ಖತರ್ನಾಕ್ ಲೇಡಿಯೊಬ್ಬಳು ಖ್ಯಾತ ವೈದ್ಯನಿಗೆ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ವಿಡಿಯೋ ಕಾಲ್ ಮಾಡಿ ಆ ವೈದ್ಯರಿಗೆ ಹೇಗೆ ಬ್ಲ್ಯಾಕ್ ಮೇಲ್ ಮಾಡಿದ್ದಳು ಎನ್ನುವ ಬಗ್ಗೆ ಡಿವೈಎಸ್ಪಿ ರಾಜೇಶ್ ಮಾತನಾಡಿದ್ದಾರೆ ನೋಡಿ...
'ಆತ ನನ್ನ ಕ್ಲೋಸ್ ಫ್ರೆಂಡು, ಖ್ಯಾತ ವೈದ್ಯ ಬೇರೆ. 47 ವರ್ಷ. ಒಳ್ಳೆ ಫ್ಯಾಮಿಲಿನೂ ಇದೆ. ಒಂದು ದಿನ ಆತ ನನ್ನನ್ನು ನೋಡಲು ಪೊಲೀಸ್ ಠಾಣೆಗೆ ಬಂದ. ಮಾತನಾಡ್ತಾ ವಿಷಯ ಕೇಳಿದೆ. ಸುಮ್ಮನೇ ಬಂದೆ ಅಂದ. ಪೊಲೀಸ್ ಠಾಣೆಗೆ ಯಾರೂ ಸುಮ್ಮನೇ ಬರಲ್ಲ ಎನ್ನೋದು ನನಗೆ ಗೊತ್ತು. ಅದಕ್ಕಾಗಿ ಏನೋ ಇದೆ ಅಂತ ಗೊತ್ತಾಯ್ತು. ನಿಧಾನಕ್ಕೆ ಬಾಯಿ ಬಿಡಿಸಿದೆ, ಅವನು ಹೇಳ್ತಿರುವಾಗಲೇ ಬೇಕಿತ್ತಾ ನಿನಗೆ ಇದು ಎಂದು ಮಧ್ಯೆ ಬಾಯಿ ಹಾಕುವ ಮನಸ್ಸಾಯ್ತು. ಆದರೆ ಈ ವಿಷಯವನ್ನು ಕೆದಕಿ ಕೆದಕಿ ಕೇಳಿದ್ದಾಗ ಬಾಯಿ ಬಿಟ್ಟಿದ್ದ. ಮತ್ತೆ ನಾನು ಮಧ್ಯೆ ಬಾಯಿ ಹಾಕಿದ್ರೆ ಅವನು ಮುಂದೆ ಏನೂ ಹೇಳಲ್ಲ ಎನ್ನೋದು ಗೊತ್ತಾಗಿ, ಅವನು ಹೇಳ್ತಿರೋದನ್ನೆಲ್ಲಾ ಕೇಳಿಸಿಕೊಂಡು ಶಾಕ್ ಆದೆ...' ಎನ್ನುತ್ತಲೇ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ಡಿವೈಎಸ್ಪಿ ಎಲ್.ವೈ. ರಾಜೇಶ್.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ಅವರು ನೀಡಿರುವ ಸಂದರ್ಶನದಲ್ಲಿ, ಫೇಸ್ಬುಕ್ನಲ್ಲಿ ಗೊತ್ತಿಲ್ಲದೇ ಇರುವವರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ರೆ ಏನಾಗುತ್ತೆ ಎನ್ನುವುದನ್ನು ಈ ಘಟನೆಯ ಉದಾಹರಣೆ ಕೊಟ್ಟು ವಿವರಿಸಿದ್ದಾರೆ. ಆತ ನನಗೆ ಹೇಳಿದ್ದಿಷ್ಟು ಎನ್ನುತ್ತಲೇ ಆ ಘಟನೆ ವಿವರಿಸಿದ್ದಾರೆ. 'ಮಕ್ಕಳು ಎಲ್ಲಾ ಊರಿಗೆ ಹೋಗಿದ್ರು, ನಾನು ಒಬ್ಬನೇ ಮನೆಯಲ್ಲಿ ಇದ್ದೆ. ಆಸ್ಪತ್ರೆಯಿಂದ ವಾಪಸ್ ಬಂದ ಮೇಲೆ ಸುಮ್ಮನೇ ಫೇಸ್‌ಬುಕ್ ನೋಡ್ತಾ ಇದ್ದೆ. ಒಬ್ಬಳು ಸುಂದರ ಹುಡುಗಿಯ ಫ್ರೆಂಡ್ ರಿಕ್ವೆಸ್ಟ್ ಬಂತು. ಅವಳು ಯಾರು ಅಂತ ನನಗೆ ಗೊತ್ತಿರಲಿಲ್ಲ. ಹುಡುಗಿ ತುಂಬಾ ಚೆನ್ನಾಗಿ ಕಾಣಿಸ್ತಿದ್ದಳು ಅಂತ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಬಿಟ್ಟೆ. ನಂತರ ಮೆಸೆಂಜರ್ನಲ್ಲಿ ಮೆಸೇಜ್ ಕಳಿಸಿ ಫೋನ್ ನಂಬರ್ ಕೊಡಲು ಹೇಳಿದಳು. ನನ್ನ ತಲೆಗೆ ಅದೇನಾಗಿತ್ತೋ ಗೊತ್ತಿಲ್ಲ. ನಾನು ನನ್ನ ಫೋನ್ ನಂಬರ್ ಕೊಟ್ಟೆ. ಅವಳೂ ಅವಳ ಫೋನ್ ನಂಬರ್ ಕೊಟ್ಟಳು. ಮುಂದೆ ಆದದ್ದೇ ದುರಂತ' ಎಂದು ವೈದ್ಯರು ಡಿವೈಎಸ್ಪಿ ರಾಜೇಶ್ಗೆ ಹೇಳಿದ್ದಾರೆ.
undefined
'ವಾಟ್ಸ್ಆ್ಯಪ್ ನಂಬರ್ ಪಡೆದುಕೊಂಡ ಆಕೆ ಮೊದಲು ಹಾಗೆ ಕರೆ ಮಾಡಿದಳು. ಆಮೇಲೆ ವಿಡಿಯೋ ಕಾಲ್ ಮಾಡಿದಳು. ನಾನು ಸುಮ್ಮನೇ ಇರದೆ ಆ ಕಾಲ್ ಪಿಕ್ ಮಾಡಿದೆ. ಅವಳು ತನ್ನ ಒಂದೊಂದೇ ಬಟ್ಟೆ ಬಿಚ್ಚಳು ಶುರು ಮಾಡಿದಳು. ನನಗೂ ಅದನ್ನು ನೋಡಿ ಏನೇನೋ ಆಯಿತು. ಕೊನೆಗೆ ನನ್ನನ್ನೂ ಬೆತ್ತಲಾಗುವಂತೆ ಹೇಳಿದಳು. ನನ್ನ ತಲೆ ನನ್ನ ಸ್ವಾಧೀನದಲ್ಲಿ ಇರಲಿಲ್ಲ. ಕೊನೆಗೆ ಆಕೆ ನನ್ನ ಬೆತ್ತಲೆಯ ದೇಹದ ಸ್ಕ್ರೀನ್ ರಿಕಾರ್ಡ್ ಮಾಡಿಕೊಂಡಿದ್ದಾಳೆ. ಅದನ್ನು ನನಗೆ ಕೊನೆಗೆ ಕಳಿಸಿದ್ಲು. ನನ್ನ ಎಫ್ಬಿಯಿಂದ ನಾನು ಬರೆದ ಸಿಸ್ಟರ್, ಬ್ರದರ್ ಎಲ್ಲಾ ಸಂಬಂಧ ನೋಡಿಕೊಂಡಿದ್ದಾಳೆ. ನನ್ನ ಸ್ನೇಹಿತನೊಬ್ಬನಿಗೆ ವಿಡಿಯೋ ಕಳುಹಿಸಿದ್ದಾಳೆ. ಆತ ನನಗೆ ಕಾಲ್ ಮಾಡಿ ಏನಪ್ಪಾ ಇದು ಎಂದಾಗಲೇ ನಾನು ಮೋಸ ಹೋಗಿದ್ದು ತಿಳಿಯಿತು' ಎಂದು ವೈದ್ಯರು ರಾಜೇಶ್ಗೆ ಹೇಳಿದ್ದಾರೆ.
'ನಂತರ ಆಕೆ ಕಾಲ್ ಮಾಡಿ ಹಣದ ಬೇಡಿಕೆ ಇಟ್ಟಳು. ಇಲ್ಲದಿದ್ದರೆ ಸಂಬಂಧಿಕರಿಗೆ ಕಳಿಸುತ್ತೇನೆ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದುಬಿಟ್ಟಳು. ದುಡ್ಡಿನ ಬೇಡಿಕೆ ಹೆಚ್ಚುತ್ತಲೇ ಹೋಯಿತು. ಈ ವಿಡಿಯೋ ಏನಾದ್ರೂ ನನ್ನ ಹೆಂಡತಿ ಕೈಗೆ ಸಿಕ್ಕರೆ ಅಷ್ಟೇ ಕಥೆ ಎಂದು ಭಯಪಟ್ಟುಕೊಂಡೆ. ಏನು ಮಾಡಬೇಕು ಎಂದು ಗೊತ್ತಾಗ್ತಿಲ್ಲ. ಏನಾದ್ರೂ ಮಾಡು' ಎಂದು ಡಿವೈಎಸ್ಪಿ ರಾಜೇಶ್ ಮುಂದೆ ವೈದ್ಯ ಗೋಳು ತೋಡಿಕೊಂಡಿದ್ದಾರೆ. ಆ ಬಳಿಕ, ದೂರು ಕೊಟ್ಟಿರುವುದಾಗಿ ಆಕೆಗೆ ತಿಳಿಸು ಎಂದೆಲ್ಲಾ ನಾನು ಹೇಳಿದೆ. ಆತ ಹಾಗೇ ಮಾಡಿದ. ನಂತರ ಅವಳು ಕಾಂಟಾಕ್ಟ್ ಮಾಡಲಿಲ್ಲ. ಆದರೆ ಆಕೆ ಮಹಾನ್ ಕಳ್ಳಿ.ಮೊಬೈಲ್ ನಂಬರ್ ಸುಲಭದಲ್ಲಿ ಸಿಗುವ ರೀತಿಯಲ್ಲಿ ಈ ವ್ಯವಹಾರ ಮಾಡಿರಲಿಲ್ಲ. ಬೇರೆ ಬೇರೆ ಯಾವುದೊ ನಂಬರ್ಗೆ ಕನೆಕ್ಟ್ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದಳು ಎಂದಿರುವ ರಾಜೇಶ್ ಅವರು, ಯಾವುದೇ ಗೊತ್ತಿಲ್ಲದ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವಾಗ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಮಾಹಿತಿ ನೀಡಿದ್ದಾರೆ.
ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್