
ಹಥ್ರಾಸ್ (ಸೆ.07) ಮದುವೆಯಾಗಿ ಹಲವು ವರ್ಷಗಳು ಉರುಳಿದೆ. ಗಂಡನ ಮನೆಯಲ್ಲಿ ಎಲ್ಲವೂ ಚೆನ್ನಾಗಿತ್ತು. ಪತಿ ದುಡಿದು ಹೆಂಡತಿ, ಮಕ್ಕಳು, ತನ್ನ ಪೋಷಕರನ್ನು ಸಾಕುತ್ತಿದ್ದ. 6 ವರ್ಷದ ಮಗಳನ್ನು ಉತ್ತಮ ಶಾಲೆಯಲ್ಲಿ ಓದಿಸುತ್ತಿದ್ದರು. ಸಂಸಾರದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗುತ್ತಿತ್ತು. ಇದರ ನಡುವೆ ಈ 30 ವರ್ಷದ ಮಹಿಳೆಗೆ 17ರ ಹುಡುಗನ ಜೊತೆಗೆ ಪ್ರೀತಿ ಶುರುವಾಗಿದೆ. ಇಬ್ಬರೂ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಇದರ ನಡುವೆ ಗಂಡ, ಗಂಡನ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ತನ್ನ ಲವ್ವರ್ 17ರ ಹುಡುಗನ ಮನೆಗೆ ಕರೆದಿದ್ದಾಳೆ. ಇವರಿಬ್ಬರು ಆಪ್ತ ಸಮಯ ಕಳೆಯುತ್ತಿರುವಾಗಲೇ 6 ವರ್ಷದ ಮಗಳು ಎಂಟ್ರಿಕೊಟ್ಟಿದ್ದಾಳೆ. ಇವರಿಬ್ಬರು ಒಂದೆ ಬೆಡ್‌ನಲ್ಲಿರುವುದನ್ನು ನೋಡಿ ಆಘಾತಗೊಂಡಿದ್ದಾಳೆ. ತಾಯಿಯ ನಡೆಯಿಂದ ಆಕ್ರೋಶಗೊಂಡಿದ್ದಾಳೆ. ಆದರೆ ಈ ಘಟನೆ ಮತ್ತೊಂದು ಮಹಾ ದುರಂತಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಹಥ್ರಾಸ್ ಮತ್ತೊಮ್ಮೆ ಸುದ್ದಿಯಾಗಿದೆ. 30 ವರ್ಷದ ಮಹಿಳೆಯ ಅಕ್ರಮ ಸಂಬಂಧವನ್ನು ತನ್ನ ಸ್ವಂತ ಮಗಳೇ ನೋಡಿದ ಕಾರಣ ಇಡೀ ಕುಟುಂಬ ಇದೀಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹಥ್ರಾಸ್‌ಗೆ ಮದುವೆಯಾಗಿ ಬಂದ ಈ ಮಹಿಳೆಗೆ 6 ವರ್ಷದ ಮಗಳಿದ್ದಾಳೆ. ಗಂಡ ಉತ್ತಮ ಸಂಪಾದನೆ ಮಾಡುತ್ತಿದ್ದಾನೆ. ಪತ್ನಿ ಹಾಗೂ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಮಗಳು ಎಂದರೆ ಪಂಚಪ್ರಾಣ. ಗಂಡ ತನ್ನ ತಾಯಿ ಜೊತೆಯಲ್ಲಿ ಕಾರ್ಯಕ್ರಮದ ನಿಮಿತ್ತ ತೆರಳಿದ್ದಾನೆ. ಮನೆಯಲ್ಲಿ ಹೆಂಡತಿ ಹಾಗೂ ಮಗಳು ಇಬ್ಬರೇ.
17ರ ಹುಡುಗನ ಜೊತೆ ಈ ಮಹಿಳೆಗೆ ಸಂಬಂಧ ಶುರುವಾಗಿತ್ತು. ಫೋನ್ ಮೂಲಕ ಶುರುವಾದ ಪ್ರೀತಿ ಬಳಿಕ ಕದ್ದು ಮುಚ್ಚಿ ಭೇಟಿಯಾಗುವ ಮಟ್ಟಕ್ಕೆ ಬೆಳೆದಿತ್ತು. ಇತ್ತ ಗಂಡ ಹಾಗೂ ಅತ್ತೆ ಮನೆಯಲ್ಲಿ ಇಲ್ಲದ ವೇಳೆ ತನ್ನ ಲವ್ವರ್‌ನ ಮನೆಗೆ ಕರೆದಿದ್ದಾಳೆ. ಇತ್ತ ಮಗಳನ್ನು ಸಂಬಂಧಿಕರ ಮನೆಗೆ ಆಟವಾಡಲು ಬಿಟ್ಟಿದ್ದಾಳೆ. ಸಂಜೆಯಾದ ಬಳಿಕ ತಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಮಗಳಿಗೆ ಹೇಳಿದ್ದಾಳೆ. ಇತ್ತ ಏನೂ ಅರಿಯದ ಮಗಳನ್ನು ಹತ್ತಿರದ ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದ ಈಕೆ ತನ್ನ ಲವ್ವರ್ ಜೊತೆಯಲ್ಲಿ ಆಪ್ತ ಸಮಯ ಕಳೆಯಲು ಮುಂದಾಗಿದ್ದಾಳೆ.
ಗೆಳೆಯನ ಜೊತೆಗಿದ್ದ ಪೊಲೀಸ್ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕಾನ್ಸ್‌ಸ್ಟೇಬಲ್ ಪತಿ, ವಿಡಿಯೋ
17ರ ಹುಡುಗನ ಜೊತೆ ಕೋಣೆಯಲ್ಲಿ ಆಪ್ತ ಸಮಯದಲ್ಲಿರುವಾಗಲೇ ಇತ್ತ ಸಂಬಂಧಿಕರ ಮನೆಯಿಂದ ಬಾಲಕಿ ಮನಗೆ ವಾಪಾಸ್ಸಾಗಿದ್ದಾಳೆ. ಸಂಬಂಧಿಕರ ಮನೆಯಲ್ಲಿ ಹೆಚ್ಚು ಹೊತ್ತು ಇರಲು ಇಷ್ಟಪಡದ ಬಾಲಕಿ ಮನೆಗೆ ಮರಳಿದ್ದಾಳೆ. ಆದರೆ ಮನೆಯಲ್ಲಿನ ದೃಶ್ಯ ನೋಡಿ ಆಘಾತಗೊಂಡಿದ್ದಾಳೆ. ತನ್ನ ಸ್ವಂತ ತಾಯಿ ಬೇರೊಬ್ಬನ ಜೊತೆಯಲ್ಲಿ ಹಾಸಿಗೆಯಲ್ಲಿದ್ದಳು. ಇತ್ತ ಆಪ್ತ ಸಮಯದಲ್ಲಿದ್ದ ಈ ಜೋಡಿ ಬಾಲಕಿಯನ್ನು ನೋಡಿದ್ದಾರೆ. ಇತ್ತ ತಂದೆ ಹೇಳುತ್ತೇನೆ ಎಂದು ಮಗಳು ತಾಯಿ ಹೇಳಿದ್ದಾಳೆ. ಇಷ್ಟೇ ನೋಡಿ ಈ ಜೋಡಿಗೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿವಾಗಿದೆ.
ತಂದೆಗೆ ಹೇಳುತ್ತೇನೆ ಎಂದು ಫೋನ್ ಕೈಗೆತ್ತಿಕೊಂಡ ಬಾಲಕಿಯ ನಡೆಯಿಂದ ಇವರಿಬ್ಬರು ಭಯಗೊಂಡಿದ್ದಾರೆ. ಬಾಲಕಿಯನ್ನು ಹಿಡಿದೆಳದ ತಾಯಿ ಗದರಿಸಿದ್ದಾರೆ. ಆದರೆ ಬಾಲಕಿ ಮಾತ್ರ ತಂದೆಗೆ ಹೇಳುತ್ತೇನೆ ಎಂದು ಅಳಲು ಆರಂಭಿಸಿದ್ದಾಳೆ. 17ರ ಹುಡುಗನ ಜೊತೆ ಸೇರಿ ಸ್ವಂತ ಮಗಳನ್ನೇ ಹತ್ಯೆ ಮಾಡಿದ್ದಾಳೆ. ಬಳಿಕ ಬಾವಿಗೆ ಎಸೆದಿದ್ದಾರೆ.
ಮಗಳು ನಾಪತ್ತೆಯಾಗಿದ್ದಾಳೆ ಎಂದು ಅಂದು ರಾತ್ರಿ ಗಂಡನಿಗೆ ಫೋನ್ ಮಾಡಿದ್ದಾಳೆ. ಓಡೋಡಿ ಬಂದ ಗಂಡ ದೂರು ದಾಖಲಿಸಿದ್ದಾನೆ. ಹುಡುಕಾಟ ನಡೆಸಿದ ಪೊಲೀಸರು ಬಾಲಕಿಯ ಶವ ಪತ್ತ ಹಚ್ಚಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಇದು ಕೊಲೆ ಎಂದು ಬಯಲಾಗಿತ್ತು. ಹೀಗಾಗಿ ಪೊಲೀಸರು ಈ ಮಹಿಳೆ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ನಡೆದ ಘಟನೆ ಬಯಲಾಗಿದೆ. ಇದೀಗ ಮಹಿಳೆ ಅರೆಸ್ಟ್ ಆಗಿದ್ದರೆ, ಇತ್ತ ಹುಡಗನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ