
ಸೋಷಿಯಲ್ ಮೀಡಿಯಾ ಸಾಕಷ್ಟು ಪ್ರಭಾವ ಬೀರುತ್ತಿರುವ ನಡುವೆಯೇ, ಹೆಚ್ಚಿನವರಿಗೆ ತಮ್ಮ ಬದುಕಿನ ಎಲ್ಲಾ ಕ್ಷಣಗಳನ್ನೂ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಇಲ್ಲವೇ ಸ್ಟೇಟಸ್ ಹಾಕಿಕೊಳ್ಳುವ ಹುಚ್ಚು. ಅದರಲ್ಲಿಯು ಪ್ರವಾಸಕ್ಕೆ ಹೋಗಿದ್ದರೆ ಅಥವಾ ಹೊರಡುವುದಿದ್ದರೆ ಅದರ ಫುಲ್ ಡಿಟೇಲ್ಸ್ ಕೊಟ್ಟು ಸ್ಟೇಟಸ್ ಹಾಕಿಕೊಂಡು ಬಿಡುತ್ತಾರೆ. ತಾನು ಎಂಜಾಯ್ ಮಾಡುತ್ತಿರುವುದು ಬೇರೆಯವರಿಗೆ ತಿಳಿಯಲಿ ಎನ್ನುವುದು ಕೆಲವರ ಉದ್ದೇಶವಾಗಿದ್ದರೆ, ಅದನ್ನು ನೋಡಿ ಅವರಿಗೆ ಆಗದವರು ಯಾರೋ ಹೊಟ್ಟೆಕಿಚ್ಚು ಪಟ್ಟುಕೊಳ್ಳಲಿ ಎನ್ನುವ ಕಾರಣವೂ ಅದರಲ್ಲಿ ಅಡಗಿರುತ್ತದೆ. ಒಟ್ಟಿನಲ್ಲಿ ಸ್ಟೇಟಸ್ ನೋಡಿದ್ರೆ ಆ ದಿನ ಆ ವ್ಯಕ್ತಿ ಯಾವ ಮೂಡ್ನಲ್ಲಿ ಇದ್ದಾರೆ ಎನ್ನುವುದು ತಿಳಿಯುತ್ತದೆ. ಎಷ್ಟೋ ಬಾರಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಹಾಕುವ ಸ್ಟೇಟಸ್ಗಳೇ ಹೆಚ್ಚಾಗಿರುತ್ತವೆ.
ಉದ್ದೇಶ ಏನೇ ಇರಲಿ. ಆದರೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಎಷ್ಟೋ ಬಾರಿ ಹಾಕಿಕೊಳ್ಳುವ ಸ್ಟೇಟಸ್ ನಿಮ್ಮ ಇರೋ ಬರೋ ಎಲ್ಲಾ ಸ್ಟೇಟಸ್ಗಳನ್ನು ಮಣ್ಣುಪಾಲು ಮಾಡಬಹುದು. ಅರ್ಥಾತ್, ಈ ಸ್ಟೇಟಸ್ ಅನ್ನೋದು ಕಳ್ಳರಿಗೆ ನೀವೇ ನಿಮ್ಮ ಮನೆಯ ಬೀಗದ ಕೀಲಿ ಕೊಟ್ಟು ಕಳ್ಳತನ ಮಾಡಲು ಬಾ... ಎಂದು ಆಹ್ವಾನ ನೀಡಿದಂತೆ ಎಂದಿದ್ದಾರೆ. ಪ್ರವಾಸಗಳಿಗೆ ಹೋದ ಸಂದರ್ಭಗಳಲ್ಲಿ I am enjoying ಇಲ್ಲಿ.. ಅಲ್ಲಿ... ಎಂದೆಲ್ಲಾ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಇವರು ಪ್ರವಾಸಗಳನ್ನು ಎಂಜಾಯ್ ಮಾಡಲು ಹೋಗಿದ್ದಾರೋ ಅಥವಾ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್ಲೋಡ್ ಮಾಡಿಕೊಳ್ಳಲು ಹೋಗಿದ್ದಾರೋ ಎನ್ನುವುದು ಕನ್ಫ್ಯೂಸ್ ಆಗುವ ರೀತಿಯಲ್ಲಿ ಇರುತ್ತದೆ. ನೀವು ಹೀಗೆ ಹಾಕಿಕೊಳ್ಳುವ ಸ್ಟೇಟಸ್ಸು, ಅಪ್ಲೋಡ್ ಮಾಡುವ ಫೋಟೋಗಳು, ನೀವು ಎಲ್ಲಿದ್ದೀರಿ ಎಂದು ನೀಡುವ ಮಾಹಿತಿಗಳನ್ನು ನೋಡಿ ನಿಮ್ಮ ಸ್ನೇಹಿತರು ಲೈಕ್ ಮಾಡಿ ಕಮೆಂಟ್ ಮಾಡುತ್ತಾರೋ ಬಿಡುತ್ತಾರೋ, ಆದರೆ ಕಳ್ಳರಿಗೆ ಇದು ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದಾರೆ ಡಿವೈಎಸ್ಪಿ ಎಲ್.ವೈ ರಾಜೇಶ್.
ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ಅವರು ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, ಹಾಸ್ಟೆಲ್ ಒಂದರಲ್ಲಿ ತಪ್ಪು ಮಾಡಿ ತಮ್ಮ ಭಯದಿಂದ ಓಡಿಹೋದ ಹುಡುಗ, ಮುಂದೆ ಅಮೆರಿಕದ ಸ್ಟಾರ್ ಹೋಟೆಲ್ನಲ್ಲಿ ಶೆಫ್ ಆಗುವವರೆಗೆ ಹೇಗೆ ಬೆಳೆದ ಎನ್ನುವ ರೋಚಕ ಕಥೆಯನ್ನು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ನಾವು ಹಾಕುವ ಸ್ಟೇಟಸ್ನಿಂದ ಹೇಗೆ ಕಳ್ಳರನ್ನು ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ.
ಅದಕ್ಕೆ ಉದಾಹರಣೆ ಕೊಟ್ಟ ಡಿವೈಎಸ್ಪಿ ರಾಜೇಶ್ ಅವರು, ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಒಬ್ಬಾತ I am Enjoying in Goa ಅಂತ ಸ್ಟೇಟಸ್ ಹಾಕ್ಕೊಂಡಾ- ವಾಪಸ್ ಮನೆಗೆ ಬಂದ್ ನೋಡಿದ್ರೆ ಕಳ್ಳರು ಮನೆಯನ್ನೆಲ್ಲಾ ಕ್ಲೀನ್ ಮಾಡಿ ಹೋಗಿದ್ರು. ಆಮೇಲೆ ಗೊತ್ತಾಗಿದ್ದು, ಈತನ ಸ್ಟೇಟಸ್ ನೋಡಿ ಎಷ್ಟು ದಿನ ಆತ ಮನೆಗೆ ಬರುವುದಿಲ್ಲ ಎನ್ನುವುದೆಲ್ಲಾ ಕಳ್ಳರಿಗೆ ತಿಳಿದಿದೆ. ಆದ್ದರಿಂದ ಕರಾಮತ್ತು ತೋರಿಸಿದ್ದಾರೆ ಎಂದಿದ್ದಾರೆ. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಿರೋದನ್ನು ಸೋಷಿಯಲ್ ಮೀಡಿಯಾದ ಮೂಲಕ ಜಗಜ್ಜಾಹೀರ ಮಾಡಲೇಬೇಕು ಎಂದಾದರೆ ವಾಪಸ್ ಬಂದ ಮೇಲೆ I enjoyed in Goa ಅಂತ ಹಾಕಿಕೊಳ್ಳಿ, ಆದರೆ ಹೋಗುವಾಗ ನಿಮ್ಮ ಮನೆ ಕೀಲಿಕೈಯನ್ನು ಕಳ್ಳರಿಗೆ ಕೊಟ್ಟು ಹೋಗ್ಬೇಡಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ