ಪುತ್ತೂರು;  ಹೊಸ ಬಟ್ಟೆ ಧರಿಸಿ ನೇಣಿಗೆ ಶರಣಾದ ಕೃಷಿಕ  ವೃದ್ಧ ದಂಪತಿ

Published : Oct 18, 2021, 04:19 PM ISTUpdated : Oct 18, 2021, 04:24 PM IST
ಪುತ್ತೂರು;  ಹೊಸ ಬಟ್ಟೆ ಧರಿಸಿ ನೇಣಿಗೆ ಶರಣಾದ ಕೃಷಿಕ  ವೃದ್ಧ ದಂಪತಿ

ಸಾರಾಂಶ

* ಪುತ್ತೂರಿನಲ್ಲಿ ನೇಣು ಬಿಗಿದು‌ ವೃದ್ಧ ದಂಪತಿ ಆತ್ಮಹತ್ಯೆ * ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದಕರಿಯಲ್ಲಿ ಘಟನೆ *  ಸುಬ್ರಹ್ಮಣ್ಯ ಭಟ್ (84), ಶಾರದಾ (76) ಆತ್ಮಹತ್ಯೆ ಮಾಡಿಕೊಂಡ ದಂಪತಿ * ಹೊಸ ಬಟ್ಟೆ ಧರಿಸಿ ಆತ್ಮಹತ್ಯೆಗೆ ಶರಣಾದ ದಂಪತಿ

ಪುತ್ತೂರು(ಅ. 18)  ಪುತ್ತೂರಿನಲ್ಲಿ(Puttur) ನೇಣು ಬಿಗಿದು‌ ವೃದ್ಧ ದಂಪತಿ ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ.  ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದಕರಿಯಿಂದ ಪ್ರಕರಣ(Crime News) ವರದಿಯಾಗಿದೆ. ಸುಬ್ರಹ್ಮಣ್ಯ ಭಟ್ (84), ಶಾರದಾ (76) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸ ಬಟ್ಟೆ ಧರಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಕುಟುಂಬದ ( Agriculture) ವೃದ್ದ ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸೋಮವಾರ ಬೆಳಗ್ಗೆ ಪುತ್ರ ಕೋಣೆ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

'ಕೊಲೆ ಮಾಡಿದ್ದೇವೆ ಸಾರ್... ಬಾಡಿ ಆಟೋದಲ್ಲಿದೆ'

ಮಾಸದ ಬೆಂಗಳೂರಿನ ಮಾಸ್ ಸುಸೈಡ್ ಪ್ರಕರಣ;  ಬೆಂಗಳೂರಿನಲ್ಲಿ ಒಂದೇ ಕುಟುಂಬದ  ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. ಅಪ್ಪನ ವಿರುದ್ಧವೇ ಸುಸೈಡ್  ನೊಟ್ ಬರೆದಿಟ್ಟಿದ್ದರು.  ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಂಡು ಮನೆ ಮಾಲೀಕನ ಆಸ್ತಿ ಸಂಪಾದನೆಯ ತನಿಖೆಗೂ ಕಾರಣವಾಗಿತ್ತು. 

ಮನೆಯವರೆಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ಬೆಳೆಕಿಗೆ ಬಂದಿದ್ದೆ ನಾಲ್ಕು ದಿನದ ನಂತರ. ಅನ್ನ ಆಹಾರ ಇಲ್ಲದೇ ಪ್ರೇಕ್ಷಾ ಎಂಬ ಬಾಲಕಿ ಪವಾಡದ ರೀತಿ ಬದುಕಿ ಉಳಿದಿದ್ದಳು. ಬೆಂಗಳೂರಿನ ಕುಟುಂಬ ಪ್ರತ್ಯೇಕ ಡೆತ್  ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿತ್ತು. ಪ್ರಕರಣವನ್ನು ಪೊಲೀಸರು ವಿವಿಧ ಕೋನದಲ್ಲಿ ತನಿಖೆ ಮಾಡುತ್ತಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!