
ಹಪುರ್(ಜು.08) ಗಂಡನ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಫೋನ್ ಕಾಲ್, ಚಾಟಿಂಗ್, ಕೆಲಸದ ಕಾರಣ ನೀಡಿ ದಿಢೀರ್ ನಾಪತ್ತೆ ಘಟನೆಗಳು ಮರುಕಳಿಸುತ್ತಿದ್ದತೆ ಗಂಡನ ಫಾಲೋ ಮಾಡಿದ ಪತ್ನಿ ರಾಸಲೀಲೆಯನ್ನು ಬಯಲು ಮಾಡಿದ್ದಾಳೆ.ಹೆಂಡತಿಗೆ ಸುಳ್ಳು ಹೇಳಿ ಮನೆಯಿಂದ ತೆರಳಿದ್ದ ಗಂಡ ನೇರವಾಗಿ ಗೆಳತಿ ಮನೆಗೆ ತೆರಳಿದ್ದಾನೆ. ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಆಟ ಶುರುವಾಗಷ್ಟರಲ್ಲೇ ಪತ್ನಿ ಪೊಲೀಸರೊಂದಿಗೆ ಎಂಟ್ರಿಕೊಟ್ಟಿದ್ದಾಳೆ. ಇಲ್ಲಿ ದೊಡ್ಡ ಡ್ರಾಮ ನಡೆದು ಹೋಗಿದೆ. ಸಿಟ್ಟಿನಲ್ಲಿ ಗಂಡನ ಕಪಾಳಕ್ಕೆ ಭಾರಿಸಿದ್ದಾಳೆ. ಪೊಲೀಸರು ನೋಡುತ್ತಾ ನಿಲ್ಲಬೇಕಾದ ಘಟನೆ ಉತ್ತರ ಪ್ರದೇಶ ಹಪುರ್ ನಗರದಲ್ಲಿ ನಡೆದಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಪತಿ ಪ್ರತಿ ದಿನ ಕೆಲಸ ಎಂದು ತೆರಳುತ್ತಿದ್ದ. ಜೊತೆಗೆ ಫೋನ್ ಸಂಭಾಷಣೆ, ಮೆಸೇಜ್‌ಗಳು, ಚಾಟಿಂಗ್ ಕೂಡ ಪತ್ನಿಗೆ ಅನುಮಾನ ತಂದಿತ್ತು. ಕೆಲಸದ ನಿಮಿತ್ತ ಬೇರೆ ನಗರಕ್ಕೆ ತೆರಳುವುದು ಹೆಚ್ಚಾಗಿತ್ತು. ಪತ್ನಿಗೆ ಹಲವು ಅನುಮಾನ ಸೃಷ್ಟಿಯಾದರೂ ಯಾವುದೇ ಸ್ಪಷ್ಟತೆ ಇರಲಿಲ್ಲ.
ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!
ಪತಿಯ ನಡೆಯಿಂದ ಅನುಮಾನ ಹೆಚ್ಚಾಗಿದೆ. ಪತಿಯ ಕಚೇರಿ, ಸೇರಿದಂತೆ ಆಪ್ತರಿಂದ ಗೊತ್ತಿಲ್ಲದಂತೆ ಮಾಹಿತಿ ಕಲೆಹಾಕಿದ್ದಾಳೆ. ತನ್ನ ಪದೇ ಪದೇ ಕೆಲಸದ ನಿಮಿತ್ತ ತೆರಳುತ್ತಿರುವುದು ಅಕ್ರಮ ಸಂಬಂಧಕ್ಕಾಗಿ ಅನ್ನೋದು ಗೊತ್ತಾಗಿದೆ. ಹೀಗೆ ಒಂದು ದಿನ ಮನೆಯಿಂದ ಕೆಲಸಕ್ಕೆಂದು ತೆರಳಿದ ಪತಿಯನ್ನು ಈಕೆ ಹಿಂಬಾಸಿದ್ದಾಳೆ. ಜೊತೆಗೆ ಪೊಲೀಸರಿಗೂ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದ್ದಾಳೆ.
ಇತ್ತ ಪತಿ ನೇರವಾಗಿ ಗೆಳತಿ ಮನೆಗೆ ತೆರಳಿದ್ದಾನೆ. ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಿದ್ದಂತೆ ಪತ್ನಿ ಹಾಗೂ ಪೊಲೀಸರು ಮನೆಯೊಳಗೆ ಪ್ರವೇಶಿಸಿದ್ದಾರೆ. ಪತ್ನಿ ಹಾಗೂ ಪೊಲೀಸರನ್ನು ನೋಡಿದ ಪತಿ ಗಾಬರಿಯಾಗಿದ್ದಾನೆ. ಅತ್ತ ಗೆಳತಿ ಬೇರೆ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ಪತಿಯನನ್ನು ಹೊಗೆಳೆದು ತಂದ ಪತ್ನಿ ಪೊಲೀಸರ ಮುಂದೆ ಕಪಾಳಕ್ಕೆ ಭಾರಿಸಿದ್ದಾಳೆ. ಇತ್ತ ಪತಿ ಆಕ್ರೋಶಗೊಂಡು ಪತ್ನಿಗೆ ಹೊಡೆದಿದ್ದಾನೆ. ಇವೆಲ್ಲವೂ ಪೊಲೀಸರ ಮುಂದೆ ನಡೆದು ಹೋಗಿದೆ.
12 ವರ್ಷದ ಮೊದಲೇ ಮತ್ತೊಂದು ಮದ್ವೆಯಾಗಿದ್ದ ಗಂಡ, ಸಂಸಾರ ರಹಸ್ಯದ ಗುಟ್ಟು ರಟ್ಟಾಯ್ತು!
ಇವರಿಬ್ಬರನ್ನು ಜಗಳವಾಡದಂತೆ ದೂರ ತಳ್ಳಿದ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಇರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಅಕ್ರಮ ಸಂಬಂಧ ಇದೀಗ ಸಾಮಾನ್ಯವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ