ಖಾಸಗಿ ಕಂಪನಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಉದ್ಯೋಗಿಗಳು ರೊಚ್ಚಿಗೆದ್ದು, ಕಂಪನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದಲ್ಲಿ ನಡೆದಿದೆ. ರಾಹುಲ್ ಪೂಜಾರಿ, ಲ್ಯಾವ್ಸನ್ ಪೀಟರ್ ಜಾನ್ ಎಂಬ ಇಬ್ಬರು ಕೃತ್ಯ ಎಸಗಿದ್ದು, ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು.
ಬೆಂಗಳೂರು (ಅ.08): ಖಾಸಗಿ ಕಂಪನಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಉದ್ಯೋಗಿಗಳು ರೊಚ್ಚಿಗೆದ್ದು, ಕಂಪನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದಲ್ಲಿ ನಡೆದಿದೆ. ರಾಹುಲ್ ಪೂಜಾರಿ, ಲ್ಯಾವ್ಸನ್ ಪೀಟರ್ ಜಾನ್ ಎಂಬ ಇಬ್ಬರು ಕೃತ್ಯ ಎಸಗಿದ್ದು, ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು.
ರಾಹುಲ್ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿದ್ದು, ಲ್ಯಾವ್ ಸನ್ ಪೀಟರ್ ಜಾನ್ ರೀಜಿನಲ್ ಸೇಲ್ಸ್ ಮ್ಯಾನೇಜರ್ ಆಗಿದ್ದ. ಕಂಪನಿಯು ಉಮಾಶಂಕರ್ ಮತ್ತು ರೂಪ ಎಂಬುವವರ ಒಡೆತನದಲ್ಲಿತ್ತು. ಘಟನೆಯಲ್ಲಿ ಟೇಬಲ್,ಸ್ವಿಚ್ ಬೋರ್ಡ್ ಸುಟ್ಟು ಕರಕಲಾಗಿದ್ದು, ಒಟ್ಟು ಕಂಪನಿಯಲ್ಲಿ 11 ಲಕ್ಷ ಬೆಲೆ ಬಾಳುವ ಪೀಠೋಪಕರಣ ಹಾನಿಯಾಗಿದೆ. ಟಾರ್ಗೆಟ್ ಅಚೀವ್ ಮಾಡದೇ ಇದ್ದುದ್ದರಿಂದ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ರಾಹುಲ್ ಮತ್ತು ಲ್ಯಾವ್ಸನ್ ರೂಪಗೆ ಕರೆ ಮಾಡಿ ಸಂಬಳ ಕೊಡುವಂತೆ ಒತ್ತಾಯ ಮಾಡಿದ್ದರು.
ಕಾವೇರಿ, ಬರ ಸಮಸ್ಯೆ ಆಲಿಸುವುದಕ್ಕೆ ಕೇಂದ್ರ ನಿರಾಸಕ್ತಿ: ಚಲುವರಾಯಸ್ವಾಮಿ
ಆದರೆ ರೂಪ ಮತ್ತು ಉಮಾಶಂಕರ್ ಸಂಬಳ ಕೊಡಲು ನಿರಾಕರಿಸಿದ್ದರು. ಹಾಗಾಗಿ ಸೆ.27 ರಂದು ಬೆಳಗ್ಗೆ ಕಚೇರಿ ಬಳಿ ಬಂದಿದ್ದ ಇಬ್ಬರು ಯುವಕರು, ಹೌಸ್ ಕೀಪಿಂಗ್ ಕೆಲಸ ಮಾಡ್ತಿದ್ದ ಮುನ್ನಿ ಎಂಬಾಕೆಯನ್ನ ಹೊರಗೆ ಬರುವಂತೆ ಹೇಳಿದ್ದಾರೆ. ನಂತರ ಪೆಟ್ರೋಲ್ ಸುರಿದು ಯುವಕರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪುಟ್ಟೇನಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.