ಹಣ ಎಣಿಸೋಕೆ ಬರೊಲ್ಲವೆಂದು ರೇಗಿಸಿದ ಸ್ನೇಹಿತನನ್ನೇ ಕೊಲೆಗೈದ ಕ್ಯಾಷಿಯರ್

By Sathish Kumar KH  |  First Published Sep 28, 2023, 11:26 AM IST

ಬೆಂಗಳೂರಿನ ಆರ್‌ಎಂಝಡ್‌ ಬಟ್ಟೆ ಅಂಗಡಿಯಲ್ಲಿ ಕ್ಯಾಶ್‌ ಎಣಿಸಲು ಬರುವುದಿಲ್ಲವೆಂದು ರೇಗಿಸುತ್ತಿದ್ದ ಯುವಕನನ್ನು ಕ್ಯಾಷಿಯರ್‌ ಕೊಲೆ ಮಾಡಿದ್ದಾನೆ.


ಬೆಂಗಳೂರು (ಸೆ.28): ಬೆಂಗಳೂರಿನ ಯಲಹಂಕ ಬಳಿಯ ಆರ್‌ಎಂಝಡ್‌ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕ್ಯಾಷಿಯರ್‌ಗಳ ನಡುವೆ ಹಣದ ಲೆಕ್ಕ ಕೊಡುವ ವಿಚಾರದಲ್ಲಿ ರೇಗಿಸುತ್ತಿದ್ದ ಯುವಕನನ್ನೇ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.

ಇಬ್ಬರು ಕ್ಯಾಷಿಯರ್‌ಗಳ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.  ತುಂಬಾ ರೇಗಿಸ್ತಿದ್ದ ಎಂದು ಜೊತೆಗಿದ್ದ ಸ್ನೇಹಿತನ ಹತ್ಯೆ ಮಾಡಿದ್ದಾನೆ. ಮಲ್ಲಿಕಾರ್ಜುನ,( 24) ಮೃತ ದುರ್ದೈವಿ ಆಗಿದ್ದಾನೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಎಂಝಡ್‌ ಬಟ್ಟೆ ಅಂಗಡಿಯ ಬಳಿ ಘಟನೆ ನಡೆದಿದೆ. ಸ್ನೇಹಿತನನ್ನ ಕೊಲೆ ಮಾಡಿದ್ದ ರಾಜರಥ (25) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಲ್ಲಿಕಾರ್ಜುನ್ ಹಾಗೂ ಕೊಲೆಯ ಆರೋಪಿ ರಾಜರಥ ಇಬ್ಬರು ಆರ್ ಎಮ್ ಜೆಡ್ ನ ಲೈಫ್ ಸ್ಟೈಲ್ ನಲ್ಲಿ ಕೆಲಸ ಮಾಡುತ್ತಿದ್ದರು. 

Tap to resize

Latest Videos

ಮೋದಿ, ಬಿಡೆನ್‌, ಟ್ರುಡೊ, ಟ್ರಂಪ್‌ ವಿಶ್ವದ ಪ್ರಭಾವಿ ದೇಶಗಳ ನಾಯಕರಾಗುವ ಮುನ್ನ ಮಾಡ್ತಿದ್ದ ಕೆಲಸಗಳೇನು ಗೊತ್ತಾ?

ಆರ್‌ಎಂಝಡ್‌ ಲೈಫ್‌ಸ್ಟೈಲ್‌ ಮಳಿಗೆಯಲ್ಲಿ ಇಬ್ಬರೂ ಕ್ಯಾಷಿಯರ್‌ಗಳಾಗಿ ಕೆಲಸ ಮಾಡ್ತಿದ್ದರು. ಈ ವೇಳೆ ಬಟ್ಟೆಗಳ ಹಣಕಾಸಿನ ವಿಚಾರಕ್ಕೆ ಮೃತ ಮಲ್ಲಿಕಾರ್ಜುನ ಸದಾ ರಾಜರಥನನ್ನು ರೇಗಿಸುತ್ತಿದ್ದನು. ನಿನಗೆ ಕ್ಯಾಶ್ ಸರಿಯಾಗಿ ಜಮಾ ಮಾಡುವುದಕ್ಕೆ ಬರುವುದಿಲ್ಲ, ಎಣಿಕೆ ಮಾಡಿ ಇಡುವುದಕ್ಕೆ ಬರುವುದಿಲ್ಲ ಎಂದು ಹೀಯಾಳಿಸುತ್ತಿದ್ದನು. ಇದರಿಂದ ಇಬ್ಬರ ನಡುವೆಯು ಆಗಿಂದಾಗ್ಗೆ ಸಣ್ಣಪುಟ್ಟ ಜಗಳಗಳೂ ನಡೆದಿವೆ. ಇಷ್ಟಾದರೂ ಸುಮ್ಮನಿರದ ಮಲ್ಲಿಕಾರ್ಜುನನ ಬಾಯನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ನಿರ್ಧರಿಸಿದ್ದಾನೆ.

ಎಂದಿನಂತೆ ಮಂಗಳವಾರವೂ ಕೂಡ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ನಂತರ ಹೊರಬಂದಾಗ ಮಲ್ಲಿಕಾರ್ಜುನನೊಂದಿಗೆ ಜಗಳ ಆರಂಭಿಸಿದ ರಾಜರಥ ನನ್ನನ್ನು ರೇಗಿಸಬೇಡ ಎಂದು ಹೇಳಿದ್ದಾನೆ. ಆದರೂ, ರೇಗಿಸುವುದನ್ನು ಮುಂದುವರೆಸಿದ್ದರಿಂದ ಆತನ ಎದೆಗೆ ಕತ್ತರಿಯನ್ನು ಚುಚ್ಚಿದ್ದಾನೆ. ನಂತರ ಅಲ್ಲಿಂದ ಪರಾರಿ ಆಗಿದ್ದಾನೆ. ಇನ್ನು ರಕ್ತದ ಮಡವಿನಲ್ಲಿ ಬಿದ್ದು ಯುವಕನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ನೇರವಾಗಿ ಹೃದಯಕ್ಕೆ ಕತ್ತರ ತಾಗಿದ್ದರಿಂದ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು,  ಆರೋಪಿ ರಾಜರಥನನ್ನ ಪೊಲೀಸರು ಬಂಧಿಸಿದ್ದಾರೆ.

click me!