
ಆಗ್ರಾ (ಆ. 09): ಉತ್ತರಪ್ರದೇಶದ ಆಗ್ರಾದಲ್ಲಿ ಡ್ರಗ್ ಡಿ-ಡಿಕ್ಷನ್ ಸೆಂಟರ್‌ನಲ್ಲಿ ಉದ್ಯೋಗಿಗಳು ಯುವಕನನ್ನು ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಆಗ್ರಾದ ಸಿಕಂದರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ವ್ಯಸನ ಮುಕ್ತ ಕೇಂದ್ರದ ವ್ಯಕ್ತಿಯೊಬ್ಬರು ಇಡೀ ದುರಂತವನ್ನು ವಿವರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ನರಳುತ್ತಿರುವುದು ಕಂಡು ಬಂದಿದೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಆಗಸ್ಟ್ 3 ರ ರಾತ್ರಿ, ಬಾಬಿ ರಾಥೋಡ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಸಿಕಂದರಾ ಪ್ರದೇಶದ ನಯಾ ಜೀವನ್ ಡಿ-ಅಡಿಕ್ಷನ್ ಸೆಂಟರ್‌ಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. "ಆಗಸ್ಟ್ 7 ರಂದು ಬೆಳಿಗ್ಗೆ ಡಿ-ಅಡಿಕ್ಷನ್ ಸೆಂಟರ್ ಉದ್ಯೋಗಿಯಿಂದ ತಮಗೆ ಕರೆ ಬಂದಿತ್ತು, ತಮ್ಮ ಸೋದರಳಿಯ ಬಾಬಿ ಹೃದಯಾಘಾತದಿಂದ ಬಳಲುತ್ತಿದ್ದಾರೆ ಮತ್ತು ಎಸ್‌ಎನ್ ಮೆಡಿಕಲ್‌ಗೆ ಕಳುಹಿಸಲಾಗುತ್ತಿದೆ ಎಂದರು" ಎಂದು ರಾಥೋಡ್ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ರಾಥೋಡ್ ಅವರ ಸಂಬಂಧಿಯೊಬ್ಬರು, "ನಾವು ಆಸ್ಪತ್ರೆಗೆ ಬಂದಾಗ, ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು, ಎಂದು ಸಂಬಂಧಿಕರು ಹೇಳಿದರು, ನಾವು ಸೋದರಳಿಯನ ಅಂತ್ಯಕ್ರಿಯೆಯನ್ನು ಮಾಡಲು ಹೋದಾಗ, ಅವರ ದೇಹದಲ್ಲಿ ಗಾಯದ ಗುರುತುಗಳು ಇರುವುದನ್ನು ಅಲ್ಲಿದ್ದ ಎಲ್ಲರೂ ಗಮನಿಸಿದ್ದೇವೆ. ನಾವು ಗಾಯದ ಗುರುತುಗಳನ್ನು ಕ್ಯಾಮರಾದಲ್ಲಿ ದಾಖಲಿಸಿದ್ದೇವೆ." ಎಂದು ತಿಳಿಸಿದ್ದಾರೆ.
ಆಗಸ್ಟ್ 8 ರಂದು ಕುಟುಂಬಸ್ಥರು ವ್ಯಸನ ಮುಕ್ತ ಕೇಂದ್ರಕ್ಕೆ ಹೋದಾಗ ಮತ್ತು ಸೋದರಳಿಯ ಚಿಕಿತ್ಸೆಯ ದಾಖಲೆಗಳು ಮತ್ತು ಸಿಸಿಟಿವಿ ವಿಡಿಯೋವನ್ನು ಪಡೆದುಕೊಂಡಾಗ ಘಟನೆ ಬೆಳಕಿಗೆ ಬಂದಿದೆ.
ಗಣಿತದಲ್ಲಿ ತಪ್ಪು ಮಾಡಿದ ವಿದ್ಯಾರ್ಥಿನಿಗೆ ಥಳಿತ: ವಿಡಿಯೋ ವೈರಲ್, ಶಿಕ್ಷಕ ಅಮಾನತು
ಈ ಸಂದರ್ಭದಲ್ಲಿ, ಅಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಯುವಕನೊಬ್ಬ ಗದ್ಗದಿತನಾಗಿ ಮಧ್ಯರಾತ್ರಿಯಲ್ಲಿ ಓಡಿಹೋಗಲು ಪ್ರಯತ್ನಿಸಿದ ಮತ್ತು ಸಿಬ್ಬಂದಿಯಿಂದ ಹೇಗೆ ತೀವ್ರವಾಗಿ ಹಲ್ಲೆ ಮಾಡಿದನೆಂದು ವಿವರಿಸಿದ್ದಾನೆ.
ಆತನನ್ನು ಥಳಿಸಿದಾಗ ಆತನ ಶೌಚ ಕೂಡ ಹೊರಬಂದಿದೆ ಎಂದು ಕೇಂದ್ರದಲ್ಲಿದ್ದ ಯುವಕರು ಹೇಳಿದ್ದಾರೆ. ಅವನು ರಾತ್ರಿಯೆಲ್ಲ ನೋವಿನಿಂದ ಬಳಲುತ್ತಿದ್ದ ಮತ್ತು ಬೆಳಿಗ್ಗೆ ಅವನು ಸತ್ತ ನಂತರ ಅವರು ಅವನನ್ನು ಎಳೆದೊಯ್ದರು ಎಂದು ಯುವಕರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ