ಬಾಗಲಕೋಟೆ: ಎಂಟು ಜನ ಅಂತಾರಾಜ್ಯ ಕಳ್ಳರ ಬಂಧನ

By Kannadaprabha News  |  First Published Aug 18, 2021, 3:40 PM IST

* ಇನ್ನೂ ಇಬ್ಬರಿಗಾಗಿ ತೀವ್ರ ಶೋಧ
* ಲಕ್ಷಾಂತರ ನಗದು, ಚಿನ್ನ ವಶ
* ಪೊಲೀಸರ ಕಾರ್ಯಾಚರಣೆ ಕೊಂಡಾಡಿದ ಎಸ್‌ಪಿ ಲೋಕೇಶ ಜಗಲಾಸರ್‌ 
 


ಬಾಗಲಕೋಟೆ(ಆ.18): ರಾಜ್ಯದ ವಿವಿಧ ಕಡೆ 38 ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯರನ್ನು ಬಂಧಿ​ಸುವಲ್ಲಿ ಯಶಸ್ವಿಯಾಗಿರುವ ಜಿಲ್ಲೆಯ ಪೊಲೀಸರು ಅಪಾರ ಪ್ರಮಾಣದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಲೋಕೇಶ ಜಗಲಾಸರ್‌ ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದರು. ಆಂಧ್ರ ಮತ್ತು ಮಹಾರಾಷ್ಟ್ರ, ತಮಿಳುನಾಡು ಮೂಲದ ಅಂತಾರಾಜ್ಯ ಕಳ್ಳರನ್ನು ಬಂಧಿ​ಸುವಲ್ಲಿ

ಜಿಲ್ಲೆಯ ಹುನಗುಂದ ಹಾಗೂ ಇಳಕಲ್ಲ ಪೊಲೀಸರು ಯಶಸ್ವಿಯಾಗಿದ್ದು ಹತ್ತು ಜನ ಆರೋಪಿಗಳ ಪೈಕಿ ಈಗಾಗಲೇ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರ ಹುಡುಕಾಟಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಆರೋಪಿಗಳಿಂದ ಒಟ್ಟು 98 ಲಕ್ಷ ಮೌಲ್ಯದ ಬಂಗಾರ, ಹಣ ಸೇರಿ 41 ಲಕ್ಷ ಮೌಲ್ಯದ ಹಣ ಜಪ್ತಿ ಮಾಡಲಾಗಿದೆ. ಎಂಟು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ತಿಳಿಸಿದ ಅವರು, ಸಾರ್ವಜನಿಕರು ಬ್ಯಾಂಕ್‌ನಿಂದ ಹೆಚ್ಚಿನ ದುಡ್ಡು ತರುವವರಿದ್ದರೆ ಜಾಗ್ರತೆ ವಹಿಸಬೇಕು. ಹಣ ತರುವಾಗ ಅಪರಿಚಿತರ ಜೊತೆ ಮಾತನಾಡಬೇಡಿ ಎಂದು ಸಲಹೆ ನೀಡಿದರು.

Latest Videos

undefined

ಬಾಗಲಕೋಟೆ: ಸಿಎಫ್‌ಐ ಸದಸ್ಯತ್ವಕ್ಕೆ ಮುಂದಾಗಿದ್ದ ಹಲವರು ವಶಕ್ಕೆ

2019ರ ಮೇ 22ರಂದು ಇಳಕಲ್ಲನಲ್ಲಿ ಮುಕುಂದ ತಿರಪಾಳಿ ಎಂಬುವರು ಬ್ಯಾಂಕಿನಿಂದ ಹಣ ತರುವ ಸಂದರ್ಭದಲ್ಲಿ ಇದೆ ಕಳ್ಳರ ತಂಡ ಅವರ ಗಮನವನ್ನು ಬೇರೆಡೆ ಸೆಳೆದು 1 ಲಕ್ಷ ಹಣವನ್ನು ಕಳ್ಳತನ ಮಾಡಿತ್ತು. ನಂತರ ಪ್ರಕರಣದ ತನಿಖೆಯನ್ನು ಸಾಕಷ್ಟು ಮುಂದುವರೆಸಿದ್ದರೂ ಯಾವುದೇ ಪ್ರಯೋಜನಕ್ಕೆ ಬಂದಿರಲ್ಲಿಲ್ಲ. ಆದರೆ ಸೋಮವಾರ ಇದೆ ತಂಡ ಇಳಕಲ್ಲ ನಗರದ ಕೆಲವು ಪ್ರದೇಶದಲ್ಲಿ ಕಳ್ಳತನದ ಪ್ರಯತ್ನದಲ್ಲಿದ್ದಾಗ ಅವರನ್ನು ವಿಚಾರಿಸಿದ ಪೊಲೀಸರಿಗೆ ಸಂಶಯ ಬಂದು ಮತ್ತಷ್ಟು ವಿಚಾರಿಸಿದಾಗ ಎಲ್ಲ ಪ್ರಕರಣಗಳು ಬೆಳಕಿಗೆ ಬಂದವು ಎಂದು ವಿವರಿಸಿದರು.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಹುನಗುಂದ ಸಿಪಿಐ ಹೊಸಕೇರಪ್ಪ, ಇಳಕಲ್ಲ ಪಿಎಸ್‌ಐ ಎಸ್‌.ಬಿ.ಪಾಟೀಲ ನೇತೃತ್ವದ ತಂಡದ ಕಾರ್ಯಾಚರಣೆ ಕೊಂಡಾಡಿರುವ ಅವರು ಅವರಿಗೆ 50 ಸಾವಿರ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನೀಡಿದರು.
 

click me!