Bengaluru Crime News: ನಕಲಿ ಕಾಲ್ ಸೆಂಟರ್ ತೆರೆದು ಅಮೆರಿಕಾ ಪ್ರಜೆಗಳಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

Published : Jul 08, 2022, 04:19 PM ISTUpdated : Jul 08, 2022, 04:23 PM IST
Bengaluru Crime News: ನಕಲಿ ಕಾಲ್ ಸೆಂಟರ್ ತೆರೆದು ಅಮೆರಿಕಾ ಪ್ರಜೆಗಳಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

ಸಾರಾಂಶ

Bengaluru Crime News:  ನಗರದಲ್ಲಿ ನಕಲಿ ಕಾಲ್ ಸೆಂಟರ್ ತೆರೆದು  ಅಮೇರಿಕಾ‌ ಪ್ರಜೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವನ್ನ ಪೊಲೀಸರು ಪತ್ತೆ ಮಾಡಿದ್ದಾರೆ. 

ಬೆಂಗಳೂರು (ಜು. 08):  ನಗರದಲ್ಲಿ ನಕಲಿ ಕಾಲ್ ಸೆಂಟರ್ (Fake Call Centre) ತೆರೆದು  ಅಮೇರಿಕಾ‌ ಪ್ರಜೆಗಳನ್ನೇ (America Citizens) ಟಾರ್ಗೆಟ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ (Fraud) ಬೃಹತ್ ಜಾಲವನ್ನ ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ. ಕಾಲ್‌ಸೆಂಟರ್  ಸೋಗಿನಲ್ಲಿ ಅಮೆರಿಕ ಪ್ರಜೆಗಳನ್ನ ಟ್ರ್ಯಾಪ್ ಮಾಡಿ ಅನ್ ಲೈನ್ ಮುಖಾಂತರ ಕಳೆದ‌ ಎರಡು ವರ್ಷಗಳಿಂದ‌ ಕೋಟಿಗಟ್ಟಲೇ‌ ವಂಚಿಸಿದ್ದ ಗುಜರಾತ್ ಮೂಲದ 11 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಸಂಬಂಧ ಆರೋಪಿಗಳಾದ ರಿಷಿವ್ಯಾಸ್ ಪ್ರತೀಕ್, ಪರೀಶ್, ಹೇತ್ ಪಟೇಲ್, ಕಿರಣ್, ಸೈಯ್ಯದ್, ಸೇರಿ 11 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.‌
ಜೊತೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಿಂದ  2 ಕೋಟಿ ಬೆಲೆಯ 127 ಡೆಸ್ಕ್ ಟಾಪ್‌ಗಳು, 4 ಲ್ಯಾಪ್ ಟಾಪ್, 150 ಹೆಡ್ ಪೋನ್,  10 ಇಂಟರ್ ನಲ್‌ ಹಾರ್ಡ್ ಡಿಸ್ಕ್ ಹಾಗೂ ಆ್ಯಪಲ್ ಕಂಪನಿಯ 6 ಮೊಬೈಲ್ ಗಳು 3 ಕಾರು, ಎರಡು ಶಾಲಾ ವಾಹನ,  ಟಿಟಿ ವಾಹನ ಹಾಗೂ 18 ಲಕ್ಷ‌ ರೂಪಾಯಿ ನಗದು ಜಪ್ತಿ ಮಾಡಿಕೊಂಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಬಹುತೇಕರು ಗುಜರಾತ್  (Gujarat) ಮೂಲದವರಾಗಿದ್ದು ಕಳೆದ ಎರಡು ವರ್ಷಗಳಿಂದ ಈ ಅಕ್ರಮ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

 ಟೆಲಿಕಾಲರ್‌ಗಳ ಮೂಲಕ ಅಮೆರಿಕಾ ಪ್ರಜೆಗಳ ಸಂಪರ್ಕ: ವೈಟ್ ಫೀಲ್ಡ್‌ನ ಗಾಯತ್ರಿ  ಟೆಕ್ ಪಾರ್ಕ್‌ನಲ್ಲಿ ಏಥಿಕಲ್ ಇನ್ ಫೋ ಪ್ರೈ,ಲಿ ಹೆಸರಿನಲ್ಲಿ ಕಂಪನಿ ತೆರದಿದ್ದ ಆರೋಪಿಗಳು ನೂರಾರು ಟೆಲಿಕಾಲರ್‌ಗಳ ಮೂಲಕ ಅಮೆರಿಕಾ ಪ್ರಜೆಗಳನ್ನು ಸಂಪರ್ಕ ಮಾಡುತ್ತಿದ್ದರು. ನಿಮ್ಮ‌ ಖಾತೆಯಿಂದ ಹಣ ವರ್ಗಾವಣೆ ಆಗಿದ್ಯಾ? ಅಂತ ಮಾತು ಶುರು ಮಾಡ್ತಿದ್ದ ಆರೋಪಿಗಳು ಹಣ ವಾಪಸ್ ಬರಬೇಕು ಅಂದ್ರೆ ಒಂದಷ್ಟು ಪ್ರೊಸಿಜರ್ ಫಾಲೋ ಮಾಡಬೇಕು ಎಂದು ಹೇಳಿ ಹಂತ ಹಂತವಾಗಿ ಬ್ಯಾಂಕ್ ಹೆಸರನ್ನು ಬಳಕೆ ಮಾಡಿ ಗ್ರಾಹಕರಿಂದ ಅಮೆಜಾನ್ ನಲ್ಲಿ ಲಕ್ಷಾಂತರ ಮೌಲ್ಯದ ಗಿಫ್ಟ್ ಕಾರ್ಡ್  ಖರೀದಿ‌ ಮಾಡಿಸಿ ಹಣ ಸಂಪಾದನೆ ಮಾಡುತ್ತಿದ್ದರು.

ಇದನ್ನೂ ಓದಿ: ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ 55 ಬಾರಿ ನಿಯಮ ಉಲ್ಲಂಘಿಸಿದ ಭೂಪ..!

ಸದ್ಯ ಪ್ರಕರಣ ಹಿನ್ನೆಲೆ ಅಮೆರಿಕಾ ರಾಯಭಾರಿ ಕಚೇರಿಯಿಂದ ಮಾಹಿತಿ ಪಡೆಯಲು ಮುಂದಾಗಿದ್ದು, ಆರೋಪಿಗಳು ಯುಎಸ್ಎ ಪ್ರಜೆಗಳನ್ನು ಟಾರ್ಗೆಟ್ ಮಾಡ್ತಿದ್ದ ಉದ್ದೇಶ ಏನು. ಇವರಿಗೆ ಈ ನಂಬರ್ ಯಾರು ಕೊಡುತ್ತಿದ್ದರು ಎಂದು ವಿಚಾರಣೆ ನಡೆಸ್ತಿದ್ದಾರೆ.‌ ಇನ್ನೂ ಕಂಪೆನಿಯಲ್ಲಿ ‌ಕೋಟಿ ಕೋಟಿ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪ್ರಕರಣ ಸಿಐಡಿ ಹೆಗಲಿಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಆರೋಪಿಗಳು ವೈಟ್ ಫೀಲ್ಡ್ ಮತ್ತು ಮಹದೇವಪುರ ಬಳಿ ಎರಡು ಕಾಲ್ ಸೆಂಟರ್‌ಗಳು ಇರುವುದು ಬಯಲಿಗೆ ಬಂದಿದೆ. ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯ ಬಹುತೇಕ ಉದ್ಯೋಗಿಗಳಿಗೆ ವಂಚನೆ ಬಗ್ಗೆ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ. ನೌಕರರಿಗೆ ನಗದು ರೂಪದಲ್ಲೇ ಕಂಪನಿಗಳು ಸಂಬಳ ನೀಡುತ್ತಿದ್ದರು.

ಇದನ್ನೂ ಓದಿ:  ಸರ್ಕಾರಿ ಭೂ ಮಂಜೂರಿಗಾಗಿ ಜಿಲ್ಲಾಧಿಕಾರಿ ನಕಲಿ ಸಹಿ: ಕಂದಾಯ ಇಲಾಖೆಯ ಇಬ್ಬರು ಅರೆಸ್ಟ್!

ಕಾಲ್‌ಸೆಂಟರ್ ಉದ್ಯೋಗಿಗಳನ್ನು ಶಾಲಾ ವಾಹನದಲ್ಲಿ ಡ್ರಾಪ್ ಅಂಡ್ ಪಿಕಪ್ ಮಾಡುತ್ತಿದ್ದರು.  ಥೈಲಾಂಡ್ ಹಾಗೂ ಹಾಕಾಂಗ್ ಗಳಲ್ಲಿ ತೆರೆದಿದ್ದ ಬ್ಯಾಂಕ್ ಅಕೌಂಟ್‌ಗಳನ್ನು ಆರೋಪಿಗಳು ಅಕ್ರಮದ ಹಣವನ್ನ ವರ್ಗಾವಣೆ ಮಾಡಿಸಿಕೊಂಡಿದ್ದರು.‌ ಹವಾಲಾ ಮುಖಾಂತರ ಭಾರತಕ್ಕೆ ನಗದು ರೂಪದಲ್ಲಿ ಹಣ ತರಿಸಿಕೊಂಡು ಉದ್ಯೋಗಿಗಳಿಗೆ ಸಂಬಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ