ಸಂತೆಗೆ ಹೋಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ಹಿಡಿದು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಿಳಕ ಚೌಕ್ ಮಾರುಕಟ್ಟೆಯಲ್ಲಿ ನಡೆದಿದೆ.
ಚಿಕ್ಕೋಡಿ (ಜು.7): ಸಂತೆಗೆ ಹೋಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ಹಿಡಿದು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಿಳಕ ಚೌಕ್ ಮಾರುಕಟ್ಟೆಯಲ್ಲಿ ನಡೆದಿದೆ.
ಮಾರುತಿ ಜೋತೆಪ್ಪ ಗೋಲಬಾವಿ(32) ಮೃತ ದುರ್ದೈವಿ. ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮೃತ ಮಾರುತಿ. ಎಂದಿನಂತೆ ಇಂದೂ ಸಹ ತರಕಾರಿ ಮಾರಾಟ ಮಾಡಲು ಸಂತೆಗೆ ಹೋಗಿದ್ದಾರೆ. ಟ್ರಾನ್ಸಫಾರ್ಮರ್ ಬಳಿ ಕುಳಿತುಕೊಂಡಿದ್ದಾನೆ. ಆಕಸ್ಮಿಕವಾಗಿ ಟ್ರಾನ್ಸ್ಫರ್ ವೈರ್ ಹಿಡಿದುಕೊಂಡಿದ್ದ ಮಾರುತಿ ಈ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೆಸ್ಕಾಂ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಮಾರುತಿ ಸಹೋದರ ಶಿವಾನಂದ. ಈ ಸಂಬಂಧ ಹೆಸ್ಕಾಂ ಎಇಇ ವಿರುದ್ಧ ದೂರು
ಅಂಕೋಲದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು ಅವಘಢ
ವಿದ್ಯುತ್ ತಗುಲಿ ಹಸು-ಕರು ಸಾವು
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಕಾಮಗಾರಿಯ ವೇಳೆ ವಿದ್ಯುತ್ ತಗುಲಿ ಹಸು ಹಾಗೂ ಕರು ಮೃತಪಟ್ಟಘಟನೆ ನಗರದಲ್ಲಿ ನಡೆದಿವೆ.
ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳ ಎಡವಟ್ಟಿಗೆ ಮೂಕ ಪ್ರಾಣಿಗಳು ಬಲಿಯಾದಂತಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನಗಳಿಂದ ಇಲ್ಲಿನ ಅಕ್ಕಿಹೊಂಡದ ಬಳಿ ಸ್ಮಾರ್ಚ್‌ಸಿಟಿ ಯೋಜನೆಯಡಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗಿತ್ತು. ವಿದ್ಯುತ್ ನಿರ್ವಹಣೆಗೆ ಅಳವಡಿಸಲಾಗಿದ್ದ ವಿದ್ಯುತ್ ಫೀಡರ್ ಪಿಲ್ಲರ್ ಬಾP್ಸ… ಬಳಿ ಶಾರ್ಚ್ ಸಕ್ರ್ಯೂಟ್‌ನಿಂದಾಗಿ ಸುತ್ತಲಿನ 5 ಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಹರಡಿತ್ತು. ಮಳೆಯಿಂದಾಗಿ ನೆಲವೂ ತೇವವಾಗಿದ್ದು, ಅಲ್ಲಿಯೇ ಆಸರೆ ಪಡೆದಿದ್ದ ಹಸು ಮತ್ತು ಕರುವಿಗೆ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿವೆ.
ಅಕ್ಕಿಹೊಂಡ ಪ್ರದೇಶವು ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು, ಬೆಳಗಿನ ಸಮಯದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸ್ಮಾರ್ಟ್‌ಸಿಟಿಯವರು ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುತ್ತಿದ್ದು, ಇದರಿಂದಾಗಿ ಈ ಅವಘಡ ನಡೆದಿದೆ.
ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಸಾರ್ವಜನಿಕರು ಇದೇ ರಸ್ತೆ ಮಾರ್ಗವಾಗಿ ನಿತ್ಯ ಸಂಚರಿಸುತ್ತಾರೆ. ಈ ವೇಳೆ ಇಂತಹ ದುರ್ಘಟನೆ ನಡೆದರೆ ಯಾರು ಜವಾಬ್ದಾರರು? ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿದ್ಯುತ್ ಅವಘಡದಿಂದ ಶಾಶ್ವತ ಅಂಗವೈಕಲ್ಯ, ವೇತನವಿಲ್ಲ, ಸೌಲಭ್ಯವಿಲ್ಲ, ಸಿಬ್ಬಂದಿಗೆ ಮೆಸ್ಕಾಂ ಅನ್ಯಾಯ
ಘಟನೆ ನಡೆದ ಬಳಿಕ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಫೀಡರ್ ಪಿಲ್ಲರ್ ಬಾP್ಸ… ದುರಸ್ತಿಗೊಳಿಸುವ ಕಾರ್ಯ ಕೈಗೊಂಡರು. ಅವಘಡ ಸಂಭವಿಸಿದ ಬಳಿಕ ವಾರ್ಡ್ ಸದಸ್ಯರೊಬ್ಬರನ್ನು ಹೊರತುಪಡಿಸಿ ಪಾಲಿಕೆ ಅಧಿಕಾರಿಗಳು ಅಥವಾ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ. ಇದರಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.