ಅಂಕವೇ ಮುಖ್ಯ ಎನ್ನುವ ಪೋಷಕರಿಗೆ ಹೆದರಿ ಓಡಿ ಬಂದ 12ರ ಬಾಲೆ! 200 ಮಂದಿಯಿಂದ ರೇ*ಪ್​

Published : Aug 12, 2025, 08:02 PM IST
Teens Story

ಸಾರಾಂಶ

ಶಾಲೆಯಲ್ಲಿ ಫೇಲ್​ ಆದ 12 ವರ್ಷದ ಬಾಲಕಿಯೊಬ್ಬಳು ಸ್ಟ್ರಿಕ್ಟ್​ ಅಪ್ಪ-ಅಮ್ಮನಿಗೆ ಭಯಪಟ್ಟು ಮನೆಬಿಟ್ಟು ಹೋಗಿ ಕಾಮುಕರ ಬಲೆಯಲ್ಲಿ ಸಿಲುಕಿದ್ದಾಳೆ. ಈಕೆಯ ದಾರುಣ ಸ್ಟೋರಿ ಕೇಳಿ... 

ಶಾಲಾ-ಕಾಲೇಜುಗಳಲ್ಲಿ ಪಡೆಯುವ ಅಂಕವೇ ಸರ್ವಸ್ವ, ಹೆಚ್ಚು ಮಾರ್ಕ್ಸ್​ ಪಡೆಯದಿದ್ದರೆ ಜೀವನವೇ ಇಲ್ಲ. ಅಕ್ಕ-ಪಕ್ಕದವರು ಏನಂತಾರೆ? ನಮ್ಮ ಸ್ಟೇಟಸ್​ ಗತಿಯೇನು? ಹೆಚ್ಚಿನ ಮಾರ್ಕ್ಸ್​ ತರದಿದ್ರೆ ನಮಗೆ ಮುಖ ತೋರಿಸಬೇಡ... ಎನ್ನುವ ಅಪ್ಪ-ಅಮ್ಮ ಅದೆಷ್ಟೋ ಮಂದಿ ಇದ್ದಾರೆ. ತಮ್ಮ ಸ್ಟೇಟಸ್​ ಕಾಪಾಡಿಕೊಳ್ಳಲು ಇವರಿಗೆ ಇರುವ ಮಾರ್ಗ ಮಕ್ಕಳ ಅಂಕ. ಶಾಲೆಯ ಪ್ರತಿಷ್ಠೆಗೂ ಮಕ್ಕಳ ಅಂಕವೇ ಬೇಕು, ಅಪ್ಪ-ಅಮ್ಮನ ಪ್ರತಿಷ್ಠೆಗೂ ಮಾರ್ಕ್ಸ್​ ಬೇಕು. ಅದು ಹೇಗಾದ್ರೂ ಮಾಡಿಯಾದರೂ ಸರಿ. ಓದಿ ಓದಿ ಬಾಯಿಪಾಠ ಮಾಡಿಯಾದರೂ ಅಂಕ ಬೇಕು, ಬೇರೆ ವಿಷಯಗಳ ತಿಳಿವಳಿಕೆ, ಸಾಮಾನ್ಯ ಜ್ಞಾನ ಏನಿಲ್ಲದಿದ್ದರೂ ಪರವಾಗಿಲ್ಲ, ಶಾಲೆಯಲ್ಲಿ ಅಂಕ ಬೇಕು ಎಂದು ಹಗಲು-ರಾತ್ರಿ ಮಕ್ಕಳ ತಲೆಯಲ್ಲಿ ತುಂಬುವುದೇ ನಮ್ಮ ಶಿಕ್ಷಣ ವ್ಯವಸ್ಥೆ ಆಗಿಹೋಗಿದೆ. ಇಂಥ ಮನಸ್ಥಿತಿ ಇರುವ ಅಪ್ಪ-ಅಮ್ಮನಿಂದಲೇ 12 ವರ್ಷದ ಬಾಲೆ ರೆಡ್​ಲೈಟ್​ ಏರಿಯಾದ ಸುಳಿಯಲ್ಲಿ ಸಿಲುಕಿರುವ ಕರುಳು ಹಿಂಡುವ ಕಥೆ ಇದು.

ಈ ಬಾಲೆ ಬಾಂಗ್ಲಾದೇಶದವಳು. ಶಾಲೆಯಲ್ಲಿ ಫೇಲ್​ ಆಗಿದ್ದಳು. ಅಪ್ಪ-ಅಮ್ಮನಿಗೆ ಅಂಕವೇ ಮುಖ್ಯವಾಗಿದ್ದ ಕಾರಣ, ಮನೆಗೆ ಹೋದರೆ ಅವರಿಂದ ಇನ್ನಿಲ್ಲದ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ಹೆದರಿ ಮನೆಬಿಟ್ಟು ಹೋಗಿದ್ದಾಳೆ. ಆದರೆ ಕ್ರೂರ ವಿಧಿ ಆಕೆಯನ್ನು ಬಿಡಲಿಲ್ಲ. ಹೆಂಗಸೊಬ್ಬಳ ಕೈಸೇರಿದ್ದಾಳೆ ಈ ಬಾಲಕಿ. ತಾನು ರಕ್ಷಣೆ ಕೊಡುವುದಾಗಿ ಹೇಳಿದ ಆ ಮಹಿಳೆ ಬಾಲಕಿಯನ್ನು ನೇರವಾಗಿ ಮುಂಬೈಗೆ ಕರೆದುಕೊಂಡು ಬಂದು ರೆಡ್​ಲೈಟ್​ ಏರಿಯಾದಲ್ಲಿ ಮಾರಿದ್ದಾಳೆ! ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಮತ್ತು ಹಾರ್ಮನಿ ಫೌಂಡೇಶನ್ ಪೊಲೀಸರ ಸಹಾಯದಿಂದ ಈ ಏರಿಯಾದ ಮೇಲೆ ದಾಳಿ ಮಾಡಿದಾಗ ಬಾಲಕಿ ಸಿಕ್ಕಿದ್ದಾಳೆ.

ಇಲ್ಲಿ ಬಂದು ಮೂರು ತಿಂಗಳಾಗಿದ್ದು, ಇದಾಗಲೇ ಇನ್ನೂರಕ್ಕೂ ಹೆಚ್ಚಿನ ಕಾಮುಕರು ತನ್ನನ್ನು ರೇ*ಪ್​ ಮಾಡಿರುವುದಾಗಿ ಬಾಲಕಿ ಹೇಳಿದ್ದಾಳೆ. ಈ ಪ್ರಕರಣದಲ್ಲಿ ಇದುವರೆಗೆ ಹತ್ತು ಜನರನ್ನು ಬಂಧಿಸಲಾಗಿದೆ. ಸದ್ಯ ಬಾಲಕಿಯನ್ನು ರಿಮಾಂಡ್​ ಹೋಮ್​ನಲ್ಲಿ ಇರಿಸಲಾಗಿದೆ. ನಾನು ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದರಿಂದ ಮನೆಗೆ ಹೋಗಲು ಹೆದರಿದೆ. ನನ್ನ ಅಪ್ಪ-ಅಮ್ಮ ತುಂಬಾ ಸ್ಟ್ರಿಕ್ಟ್​. ಫೇಲ್​ ಆಗಿದ್ದು, ಅವರಿಗೆ ತಿಳಿದರೆ ಚೆನ್ನಾಗಿ ಹೊಡೆಯುತ್ತಿದ್ದರು. ಅದಕ್ಕೆ ಹೆದರಿ ಮನೆ ಬಿಟ್ಟು ಬಂದೆ. ಆಮೇಲೆ ಏನಾಯಿತು ಎಂದು ನನಗೆ ಗೊತ್ತಿಲ್ಲ. ಆ ಮಹಿಳೆ ಸಿಕ್ಕು ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋದಳು. ಬಳಿಕ ನನ್ನ ಮೇಲೆ ಹೀಗೆಲ್ಲಾ ನಡೆಯಿತು ಎಂದು ಆಕೆ ಹೇಳಿದ್ದಾಳೆ.

ಉದ್ಯೋಗದ ಆಸೆಗಾಗಿಯೋ ಅಥವಾ ಇನ್ನಾವುದೋ ಆಮಿಷ ಒಡ್ಡಿ ಇಂಥ ಕೃತ್ಯ ಮಾಡುವ ದೊಡ್ಡ ಜಾಲವೇ ಇರುವ ಕಾರಣ, ಕೊನೆಯ ಪಕ್ಷ ಅಪ್ಪ-ಅಮ್ಮ ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ತುಂಬಾ ಅವಶ್ಯಕವಾಗಿದೆ. ಕಾರಣ ಚಿಕ್ಕದ್ದೇ ಇರಲಿ, ದೊಡ್ಡದ್ದೇ ಇರಲಿ...ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಲಕರು ನಡೆದುಕೊಳ್ಳಬೇಕು. ಅದರಲ್ಲಿಯೂ ಇಂದಿನ ಹೆಚ್ಚಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುವುದರಿಂದ ಜೀವ ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ, ಈ ರೀತಿ ಮನೆ ಬಿಟ್ಟು ಹೋಗಲೂ ಹಿಂದೆಮುಂದೆ ನೋಡುವುದಿಲ್ಲ. ಆದ್ದರಿಂದ ಪಾಲಕರು ತಮ್ಮ ಜವಾಬ್ದಾರಿ ಅರಿಯಬೇಕಾಗಿದೆ ಎನ್ನುತ್ತಾರೆ ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಸದಸ್ಯರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ