Bengaluru: ಸಿಲಿಕಾನ್‌ ಸಿಟಿಯಲ್ಲಿ ಡೆಲಿವರಿ ಬಾಯ್‌ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ!

By Govindaraj S  |  First Published Jan 22, 2023, 9:15 AM IST

ಡೆಲಿವರಿ ಬಾಯ್‌ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ಯುವಕ ಅಪಾರ್ಟ್‌ಮೆಂಟ್‌ಗೆ ದಿನಸಿ ವಸ್ತುಗಳನ್ನ‌ ಡೆಲಿವರಿ ಮಾಡಲು ಬಂದಿದ್ದ. 


ಬೆಂಗಳೂರು (ಜ.22): ಡೆಲಿವರಿ ಬಾಯ್‌ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ಯುವಕ ಅಪಾರ್ಟ್‌ಮೆಂಟ್‌ಗೆ ದಿನಸಿ ವಸ್ತುಗಳನ್ನ‌ ಡೆಲಿವರಿ ಮಾಡಲು ಬಂದಿದ್ದ. ಯುವಕ ವಾಪಸ್ ಬರುವ ವೇಳೆ ಸೆಕ್ಯೂರಿಟಿ ಗಾರ್ಡ್ ಬ್ಯಾಗ್ ಚೆಕ್ ಮಾಡಬೇಕು ಎಂದಿದ್ದರು. ಬ್ಯಾಗ್ ಚೆಕ್ ಮಾಡಬೇಕು ಎಂದಾಗ ಸೆಕ್ಯೂರಿಟಿ ಮೇಲೆ ಡೆಲಿವರಿ ಬಾಯ್ ಗಲಾಟೆ ಮಾಡಿದ್ದು, ನಂತರ ಪೋನ್ ಮಾಡಿ ಕೆಲವು ಹುಡುಗರನ್ನ ಕರೆಯಿಸಿ  ಹಲ್ಲೆ ಮಾಡಿದ್ದಾರೆ. 

ನಾಲ್ಕೈದು ಜನ ಯುವಕರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆದಿದ್ದು, ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೆಕ್ಯೂರಿಟಿ ಮೇಲಿನ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಲ್ಲೆ ನಡೆಸಿದ ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

Namma Metro ಪಿಲ್ಲರ್‌ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್‌

ಜಮೀನು ವಿಚಾರಕ್ಕೆ ಹಲ್ಲೆಗೊಳಗಾದ ವ್ಯಕ್ತಿ ಸಾವು: ಜಮೀನು ವಿಷಯಕ್ಕೆ ಸಂಬಂಧಿಸಿ ಕಳೆದ 2-3 ದಿನಗಳ ಹಿಂದೆ ಹಲ್ಲೆಗೊಳಗಾಗಿದ್ದ ತಾಲೂಕಿನ ಕುಂದೂರು ಗ್ರಾಮದ ಕೂಲಿ ಕಾರ್ಮಿಕ ರಾಜಪ್ಪ(56) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಘಟನೆ ಶುಕ್ರವಾರ ಹೊನ್ನಾಳಿ ಠಾಣೆ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ನಡೆದಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಬಸರಗಿ ಹೇಳಿದರು.

ತಾಲೂಕಿನ ಕುಂದೂರು ಗ್ರಾಮದ ಮೃತ ಕುಟುಂಬದವರ ಮನೆಗೆ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಮಾತನಾಡಿದರು. ಜಮೀನು ವಿಷಯಕ್ಕೆ ಸಂಬಂಧಿಸಿ ಕುಂದೂರು ಗ್ರಾಮದ ಶಫೀವುಲ್ಲಾ ಎಂಬಾತ ರಾಜಪ್ಪ ಎಂಬವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ರಾಜಪ್ಪರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಕುಂದೂರು ಗ್ರಾಮಕ್ಕೆ ಮರಳುವ ವೇಳೆ ಮಾರ್ಗ ಮಧ್ಯದಲ್ಲೇ ರಾಜಪ್ಪ ಸಾವಿಗೀಡಾದರು ಎಂದು ತಿಳಿಸಿದರು.

ಹೊನ್ನಾಳಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶುಕ್ರವಾರ ಮಧ್ಯಾಹ್ನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ರಾಜಪ್ಪ ಅವರ ಸಾವು ಯಾವುದೇ ಕೋಮು ವಿವಾದಕ್ಕೆ ಸಂಬಂಧಿಸಿದ್ದಲ್ಲ, ಇದು ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ್ದು ಎಂದು ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು. ಕುಂದೂರು ಗ್ರಾಮದ ಶಫೀವುಲ್ಲಾ ವಿರುದ್ಧ ಜ.18ರಂದು ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು. ಶುಕ್ರವಾರ ಗಾಯಾಳು ರಾಜಪ್ಪ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಆರೋಪಿ ವಿರುದ್ಧ ಮುಂದಿನ ಕ್ರಮ ಜರುಗಿಸುವುದಾಗಿ ವಿವರಿಸಿದರು.

ಟಿ.ನರಸೀಪುರ ತಾಲೂಕಿನಲ್ಲಿ ನಿಲ್ಲದ ಚಿರತೆ ಹಾವಳಿ: 11 ವರ್ಷದ ಬಾಲಕ ಸಾವು

ಸಿಪಿಐ ಸಿದ್ಧೇಗೌಡ ಮಾತನಾಡಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಹತ್ತು ಪ್ರಕರಣಗಳ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು. ಫೆಬ್ರವರಿಯಲ್ಲಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಕ್ಷೇತ್ರದಲ್ಲಿ ಸಂತ ಸೇವಾಲಾಲ್‌ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಸೂರಗೊಂಡನಕೊಪ್ಪ ಕ್ಷೇತ್ರಕ್ಕೆ ತೆರಳಿದ್ದಾಗಿ ತಿಳಿಸಿದರು.ಡಿವೈಎಸ್ಪಿ ಡಾ.ಸಂತೋಷ್‌ ಇದ್ದರು.

click me!