Bengaluru: ಸ್ನೇಹಿತನಿಗಾಗಿ ಆನ್ಲೈನ್ ಲೋನ್ ಪಡೆದು ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!

By Gowthami K  |  First Published Jul 12, 2023, 6:21 PM IST

ಪೋಷಕರು, ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ ಕಥೆ ಇದು. ಆನ್ಲೈನ್ ನಲ್ಲಿ ಲೋನ್ ಪಡೆಯುವ ಮುನ್ನ ಎಚ್ಚರವಾಗಿರಿ. ಸ್ನೇಹಿತರಿಗೆ ಸಾಲ ಕೊಡಿಸಿ ಕಟ್ಟಲಾಗದೆ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಬೆಂಗಳೂರು (ಜು.12): ಪೋಷಕರು, ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ ಕಥೆ ಇದು. ಆನ್ಲೈನ್ ನಲ್ಲಿ ಲೋನ್ ಪಡೆಯುವ ಮುನ್ನ ಎಚ್ಚರವಾಗಿರಿ. ಸ್ನೇಹಿತರಿಗೆ ಸಾಲ ಕೊಡಿಸುವ ಮುನ್ನ ತುಂಬಾ ಹುಷಾರಾಗಿರಿ. ಲೋನ್ ಕಟ್ಟಿಲ್ಲ ಎಂದು ಟಾರ್ಚರ್ ಕೊಟ್ಟ ಹಿನ್ನೆಲೆ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ 22 ವರ್ಷದ ತೇಜಸ್  ಸ್ನೇಹಿತನಿಗಾಗಿ ಆನ್ಲೈನ್ ಮೂಲಕ ಲೋನ್ ಪಡೆದಿದ್ದ. ಆದರೆ ಸ್ನೇಹಿತ ಲೋನ್ ಕಟ್ಟದೆ ಈಗ ತೇಜಸ್ ಪ್ರಾಣ ಕಳೆದುಕೊಂಡಿದ್ದಾನೆ. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಕಾಲೇಜಿಗೆ ಟಾಪರ್ ಆಗಿದ್ದ ತೇಜಸ್, ಸ್ನೇಹಿತ ಮಹೇಶ್ ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ.  ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಸಾಲ ಕಟ್ಟಿರಲಿಲ್ಲ.  ಹೀಗಾಗಿ ಲೋನ್ ಕೊಟ್ಟ ಕಂಪೆನಿ ವಿಪರೀತ ಟಾರ್ಚರ್ ನೀಡುತ್ತಿದ್ದ ಹಿನ್ನೆಲೆ ನಿನ್ನೆ ಡೆತ್ ನೋಟ್ ಬರೆದಿಟ್ಟು ತೇಜಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tap to resize

Latest Videos

undefined

7ನೇ ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ, ಪ್ರತಿ ಬಾರಿ ಜಾಮೀನು ಕೊಡಿಸಿ ಮತ್ತೆ

ಸಂಜೆ ಆರು ಗಂಟೆ ಸುಮಾರಿಗೆ ತಾಯಿಯ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ  ಹೆಚ್ಎಂಟಿ ಕ್ವಾಟ್ರಸ್ ನಲ್ಲಿರುವ ಮನೆಯಲ್ಲಿ ವಿಧಿವಿಧಾನ ಕಾರ್ಯ ಮಾಡಲಾಗಿದೆ. ಸದ್ಯ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ  ಪೋಷಕರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್‌ ಪೀಸ್‌ ಮಾಡಿ ಫ್ಲೈಓವರ್‌ ಬಳಿ ಎಸೆದ ಪಾಪಿ! 

 

click me!