ಕಳ್ಳತನಕ್ಕೆ ಖದೀಮರ ಹೊಸ ಪ್ಲಾನ್! ಬೀದಿ ದೀಪಗಳ ಕರೆಂಟ್ ವೈರ್ ಕತ್ತರಿಸಿ ಮನೆಗೆ ನುಗ್ತಾರೆ ಹುಷಾರ್!

By Suvarna News  |  First Published Sep 21, 2024, 4:37 PM IST

ಕಳ್ಳರ ಹೊಸ ವರಸೆಗೆ ವಿಜಯಪುರ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಮನೆಗಳ್ಳರ ಹಾವಳಿಗೆ ಜನರು ಕಂಗಾಲಾಗಿದ್ದಾರೆ. ಸರಣಿ ರೂಪದಲ್ಲಿ ಕಳ್ತನ ನಡೆಯುತ್ತಿದ್ದು ಜನರನ್ನ ಗಾಬರಿ ಬೀಳುವಂತೆ ಮಾಡಿದೆ. ಅದ್ರಲ್ಲು ಸಹ ಕಳ್ಳತನಕ್ಕೆ ಖತರ್ನಾಕ್ ಕಳ್ಳರು ಕಂಡುಕೊಂಡಿರುವ ಹೊಸ ಟೆಕ್ನಿಕ್ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ..


- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.21) : ಕಳ್ಳರ ಹೊಸ ವರಸೆಗೆ ವಿಜಯಪುರ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಮನೆಗಳ್ಳರ ಹಾವಳಿಗೆ ಜನರು ಕಂಗಾಲಾಗಿದ್ದಾರೆ. ಸರಣಿ ರೂಪದಲ್ಲಿ ಕಳ್ತನ ನಡೆಯುತ್ತಿದ್ದು ಜನರನ್ನ ಗಾಬರಿ ಬೀಳುವಂತೆ ಮಾಡಿದೆ. ಅದ್ರಲ್ಲು ಸಹ ಕಳ್ಳತನಕ್ಕೆ ಖತರ್ನಾಕ್ ಕಳ್ಳರು ಕಂಡುಕೊಂಡಿರುವ ಹೊಸ ಟೆಕ್ನಿಕ್ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ..

Tap to resize

Latest Videos

undefined

ಬೀದಿ ದೀಪಗಳ ವೈರ್ ಕಟ್ ಮಾಡಿ ಕಳ್ಳತನ!

ಕಳ್ಳರ ಹೊಸ ವರಸೆ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಕಾರಣ ಎಂದರೆ ನಟ್ಟ ನಡುರಾತ್ರಿ ಕಳ್ಳತನಕ್ಕೆ ಬರ್ತಿರೊ ಖದೀಮರು ಬೀದಿ ಲೈಟ್‌ಗಳ ವೈರಗಳನ್ನೆ ಕತ್ತರಿಸುತ್ತಿದ್ದಾರೆ. ವೈರ್ ಕತ್ತರಿಸಿ ಕತ್ತಲೆ ಸೃಷ್ಟಿಸಿ ಕಳ್ಳತನ ಮಾಡ್ತಿದ್ದಾರೆ. ನಗರದ ಹೊರ ವಲಯದ ಮುನೇಶ್ವರ ನಗರದಲ್ಲಿ ವಿಜಯಕುಮಾರ್ ಇಂಡಿ ಎಂಬುವರ ಮನೆ ಕಳ್ಳತನ ಮಾಡಿದ್ದು. ಕಳ್ಳರು ಮನೆ ಎದುರಿದ್ದ ಬೀದಿ ದೀಪದ ವೈರ್ ಕಟ್ ಮಾಡಿ ಬಳಿಕ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯ ಕಂಡ ಏರಿಯಾ ಮಂದಿ ಬೆಚ್ಚಿಬಿದ್ದಿದ್ದಾರೆ. ಬೀದಿ ದೀಪಗಳಿಂದ ಮನೆಗಳಲ್ಲಿರುವ ಸಿಸಿ ಕ್ಯಾಮರಾಗಳಲ್ಲಿ ಕಳ್ತನದ ದೃಶ್ಯ ಸೆರೆ, ಹಾಗೂ ಮುಖಚಹರೆ ಗೊತ್ತಾಗದಂತೆ ಮಾಡಲು ಕಳ್ಳರು ಈ ಹೊಸ ವಿಧಾನ ಪ್ರಯೋಗಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಪೊಲೀಸ್ ಠಾಣೆಯಲ್ಲೇ ಕಳ್ಳತನ, ವಶಪಡಿಸಿಟ್ಟಿದ್ದ 16 ಮದ್ಯದ ಬಾಟಲಿ ಕದ್ದೊಯ್ದ 6 ಮಹಿಳೆಯರು!

ನಗರದ ಎಕ್ಸಟೆನ್ಷನ್ ಏರಿಯಾದಲ್ಲೆ ಹಾವಳಿ!

ಇನ್ನೂ ಕಳ್ಳರು ನಗರದ ಹೊರ ವಲಯಗಳನ್ನೆ ಟಾರ್ಗೆಟ್ ಮಾಡಿಕೊಂಡು ಕಳ್ತನಕ್ಕೆ ಇಳಿದಿದ್ದಾರೆ‌. ಮುನೇಶ್ವರ ನಗರ, ಯೋಗಾಪುರ, ಸಿಂದಗಿ ಬೈಪಾಸ್ ಆಚೆಗಿನ ಏರಿಯಾ, ಇತ್ತ ಸೊಲ್ಲಾಪುರ ಬೈಪಾಸ್‌ನ ಪಾನಿ ನಗರಗಳಲ್ಲಿ ಕಳ್ಳತನ ವರದಿಯಾಗಿವೆ. ನಗರದ ಹೊರ ಭಾಗದ ಮನೆಗಳಲ್ಲಿ ಕಳ್ಳತನ ಸುಲಭ ಹಾಗೂ ಸೇಫ್ ಅನ್ನೋಕಾರಕ್ಕೆ ಕಳ್ಳರು ಇದೆ ಭಾಗಗಳಲ್ಲಿ ಹಾವಳಿ ಇಡುತ್ತಿದ್ದಾರೆ ಎನ್ನುವ ಮಾಹಿತಿಗಳಿವೆ. ಅದರಲ್ಲು ಮುನೇಶ್ವರ ನಗರದಲ್ಲಿ ಇಂಡಿ ಯವರ ಮನೆ ಕಳ್ಳತನ ಮಾಡಿರುವ ಕಳ್ಳರು ಮರಳುವ ವೇಳೆ ನೂರು ಮೀಟರ್ ಅಂತರದಲ್ಲಿದ್ದ ಇನ್ನೊಂದು ಮನೆ ಎದುರಿನ ಪಲ್ಸರ್ 150 ಸಿಸಿ ಬೈಕನ್ನು ಸಹ ಕಳ್ಳತನ ಮಾಡಿದ್ದಾರೆ. ಇತ್ತ ವಿಜಯ ಇಂಡಿಯವರ ಮನೆಯಲ್ಲಿ 25 ಗ್ರಾಂ ಬಂಗಾರ, ಬೆಳ್ಳಿಯ ಸಾಮಾನು ಸೇರಿದಂತೆ ದೇವರ ಮುಂದೆ ಇಡಲಾಗಿದ್ದ 5 ಸಾವಿರ ಕ್ಯಾಶ್ ಸಹಿತ ಕಳ್ಳತನ ಮಾಡಿದ್ದಾರೆ‌‌. 

ಬೀಗ ಇರೋ ಮನೆಗಳೇ ಟಾರ್ಗೆಟ್!

ಇನ್ನೂ ಕಳ್ಳರು ಕೈಚಳಕ ತೋರಿಸಿದ ಪ್ರಕರಣಗಳನ್ನ ಗಮನಿಸಿದಾಗ ಎರಡೂ-ಮೂರು ದಿನಗಳ ಕಾಲ ಬೀಗ ಹಾಕಲಾದ ಮನೆಗಳನ್ನೆ ಆಯ್ಕೆ ಮಾಡಿ ಕಳ್ಳತನ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಮನೆಗೆ ಎರಡರಿಂದ ಮೂರು ದಿನ ಬೀಗ ಇದ್ದಲ್ಲಿ, ಗೇಟ್‌ಗಳು ಲಾಕ್ ಸ್ಥಿತಿಯಲ್ಲಿದ್ದರೆ ಅಂತಹ ಮನೆಗಳನ್ನ ಕಳ್ಳರು ಒಡೆದು ಚಿನ್ನಾಭರಣ, ಹಣ ದೋಚುತ್ತಿರೋದು ಮೇಲ್ನೋಟಕ್ಕೆ ಕಂಡು ಬರ್ತಿದೆ..

ಪ್ರವಾಸ ಹೋದಲ್ಲಿ ಠಾಣೆಗೆ ಮಾಹಿತಿ ನೀಡಿ!

ಇನ್ನೂ ನಗರದ ಹೊರ ವಲಯ, ಅಥವಾ ನಗರದ ಒಳಭಾಗದಲ್ಲಿ ಇರುವ ನಾಗರಿಕರು ಒಂದು ವೇಳೆ ಮೂರ್ನಾಲ್ಕು ದಿನ, ವಾರಗಟ್ಟಲೆ ಪ್ರವಾಸ ಹೊರಟರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸ್ಥಳೀಯ ಠಾಣೆಯ ತಮ್ಮ ಬೀಟ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಎಷ್ಟು ದಿನ ಊರಲ್ಲಿ ಇರೋದಿಲ್ಲ ಎನ್ನವ ಬಗ್ಗೆ ಮಾಹಿತಿ ಕೊಟ್ಟಲ್ಲಿ ಪೊಲೀಸರಿಗೆ ಅಂತಹ ಮನೆಗಳ ಮೇಲೆ ಹದ್ದಿನ ಕಣ್ಣಿಡಲು ಅನುಕೂಲವಾಗಲಿದೆ‌‌.

ಟೊಮೆಟೋ ಸಾಲ ತೀರಿಸಲು 50 ಲ್ಯಾಪ್‌ಟಾಪ್ ಕದ್ದ ಬೆಂಗಳೂರಿನ ಟೆಕ್ಕಿ!

ಬೀಟ್ ಹೆಚ್ಚಿಸಲು ಸಾರ್ವಜನಿಕರ ಆಗ್ರಹ!

ನಗರದ ಸೊಲ್ಲಾಪುರ ಬೈಪಾಸ್, ಸಿಂದಗಿ ನಾಕಾ, ಪಾನಿ ನಗರ, ಮುನೇಶ್ವರ ನಗರ ಹೊರವಲಯದಲ್ಲಿರುವ ಯೋಗಾಪುರ ಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಜನರು ಈ ಭಾಗದಲ್ಲಿ ಪೊಲೀಸ್ ಬೀಟ್ ಹೆಚ್ಚಿಸಲು ಆಗ್ರಹಿಸಿದ್ದಾರೆ‌‌. ರಾತ್ರಿ ವೇಳೆ ಎರಡ್ಮೂರು ಭಾರಿಯಾದರು ಪೊಲೀಸರು ಈ ಏರಿಯಾಗಳಲ್ಲಿ ಸೈರನ್ ಜೊತೆಗೆ ಅಡ್ಡಾಡಿದಲ್ಲಿ ಕಳ್ಳರಲ್ಲಿ ಭಯ ಮೂಡಿಸುವ ಜೊತೆಗೆ ಕಳ್ಳತನ ತಡೆಯಬಹುದಾಗಿದೆ ಎಂದು ಜನರು ಇಲಾಖೆಯಲ್ಲಿ ಮನವಿ ಮಾಡಿದ್ದಾರೆ‌‌..

click me!