Yadgir: ಆಸ್ತಿ ವಿಚಾರಕ್ಕೆ ಅಣ್ಣನಿಂದ ತಮ್ಮನ ಪತ್ನಿ ಮೇಲೆ ಹಲ್ಲೆ!

By Govindaraj S  |  First Published Dec 14, 2022, 2:14 PM IST

ಆಸ್ತಿ ವಿಚಾರಕ್ಕೆ ಅಣ್ಣನಿಂದ ತಮ್ಮನ ಪತ್ನಿ ಮೇಲೆ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಸ್ತಿಯಲ್ಲಿ ಪಾಲು ಕೇಳಿರುವ ಕಾರಣಕ್ಕೆ ಹಲ್ಲೆ ನಡೆಸಲಾಗಿದ್ದು, ಅಣ್ಣ ಪ್ರಕಾಶ್ ಕುಟುಂಬಸ್ಥರಿಂದ ತಮ್ಮ ಗುರುನಾಥ್ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ.


ಯಾದಗಿರಿ (ಡಿ.14): ಆಸ್ತಿ ವಿಚಾರಕ್ಕೆ ಅಣ್ಣನಿಂದ ತಮ್ಮನ ಪತ್ನಿ ಮೇಲೆ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಸ್ತಿಯಲ್ಲಿ ಪಾಲು ಕೇಳಿರುವ ಕಾರಣಕ್ಕೆ ಹಲ್ಲೆ ನಡೆಸಲಾಗಿದ್ದು, ಅಣ್ಣ ಪ್ರಕಾಶ್ ಕುಟುಂಬಸ್ಥರಿಂದ ತಮ್ಮ ಗುರುನಾಥ್ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ. ಗುರುನಾಥ್ ಹಾಗೂ ಗುರುನಾಥ್ ಪತ್ನಿ ನಾಗರತ್ನ ಮೇಲೆ ಹಲ್ಲೆ ಮಾಡಿದ್ದು, ನಾಗರತ್ನಗೆ ಕಲ್ಲು, ದೊಣ್ಣೆಯಿಂದ ಪ್ರಕಾಶ್ ಕುಟುಂಬಸ್ಥರು ಹೊಡೆದಿದ್ದಾರೆ. ಇನ್ನು ನಾಗರತ್ನ ತಲೆಗೆ ಗಂಭೀರ ಗಾಯವಾಗಿದ್ದು, ಲಿಂಗಸುಗುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೋಟೆಲ್‌ಗೆ ನುಗ್ಗಿ ಸಿಸಿಟಿವಿ ನಾಶಪಡಿಸಿ, ಹಲ್ಲೆ: ಮೂವರು ಮುಸುಕುಧಾರಿ ದುಷ್ಕರ್ಮಿಗಳು ಮುಂಜಾನೆ ಹೋಟೆಲ್‌ಗೆ ನುಗ್ಗಿ ಸಿಸಿಟಿವಿ ಕ್ಯಾಮರಾ ನಾಶಗೊಳಿಸಿ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆಗೈದು ನಗದು ಹಾಗೂ ಮೊಬೈಲ್‌ ಫೋನ್‌ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರದ ಕೃಷ್ಣ ಗಾರ್ಡನ್‌ನ ಪುರುಷೋತ್ತಮ ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಡಿ.6ರ ಮುಂಜಾನೆ 1.30ರ ಸುಮಾರಿಗೆ ಮೈಸೂರು ಸ್ವಾದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.

Tap to resize

Latest Videos

undefined

ಕಬ್ಬಿನ ಗದ್ದೆಯಲ್ಲಿ ಹೂತಿದ್ದ ಮಹಿಳೆ ಶವ ಹೊರಕ್ಕೆ: ಆರೋಪಿಯ ಬಂಧನ

ಹೋಟೆಲ್‌ ಮಾಲಿಕ ಪುರುಷೋತ್ತಮ ಹಾಗೂ ಕೆಲಸಗಾರರ ಮುಂಜಾನೆ 1.30ರ ಸುಮಾರಿಗೆ ಹೋಟೆಲನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮೂವರು ಮುಸುಕುಧಾರಿ ದುಷ್ಕರ್ಮಿಗಳು ಏಕಾಏಕಿ ಹೋಟೆಲ್‌ಗೆ ನುಗ್ಗಿ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಹೋಟೆಲ್‌ನ ಸಿಸಿಟಿವಿ ಕ್ಯಾಮರಾ, ಡಿವಿಆರ್‌ ನಾಶ ಮಾಡಿದ್ದಾರೆ. ಬಳಿಕ ಕೆಲಸಗಾರರು ಹಾಗೂ ಕ್ಯಾಶ್‌ ಕೌಂಟರ್‌ನಲ್ಲಿದ್ದ .4,700 ನಗದು, ಮೊಬೈಲ್‌ ಫೋನ್‌ ಹಾಗೂ ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಅಕ್ರಮವಾಗಿ ನುಗ್ಗಿ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ ಠಾಣೆಗೆ ಕರೆದೊಯ್ದು ಹಿಂದೂ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಶ್ರೀರಂಗಪಟ್ಟಣ ಠಾಣೆ ಇನ್ಸ್‌ಪೆಕ್ಟರ್‌ ಸೇರಿ ಏಳಕ್ಕೂ ಹೆಚ್ಚು ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಠಾಣಾ ಇನ್ಸ್‌ಪೆಕ್ಟರ್‌ ಪ್ರಕಾಶ್‌, ಸಿಬ್ಬಂದಿಯಾದ ಮುಖ್ಯಪೇದೆ ವಿಜಯ್‌, ಹರೀಶ್‌, ಉಮೇಶ್‌, ಶರತ್‌, ರಾಘವೇಂದ್ರ, ಕೃಷ್ಣ, ಮಂಜುನಾಥ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪಾಂಡವಪುರ ತಾಲೂಕು ಹಿಜಾವೇ ಕಾರ್ಯಕರ್ತರು ನೀಡಿದ ದೂರಿನನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ.

ಮ್ಯಾಟ್ರಿಮೋನಿ ದುರ್ಬಳಕೆ ಮಾಡಿ ಶಿಕ್ಷಕನಿಗೆ ವಂಚನೆ: ಯುವತಿಯರ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ

ಇತ್ತೀಚೆಗೆ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಕಾನೂನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಡಿ.10ರಂದು ಬೆಳಗಿನ ಜಾವ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಹಾಗೂ ಸಿಬ್ಬಂದಿ ಹಿಂಜಾವೇ ಕಾರ್ಯಕರ್ತ ಶಶಾಂಕ್‌ ಮನೆಗೆ ಏಕಾಏಕಿ ನುಗ್ಗಿದ್ದಾರೆ. ಅವರ ತಂದೆ-ತಾಯಿ ಮನೆಯಲ್ಲಿ ಮಲಗಿರುವಾಗ ಏಳಕ್ಕೂ ಹೆಚ್ಚು ಪೊಲೀಸರು ಅತಿಕ್ರಮ ಪ್ರವೇಶ ಮಾಡಿ, ಶಶಾಂಕ್‌ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಠಾಣೆಯಲ್ಲಿ ನಿನಗೇಕೆ ಹನುಮ ಮಾಲೆ ಬೇಕು? ಸುಮ್ಮನೆ ಮನೆಯಲ್ಲಿರೋದು ಬಿಟ್ಟು ನಿನಗೇಕೆ ಬೇಕೋ ಹಿಂದುತ್ವ. ಮುಸಲ್ಮಾನರಿಗೆ 53 ರಾಷ್ಟ್ರಗಳಿವೆ. ಇಲ್ಲಿ ಪಿಎಫ್‌ಐ ಸಂಘಟನೆ ತುಂಬಾ ಗಟ್ಟಿಯಾಗಿದೆ. ಅವರಿಗೆ ನಿನ್ನ ವಿಚಾರ ತಿಳಿಸಿ ಕೊಲೆ ಮಾಡಿಸುವುದಾಗಿ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶನಿವಾರ ಈ ಸಂಬಂಧ ಹಿಂಜಾವೇಯಿಂದ ಬೃಹತ್‌ ಪ್ರತಿಭಟನೆಯೂ ನಡೆದಿತ್ತು.

click me!