
ಶಿವಮೊಗ್ಗ(ಸೆ. 07) ಗಂಡ ಮಾಡಿಕೊಂಡಿದ್ದ ಸಾಲದ ಶೂಲಕ್ಕೆ ಹೆದರಿದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಸುಸೈಡ್ ಮಾಡಿಕೊಳ್ಳುವುದಲ್ಲದೆ ಮಗಳನ್ನು ನೇಣಿಗೆ ಹಾಕಿದ್ದಾಳೆ.
ಭದ್ರಾವತಿಯಿಂದ ಘೋರ ಪ್ರಕರಣ ವರದಿಯಾಗಿದೆ. ಗಂಡನ ಸಾಲಕ್ಕೆ ಹೆದರಿ ತಾಯಿ-ಮಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭದ್ರಾವತಿಯ ಸುಭಾಷ್ ನಗರದಲ್ಲಿ ಮಂಗಳವಾರ ದುರಂತವೇ ನಡೆದಿದೆ.
ಸಂಗೀತಾ (35) ಹಾಗೂ ಮಧುಶ್ರೀ (11) ಮೃತ ದುರ್ದೈವಿಗಳು. ಸಂಗೀತಾ ಪತಿ ಧನಶೇಖರ್ ಹೋಲ್ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಪ್ರೀತಿಸಿದವಳು ದೂರ.. ಪೊಲೀಸರ ಹೆಸರು ಬರೆದಿಟ್ಟು ರಾಯಚೂರು ಯುವಕ ಸುಸೈಡ್!
ಸೀರೆಯ ಒಂದು ಬದಿಯಿಂದ ಕುಣಿಕೆ ಹೆಣೆದು ಮಧುಶ್ರೀಯನ್ನು ನೇಣಿಗೇರಿಸಿದ ಸಂಗೀತಾ , ಮತ್ತೊಂದು ತುದಿಗೆ ತಾನು ನೇಣು ಬಿಗಿದುಕೊಂಡಿದ್ದಾರೆ . ಸಂಗೀತಾ ಮತ್ತು ಮಧುಶೀ ಸಾವಿಗೆ ಸಾಲದ ಭೀತಿಯೇ ಕಾರಣ ಎಂದು ಹೇಳಲಾಗುತ್ತಿದೆ ಸಂಗೀತಾ ಪತಿ ಧನಶೇಖರ್ ಅವರು ಹೋಲ್ ಸೇಲ್ ವ್ಯಾಪಾರ ನೆಡಸುತ್ತಿದ್ದರು . ಲಾಕ್ ಡೌನ್ ಹಿನ್ನೆಲೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು .
ಇದರಿಂದ ಸಂಗೀತ ಮಾನಸಿಕವಾಗಿ ಕುಗ್ಗಿದ್ದರು . ಅಲ್ಲದೆ ಪತಿ ಮಾಡಿದ್ದ ಸಾಲ ತೀರಿಸಲು ಆಗುತ್ತದೆಯೋ ಇಲ್ಲವೋ ಎಂದು ಚಿಂತೆಗೀಡಾಗಿದ್ದರು . ಭದ್ರಾವತಿಯ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ