ಚೈನೀಸ್ ಲೋನ್ ಆಪ್ ವಿರುದ್ಧ ಬೆಂಗಳೂರು ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ 18 ಪ್ರಕರಣಗಳು ದಾಖಲು
ಬೆಂಗಳೂರು(ಅ.23): ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಐದು ಚೈನೀಸ್ ಲೋನ್ ಅಪ್ಲಿಕೇಶನ್ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ 78 ಕೋಟಿ ಜಪ್ತಿ ಮಾಡಿದ್ದಾರೆ. ಚೈನೀಸ್ ಲೋನ್ ಆಪ್ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದು, ಈ ಆಧಾರದ ಮೇಲೆ ಇಡಿ ಅಧಿಕಾರಿಗಳು ಕಾರ್ಯಾಸಚರಣೆ ಕೈಗೊಂಡಿದ್ದಾರೆ. ಇದೇ ಪ್ರಕರಣ ಸಂಬಂಧ ಈವರೆಗೆ .95 ಕೋಟಿ ಜಪ್ತಿ ಮಾಡಿದಂತಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಚೀನಾದ ಪ್ರಜೆಗಳು ಮೊಬೈಲ್ ಅಪ್ಲಿಕೇಶ್ ಸೃಷ್ಟಿಸಿ ಜನತೆಗೆ ಸಾಲ ನೀಡಲಾಗುತ್ತಿತ್ತು. ಸಾಲ ಪಡೆದವರ ಮೊಬೈಲ್ ವಿವರ ಸೇರಿದಂತೆ ಹಲವು ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ಬಡ್ಡಿ ಸಮೇತ ಸಾಲ ಮರುಪಾವತಿಸಿದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ಕೊಡುತ್ತಿದ್ದರು. ಹಣ ನೀಡದಿದ್ದರೆ ಮೊಬೈಲ್‌ನಲ್ಲಿನ ಪರಿಚಿತರ ನಂಬರ್‌ಗೆ ಅಶ್ಲೀಲ ಸಂದೇಶ ಕಳುಹಿಸಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ 18 ಎಫ್‌ಐಆರ್ ದಾಖಲಾಗಿದ್ದವು. ಈ ಬಗ್ಗೆ ತನಿಖೆ ನಡೆದಾಗ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕೈಗೊಳ್ಳಲಾಗಿದೆ.
ಜೀವ ಹಿಂಡುವ ಲೋನ್ ಆ್ಯಪ್'ಗಳು: ಸಾವಿರಾರು ಜನರ ಬದುಕು ನರಕ
ಭಾರತೀಯ ಪ್ರಜೆಗಳ ನಕಲಿ ದಾಖಲೆ ಬಳಸಿ ನಕಲಿ ನಿರ್ದೇಶಕರನ್ನು ನೇಮಿಸಿಕೊಂಡಿದ್ದು, ಕೆಲ ವ್ಯಾಪಾರಿಗಳ ಐಟಿಗಳನ್ನು ಬಳಸಿ ಅವರ ಬ್ಯಾಂಕ್ ಖಾತೆಗಳ ಮೂಲಕ ಅಪರಾಧ ಕೃತ್ಯಕ್ಕೆ ಹಣಕಾಸಿನ ವ್ಯವಹಾರ ನಡೆಸಿರುವುದು ಕಂಡು ಬಂದಿದೆ. ಕೆವೈಸಿ ದಾಖಲೆಗಳಲ್ಲಿ ನಕಲಿ ವಿಳಾಸ ನಮೂದಿಸಿರುವುದು ಸಹ ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.