಡುತ್ತಿದ್ದಾನೆ ಈ ಕುರಿತು ನೊಂದವರು ಕೂಡಾ ಸದ್ಯ ಉಪನಗರ ಪೋಲಿಸರಿಗೆ ದೂರು ಕೊಟ್ಟಿದ್ದಾರೆ...ಇನ್ನಾದರೂ ಪೋಲಿಸರು, ಮತ್ತು ಸಂಭಂಧಫಟ್ಟ ಅಧಿಕಾರಿಗಳು ಇಂತ ಮೋಸಗಾರರಿಗೆ ಹೆಡೆಮೂರಿ ಕಟ್ಟಬೇಕಿದೆ.