
ಬೆಂಗಳೂರು(ಸೆ. 26) ಬೆಂಗಳೂರಿನಲ್ಲಿ ಅಪಘಾತ ಮತ್ತು ಅವಘಡಗಳ ಸರಣಿಗೆ ಕೊನೆ ಇಲ್ಲ ಎಂಬಂತೆ ಆಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಪೇಸ್ 2ನ ಟೋಲ್ ಬಳಿ ಅಪಘಾತ ಸಂಭವಿಸಿದೆ.
BMTC ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದ್ದು BMTC ಬಸ್ ಬೈಕ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರಭಾಕರ್ (25) ಮತ್ತು ಸಹನಾ (24) ಸ್ನೇಹಿತರು ದರ್ಮರಣಕ್ಕೆ ಗುರಿಯಾಗಿದ್ದಾರೆ.
ಸಾಯಿ ತೇಜ್ ಆರೋಗ್ಯದ ಬಗ್ಗೆ ಆಘಾತಕಾರಿ ಮಾಹಿತಿ ಕೊಟ್ಟ ಪವನ್ ಕಲ್ಯಾಣ್
ಭಾನುವಾರ ಮಧ್ಯಾಹ್ನ ದುರ್ಘಟನೆ ನಡೆದಿದೆ. ಸ್ನೇಹಿತರು ಊಟಕ್ಕೆ ಹೋಗುವಾಗ ಡಿಕ್ಕಿಯಾಗಿದೆ. ಇಬ್ಬರು ದಾವಣಗೆರೆ ಮೂಲದವರು ಎಂಬುದು ತಿಳಿದು ಬಂದಿದೆ. ಟೆಕ್ಕಿಯಾಗಿದ್ದ ಪ್ರಭಾಕರ್, ಸಹನಾ ಬೇರೊಂದು ಕಂಪನಿಗೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ.
ಬೆಂಗಳೂರಿನಲ್ಲಿ(Bengaluru) ಅಪಘಾತ(Accident) ಸರಣಿಗೆ ಕೊನೆ ಇಲ್ಲದಂತೆ ಆಗಿದೆ. ಹೊಸೂರಿನಲ್ಲಿ(Hosur) ಕಾರು ಮುಖಾ ಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂಡಿಕಾ ಕಾರ್ ಗೆ ರಾಂಗ್ ರೂಟ್ ನಲ್ಲಿ ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿಗೆ ಇದು ಸಾವಿನ ಸೆಪ್ಟೆಂಬರ್ ಎಂಬಂತೆ ಆಗಿದೆ. ಕೋರಮಂಗಲದ ಕಾರು ಅಪಘಾತ, ಅಗ್ನಿ ಅವಘಡ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿನ ಅಪಘಾತ ಹೀಗೆ ಸರಣಿ ಸರಣಿ ಸರಣಿ ಅಪಘಾತಗಳು ಬೆಂಗಳೂರನ್ನು ಕಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ