OLXನಲ್ಲಿ ವಾಹನ ಖರೀದಿ ನೆಪದಲ್ಲಿ ವಂಚನೆ: ಟೆಸ್ಟ್ ಡ್ರೈವ್ ಹೋಗಿ ಬರೋದಾಗಿ ಎಸ್ಕೇಪಾಗಿದ್ದ ಆರೋಪಿ ಅಂದರ್‌

By Suvarna NewsFirst Published Jun 16, 2022, 3:58 PM IST
Highlights

ಓಎಲ್ಎಕ್ಸ್ ನಲ್ಲಿ ವಾಹನ ಖರೀದಿ ನೆಪದಲ್ಲಿ ವಂಚಿಸಿದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಜೂ. 16): ಓಎಲ್ಎಕ್ಸ್ ನಲ್ಲಿ (OLX) ವಾಹನ ಖರೀದಿ ನೆಪದಲ್ಲಿ ವಂಚಿಸಿದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. 
ಟೆಸ್ಟ್ ಡ್ರೈವ್ (Car Test Drive) ಹೋಗಿ ಬರೋದಾಗಿ ಎಸ್ಕೇಪ್ ಆಗಿದ್ದ ಆರೋಪಿ  ಮಂಜುನಾಥ್ @ ಒಎಲ್ಎಕ್ಸ್ ಬಂಧಿತ.  ಮಂಜುನಾಥ್ ಕನಕಪುರದವನಾಗಿದ್ದು , ವಂಚನೆ (Fraud) ಮಾಡಿ ಹಣ ಮಾಡೊದನ್ನೇ ಕಾಯಕ ಮಾಡಿಕೊಂಡಿದ್ದ.  ಸೆಕ್ಯೂರಿಟಿ ಗಾರ್ಡ್‌ಗಳನ್ನ ಸಂಪರ್ಕಿಸಿ ಕೆಲಸ ಕೊಡಿಸೋದಾಗಿ ನಂಬಿಸಿ ಹಣ ಪಡೆಯುತ್ತಿದ್ದ. ಬಳಿಕ ಅವರ ಸಿಮ್ ಕಾರ್ಡ್‌ಗಳನ್ನೇ ಪಡೆದು ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿದವರನ್ನು ಸಂಪರ್ಕಿಸುತ್ತಿದ್ದ. 

ಬಳಿಕ ಬೈಕನ್ನ ಟೆಸ್ಟ್ ಡ್ರೈವ್ ಹೋಗಿ ಬರ್ತೀನಿ ಎಂದು ಹೇಳಿ ಎಗರಿಸಿ ಎಸ್ಕೇಪ್ ಆಗುತ್ತಿದ್ದ. ಆರೋಪಿ ಬಂಧನದಿಂದ ಒಟ್ಟು 9 ಠಾಣೆಯಲ್ಲಿ ವಂಚನೆ ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ.  ವಿದ್ಯಾರಣ್ಯಪುರ, ಜಯನಗರ, ಮಲ್ಲೇಶ್ವರಂ, ಕೋಣನಕುಂಟೆ, ಬೇಗೂರು, ರಾಜರಾಜೇಶ್ವರಿ, ಹೆಬ್ಬಗೊಡಿ ಸೇರಿ 9 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯಗಳು ಬೆಳಕಿಗೆ ಬಂದಿವೆ.  ಸದ್ಯ ಆರೋಪಿಯಿಂದ ಮೂರು ಕಾರು, ಒಂದು ಬೈಕ್, ಹಾಗೂ 5 ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಮಾನಸಿಕ ಖಿನ್ನತೆ: ರೈಫಲ್‌ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!

ಬ್ಯಾಟರಿ ಕಳ್ಳರ ಬಂಧನ: ಇನ್ನು ಬೆಸ್ಕಾಂ ಆರ್ ಎಂ ಬಾಕ್ಸ್ ನಲ್ಲಿ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.ವಿನೋದ್ ಹಾಗೂ ಜಗದೀಶ್ ಬಂಧಿತ ಆರೋಪಿಗಳು.  ಬೆಳಗಿನ ಜಾವದಲ್ಲಿ  ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 4.6 ಲಕ್ಷ ಮೌಲ್ಯದ 54 ಎಕ್ಸೈಡ್ ಬ್ಯಾಟರಿ ಹಾಗೂ ಒಂದು ಓಮ್ನಿ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿವಿಜಯಪುರ: ಕೃಷಿ ಹೊಂಡಕ್ಕೆ ಹಾರಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಚಿನ್ನಾಭರಣ ಕಳ್ಳರ ಬಂಧನ: ಅಂಗಡಿಯಲ್ಲಿ ವ್ಯಾಪರ ಮಾಡುವ ಒಂಟಿ ಮಹಿಳೆಯರ ಬಳಿ ಚಿನ್ನದ ಅಭರಣ ಕಳ್ಳತನ ಮಾಡುತ್ತಿದ್ದ ಅರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು  ಬಂಧಿಸಿದ್ದಾರೆ.  ಮಹಮ್ಮದ್ ಸಾಜದ್ ಅಲಿ, ಹಾಗೂ ವೈತೆಗಿ ಬಂಧಿತ ಆರೋಪಿತರು.  ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿವೆ.  ವ್ಯಾಪಾರ ಮಾಡುವ ನೆಪದಲ್ಲಿ ಒಂಟಿ ಮಹಿಳೆ ಇರುವ ಅಂಗಡಿಗೆ ಆರೋಪಿಗಳು ಹೋಗುತ್ತಿದ್ದರು.  ತಮ್ಮದು ಚಿನ್ನದ ಅಂಗಡಿ ಇದೆ ಎಂದು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದರು. ಆರೋಪಿಗಳಿಂದ 7.55 ಲಕ್ಷ ಮೌಲ್ಯದ 202 ಗ್ರಾಂ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

click me!