ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮಾಜಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, (ನ.09): ರಾಜ್ಯದಲ್ಲಿ ಡ್ರಗ್ ಜಾಲ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಈ ಡ್ರಗ್ ಪ್ರಕರಣದಲ್ಲಿ ಇದೀಗ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಕುಮಾರ್ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ಸುಜಯ್ ಎಂಬುವರು ನೀಡಿರುವ ಮಾಹಿತಿ ಆಧರಿಸಿ, ಸದಾಶಿವನಗರದ ರಿಸೆಟ್ ಜಿಮ್ ನಲ್ಲಿ ಕಚೇರಿಯ ಮೇಲೆ, ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ವನ್ ಆಪ್ ವಿಟಮಿನ್ ಕಂಪನಿಯ ಸಿಇಒ ಹೇಮಂತ್ ಹಾಗೂ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಕುಮಾರ್ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
2 ತಿಂಗಳಾಯ್ತು ರಾಗಿಣಿ ಜೈಲು ಸೇರಿ; ಯಾಕೆ ಸಿಗುತ್ತಿಲ್ಲ ಬೇಲ್?
ಬಂದಿತರೆಲ್ಲರೂ ಬಹುತೇಕ ಸದಾಶಿವನಗರದ ನಿವಾಸಿಗಳಾಗಿದ್ದಾರೆ. ಫಾರಿನ್ ಪೋಸ್ಟ್ ಆಫೀಸ್ ಗೆ ಬಂಧಿತರಿಂದ 500 ಗ್ರಾಂ ಹೈಡ್ರೋ ಗಾಂಜಾ ಕೂಡ ದಾಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.