Bengaluru Crime: ಕುಡಿದ ಮತ್ತಲ್ಲಿ ಕಟ್ಟಡದಿಂದ ಜಿಗಿದ ಕಾರ್ಮಿಕ: ಸ್ಥಳದಲ್ಲೇ ಸಾವು

By Kannadaprabha News  |  First Published Feb 11, 2023, 8:00 AM IST

ಮದ್ಯದ ಅಮಲಿನಲ್ಲಿ ಕಾರ್ಮಿಕನೋರ್ವ ಕಟ್ಟಡವೊಂದರ ಮಹಡಿ ಏರಿ ಮತ್ತೊಂದು ಕಟ್ಟಡದ ಮಹಡಿಗೆ ಜಿಗಿಯುವಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಬೆಂಗಳೂರು (ಫೆ.11) : ಮದ್ಯದ ಅಮಲಿನಲ್ಲಿ ಕಾರ್ಮಿಕನೋರ್ವ ಕಟ್ಟಡವೊಂದರ ಮಹಡಿ ಏರಿ ಮತ್ತೊಂದು ಕಟ್ಟಡದ ಮಹಡಿಗೆ ಜಿಗಿಯುವಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾರತ್ತಹಳ್ಳಿ(Marathahally)ಯ ಪಣತ್ತೂರು ಕಾರ್ಮಿಕ ಶೆಡ್‌ ನಿವಾಸಿ ಸಮೀರ್‌ ತಾಪ(Sameer Thapa)(21) ಮೃತ ಕಾರ್ಮಿಕ. ನೇಪಾಳ ಮೂಲದ ಸಮೀರ್‌ ಕೆಲ ತಿಂಗಳಿಂದ ಕಾರ್ಮಿಕರ ಶೆಡ್‌ನಲ್ಲಿ ನೆಲೆಸಿದ್ದ. ಮದ್ಯ ವ್ಯಸನಿಯಾಗಿದ್ದ ಈತ ಗುರುವಾರ ರಾತ್ರಿ11.30ರ ಸುಮಾರಿಗೆ ಕಂಠಮಟ್ಟದವರೆಗೆ ಮದ್ಯ ಸೇವಿಸಿ ಕಾರ್ಮಿಕರ ಶೆಡ್‌ ಬಳಿಗೆ ಬಂದಿದ್ದಾನೆ. ಈ ವೇಳೆ ಕಾರ್ಮಿಕರ ಶೆಡ್‌ಗೆ ತೆರಳುವ ಬದಲು ಶೆಡ್‌ ಪಕ್ಕದಲ್ಲಿರುವ ಒಂದು ಅಂತಸ್ತಿನ ಕಟ್ಟಡದ ಮಹಡಿಗೆ ಏರಿದ್ದಾನೆ. ಬಳಿಕ ಪಕ್ಕದ ಕಟ್ಟಡದ ಮಹಡಿಗೆ ಜಿಗಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Tap to resize

Latest Videos

ಕುಡಿದ ಮತ್ತಲ್ಲಿ ಮೂವರ ಮೇಲೆ ಹಲ್ಲೆ; ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ..!

ಸಮೀರ್‌ ಮದ್ಯದ ಅಮಲಿನಲ್ಲಿ ಕಾರ್ಮಿಕರ ಶೆಡ್‌ ಪಕ್ಕದ ವಾಸದ ಮನೆಯ ಕಟ್ಟಡದ ಮಹಡಿ ಏರಿದ್ದಾನೆ. ಉನ್ಮಾದದಲ್ಲಿ ಪಕ್ಕದ ಕಟ್ಟಡದ ಮಹಡಿಗೆ ಜಿಗಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಪಕ್ಕದ ಕಟ್ಟಡದ ಮಹಡಿಯಲ್ಲಿ ರಾತ್ರಿ ವೇಳೆ ನಾಯಿಗಳು ಇರುತ್ತವೆ ಎನ್ನಲಾಗಿದೆ. ಈಗ ಮಹಡಿಗೆ ಜಿಗಿಯುವಾಗ ನಾಯಿಗಳು ಬೊಗಳಿದ್ದು, ಇದರಿಂದ ಹೆದರಿ ಆಯತಪ್ಪಿ ಬಿದ್ದಿರುವ ಸಾಧ್ಯತೆಯಿದೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸ್ಟಿಲರಿ ಘಟಕದಲ್ಲಿ ಬ್ಲಾಸ್ಟ್‌: ಯುವಕ ಸಾವು

ಬಾಗಲಕೋಟೆ: ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದಲ್ಲಿರುವ ನಿರಾಣಿ ಡಿಸ್ಟಿಲರಿ ಘಟಕದಲ್ಲಿ ಶುಕ್ರವಾರ ಡಿಸ್ಟಿಲರಿ ಬ್ಲಾಸ್ಟ್‌ ಆಗಿರುವ ಘಟನೆ ನಡೆದಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.

\ಕುಡಿದ ಮತ್ತಲ್ಲಿ ಭಾವನಿಗೆ ಗುಂಡಿಟ್ಟು ಕೊಂದ ಭಾಮೈದ

ಗುರುನಾಥ ಹುಚ್ಚನ್ನವರ (27) ಮೃತಪಟ್ಟಿರುವ ಕಾರ್ಮಿಕ. ಸಚಿವ ನಿರಾಣಿ ಒಡೆತನದಲ್ಲಿನ ಡಿಸ್ಟಿಲರಿ ಘಟಕದಲ್ಲಿ ಬ್ಲಾಸ್ಟ್‌ ನಡೆದಿದ್ದು, ಬ್ಲಾಸ್ಟ್‌ನಿಂದ ಓರ್ವ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಮುಧೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!