ಬಿಎಸ್‍ವೈ ಕುಟುಂಬದ ವಿರುದ್ಧ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್

By Suvarna NewsFirst Published Aug 6, 2021, 4:27 PM IST
Highlights

* ಬಿಎಸ್ ವೈ, ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ
* ಸಿಬಿಐ ಅಥವಾ ಎಸ್ಐಟಿ ತನಿಖೆ ಕೋರಿದ್ದ ರಿಟ್ ವಾಪಸ್
* ತಾಂತ್ರಿಕ ಕಾರಣದಿಂದ ರಿಟ್ ಅರ್ಜಿ ಹಿಂಪಡೆದ ಟಿ.ಜೆ.ಅಬ್ರಹಾಂ 

ಬೆಂಗಳೂರು, (ಆ.6): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬದ ಭ್ರಷ್ಟಾಚಾರ ಪ್ರಕರಣದ ವಿರುದ್ಧ ಸಿಬಿಐ ಅಥವಾ ಎಸ್‍ಐಟಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ವಾಪಸ್ ಪಡೆದಿದ್ದಾರೆ.

ತಾಂತ್ರಿಕ ಕಾರಣದಿಂದ ರಿರ್ಟ್ ಅರ್ಜಿಯನ್ನು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಇಂದು (ಆ.06)  ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬಿಎಸ್‌ವೈ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು, ರೇಣುಕಾಚಾರ್ಯ, ಸಂತೋಷ್‌ಗೆ ಶಾಕ್

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿಯಲ್ಲಿ ಈಗಾಗಲೇ ಬಿಎಸ್‍ವೈ ಸೇರಿದಂತೆ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಕೋರಿದ್ದ ರಿಟ್ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.

ಈ ಹಿಂದೆ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅಬ್ರಾಹಂ ಅವರು ಖಾಸಗಿ ದೂರು ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪೂರ್ವಾನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೂರನ್ನು ವಜಾಗೊಳಿಸಿತ್ತು. 

ಈ ಆದೇಶ ಪ್ರಶ್ನಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಈಗಾಗಲೇ ಪ್ರತಿ ವಾದಿಗಳಿಗೆ (ಬಿಎಸ್‌ವೈ, ವಿಜಯೇಂದ್ರ) ನೋಟಿಸ್ ಜಾರಿ ಮಾಡಿದೆ. ಆದ್ರೆ, ಸಿಬಿಐ ತನಿಖೆಗೆ ಕೋರಿದ್ದ ರಿರ್ಟ್ ಅರ್ಜಿಯನ್ನು ಅಬ್ರಾಹಂ ವಾಪಸ್ ಪಡೆದುಕೊಂಡಿದ್ದಾರೆ.

click me!