WhatsApp: ಸಿಇಒ ಪೂನಾವಾಲ ಹೆಸರಿನಲ್ಲಿ ಸೀರಂಗೆ 1 ಕೋಟಿ ವಂಚನೆ!

By Kannadaprabha NewsFirst Published Sep 11, 2022, 9:06 AM IST
Highlights

ಸೀರಂ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ 1 ಕೋಟಿ ರೂ. ಗೂ ಹೆಚ್ಚು ಹಣ ವಂಚಿಸಲಾಗಿದೆ. ಸಿಇಒ ಅದಾರ್‌ ಪೂನಾವಾಲ ಹೆಸರಿನಲ್ಲೇ ವಂಚನೆ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ದಾಖಲಾಗಿದೆ. 

ಮುಂಬೈ: ಕೋವಿಡ್‌ ಲಸಿಕೆ ತಯಾರಕ ಕಂಪನಿ ಸೀರಂಗೆ, ಅವರದ್ದೇ ಕಂಪನಿಯ ಸಿಇಒ ಅದಾರ್‌ ಪೂನಾವಾಲ ಹೆಸರಿನಲ್ಲೇ 1 ಕೋಟಿ ರೂ. ವಂಚನೆ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಂಚಕರು (Fraudsters) ವಾಟ್ಸ್‌ಆ್ಯಪ್ (WhatsApp) ಮೂಲಕ ಕಳುಹಿಸಿದ್ದ ನಕಲಿ ಸಂದೇಶವನ್ನು ನಿಜವೆಂದು ಭಾವಿಸಿದ ಕಂಪನಿ 1,01,01,554 ರೂಪಾಯಿ ಅನ್ನು ವರ್ಗಾವಣೆ ಮಾಡಿದೆ.ಈ ವಂಚನೆ ಪ್ರಕರಣದ ಕುರಿತು ಬಂಡ್‌ಗಾರ್ಡನ್‌ ಪೋಲೀಸ್‌ ಠಾಣೆಯಲ್ಲಿ ಐಟಿ (Information Technology) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸೀರಂ ಸಂಸ್ಥೆಯ ನಿರ್ದೇಶಕರುಗಳಲ್ಲಿ ಒಬ್ಬರಾದ ಸತೀಶ್‌ ದೇಶಪಾಂಡೆ ಅವರಿಗೆ ವ್ಯಕ್ತಿಯೊಬ್ಬ ಅದಾರ್‌ ಪೂನಾವಾಲ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದು, ತ್ವರಿತವಾಗಿ 1 ಕೋಟಿ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಇದನ್ನು ನಿಜವೆಂದು ಭಾವಿಸಿದ ದೇಶಪಾಂಡೆ, ಸಂದೇಶ ಕಳುಹಿಸಿದವನು ನೀಡಿದ ಬ್ಯಾಂಕ್‌ ಖಾತೆಗೆ (Bank Account) ಹಣ ವರ್ಗಾಯಿಸಿದ್ದಾರೆ. ನಂತರ ಪೂನಾವಾಲಾ ಅವರು ಸಂದೇಶ ಕಳುಹಿಸಿಲ್ಲ ಎಂಬುದು ತಿಳಿಯುತ್ತಲೇ ಪೊಲೀಸರಿಗೆ (Police) ದೂರು ನೀಡಿದ್ದಾರೆ.

ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) (SII) ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Chief Executive Officer) (ಸಿಇಒ) ಅದಾರ್ ಪೂನಾವಾಲಾ ಎಂದು ಹೇಳಿಕೊಂಡು ಅದರ ನಿರ್ದೇಶಕರೊಬ್ಬರಿಗೆ ವಾಟ್ಸ್‌ಆ್ಯಪ್ ಸಂದೇಶವನ್ನು ರವಾನಿಸಿದ ಅಪರಿಚಿತ ಸೈಬರ್ ವಂಚಕರು ಹಲವು ಬ್ಯಾಂಕ್‌ ಖಾತೆಗಳಿಗೆ 1 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಕಂಪನಿಯ ಫೈನಾನ್ಸ್ ಮ್ಯಾನೇಜರ್ (Finance Manager) ಸಾಗರ್ ಕಿತ್ತೂರ್‌ ಅವರ ದೂರಿನ ಆಧಾರದ ಮೇಲೆ ಶುಕ್ರವಾರ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (First Information Report) (ಎಫ್‌ಐಆರ್) ಪ್ರಕಾರ, ಘಟನೆ ಸೆಪ್ಟೆಂಬರ್ 7 ರಂದು ಮಧ್ಯಾಹ್ನ 1.35 ರಿಂದ ಸೆಪ್ಟೆಂಬರ್ 8 ರ ಮಧ್ಯಾಹ್ನ 2.30 ರ ನಡುವೆ ನಡೆದಿದೆ ಎಂದು ತಿಳಿದುಬಂದಿದೆ.

Cheating Case: ಸಿಐಡಿಯಿಂದ ಮಂತ್ರಿ ಡೆವೆಲಪರ್ಸ್‌ ಎಂಡಿ Susheel Mantri ಬಂಧನ

ನಿರ್ದೇಶಕ ಸತೀಶ್ ದೇಶಪಾಂಡೆ ಅವರಿಗೆ ಅದಾರ್‌ ಪೂನಾವಾಲಾ ಅವರ ಸಂಖ್ಯೆಯಿಂದ ಕೆಲವು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ವಾಟ್ಸ್‌ಆ್ಯಪ್ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ, ಕಂಪನಿಯ ಖಾತೆಯಿಂದ 1,01,01,554 ರೂ.ಗಳನ್ನು ಆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು. ಆದರೆ ಪೂನಾವಾಲಾ ಹಣ ವರ್ಗಾವಣೆ ಕೋರಿ ಅಂತಹ ಯಾವುದೇ ಸಂದೇಶವನ್ನು ಕಳುಹಿಸಿಲ್ಲ ಎಂದು ಕಂಪನಿಯ ಅಧಿಕಾರಿಗಳು ನಂತರ ತಿಳಿದುಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಭಾರತೀಯ ದಂಡ ಸಂಹಿತೆ (IPC ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ) ಮತ್ತು 34 (ಸಾಮಾನ್ಯ ಉದ್ದೇಶ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಶೇಖರ್ ಸುಲಿಗೆ ಪ್ರಕರಣ: ನೋರಾ ಫತೇಹಿ ವಿಚಾರಣೆ, ಸಂಕಷ್ಟ

ಆರೋಪಿಗಳು, ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದವರು ಮತ್ತು ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆದಾರರನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. SII ಭಾರತೀಯ ಜೈವಿಕ ತಂತ್ರಜ್ಞಾನ ಮತ್ತು ಬಯೋಫಾರ್ಮಾಸ್ಯುಟಿಕಲ್ಸ್ ಕಂಪನಿಯಾಗಿದೆ ಹಾಗೂ ಇದು ಲಸಿಕೆಗಳ ವಿಶ್ವದ ಅತಿದೊಡ್ಡ ತಯಾರಕವಾಗಿದೆ. ಸೀರಂ ಇನ್ಸ್ಟಿಟ್ಯೂಟ್‌ ಕೋವಿಶೀಲ್ಡ್ ಲಸಿಕೆಯನ್ನು (Covishield Vaccine) ಉತ್ಪಾದಿಸುತ್ತದೆ, ಇದು ಭಾರತದಲ್ಲಿ ಬಳಕೆಯಲ್ಲಿರುವ ಪ್ರಮುಖ ಕೋವಿಡ್-19 ಲಸಿಕೆಯಾಗಿದೆ.

click me!