ವೈದ್ಯೆ ಪತ್ನಿ ಸುಸೈಡ್‌ಗೆ ಕಾರಣವಾಗಿದ್ದ ಗಂಡ ಸರ್ಕಾರಿ ಕೆಲಸದಿಂದ ವಜಾ

By Suvarna NewsFirst Published Aug 7, 2021, 12:00 AM IST
Highlights

* ವರದಕ್ಷಿಣೆ ಕಿರುಕುಳದಿಂದ ಕೇರಳದಲ್ಲಿ ವೈದ್ಯೆ ಆತ್ಮಹತ್ಯೆ ಪ್ರಕರಣ
* ಗಂಡನನ್ನು ಸೇವೆಯಿಂದ ವಜಾ ಮಾಡಿದ ಸಾರಿಗೆ ಇಲಾಖೆ
* ಕೇರಳದ ಇತಿಹಾಸದಲ್ಲಿಯೇ ಮೊದಲ ಪ್ರಕರಣ

ತಿರುವನಂತಪುರ(ಆ. 06)   ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾಗಿರುವ ಆರೋಪಿ ಎದುರಿಸುತ್ತಿರುವ ಪತಿಯನ್ನು ಕೆಲಸದಿಂದ ವಜಾ  ಮಾಡಲಾಗಿದೆ.

ಕೇರಳದ ಕೊಲ್ಲಂನಲ್ಲಿ ಪತ್ನಿ ಎಸ್‌ವಿ ವಿಸ್ಮಯ ಅವರಿಗೆ ವರದಕ್ಷಿಣೆ ಕಿರುಕುಳ ನೀಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿ ಎಸ್ ಕಿರಣ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲು ಅಲ್ಲಿನ ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ.

30 ವರ್ಷದ  ಕಿರಣ್ ಕುಮಾರ್ ಅವರು ಕೊಲ್ಲಂನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯಕ ಮೋಟಾರ್ ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು.. ಕಿರಣ್ ಕೆಲಸದಿಂದ ವಜಾಗೊಂಡ ನಂತರ ಇನ್ನು ಮುಂದೆ ಸರ್ಕಾರಿ ಕೆಲಸ ಸಿಗಲಾರದು.

ವಾಟ್ಸಪ್ ಮೆಸೇಜ್ ಕಳಿಸಿ ಸುಸೈಡ್ ಮಾಡಿಕೊಂಡ ವೈದ್ಯೆ

ಆಂತರಿಕ ವಿಚಾರಣೆಯಲ್ಲಿ ಕಿರಣ್ ಕುಮಾರ್ ವಿರುದ್ಧದ ಆರೋಪ ಸಾಬೀತಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಅವರು  ತಿಳಿಸಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿದ ಆರೋಪಿ ನೌಕರನನ್ನು ಸೇವೆಯನ್ನು ವಜಾಗೊಳಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಈ ರೀತಿಯ ಪ್ರಕರಣ ಮುಂದೆ ಘಟಸಿಬಾರದು ಎನ್ನುವ ಕಾರಣಕ್ಕೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಿರಣ್ ಕುಮಾರ್ ಪತ್ನಿ, 24 ವರ್ಷದ ವಿಸ್ಮಯ ಅವರು ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿದ್ಯಾರ್ಥಿಯಾಗಿದ್ದು, ಜೂನ್ 21 ರಂದು ಶವವಾಗಿ ಪತ್ತೆಯಾಗಿದ್ದಳು. ವರದಕ್ಷಿಣೆ ಕಿರುಕುಳವೇ  ಮಗಳ ಸಾವಿಗೆ  ಕಾರಣ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದರು. 

 

 

 

click me!