ರೈಲು ಹತ್ತುವಾಗ ಹಾಗೂ ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ. ಇದರ ಜೊತೆಗೆ ನಿಮ್ಮ ಸೀರೆ, ವೇಲ್, ಜಾಕೆಟ್, ಬ್ಯಾಕ್ ಕಡೆಗೂ ಗಮನ ಇರಬೇಕು. ಮಹಿಳೆಯೊಬ್ಬರು ಇಳಿಯುವಾಗ ಮೆಟ್ರೋ ರೈಲಿನ ಬಾಗಿಲಿಗೆ ಸೀರೆ ಸಿಲುಕಿದೆ. ಇತ್ತ ರೈಲು ಕೂಡ ಚಲಿಸಿದೆ. ಪರಿಣಾಮ ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವೆ ಸಿಲುಕಿ ಅಪ್ಪಚ್ಚಿಯಾದ ಮಹಿಳೆ ಮೃತಪಟ್ಟಿದ್ದಾರೆ.
ನವದೆಹಲಿ(ಡಿ.17) ಮೆಟ್ರೋ ಅಥವಾ ಸಾಮಾನ್ಯ ರೈಲಿನಲ್ಲಿ ಎಚ್ಚರಿಕೆ ಅತೀ ಅಗತ್ಯ. ಸಣ್ಣ ತಪ್ಪು ಬಹುದೊಡ್ಡ ದುರಂತಕ್ಕೆ ಕಾರಣವಾಗಲಿದೆ. ಮೆಟ್ರೋ ರೈಲು ಹತ್ತುವಾಗ ಹಾಗೂ ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ ಅನ್ನೋ ಸಂದೇಶವನ್ನು ನೀವು ಕೇಳಿರುತ್ತೀರಿ. ಸುರಕ್ಷತಾ ದೃಷ್ಟಿಯಿಂದ ಸಂದೇಶವನ್ನು ಹಾಕಲಾಗುತ್ತದೆ. ಇದರ ಜೊತೆಗೆ ರೈಲು ಹತ್ತುವಾಗ ಹಾಗೂ ಇಳಿಯುವಾಗ ನಿಮ್ಮ ಉಡುಪುಗಳು, ಬ್ಯಾಗ್‌ಗಳ ಕುರಿತು ಗಮನವಿರಬೇಕು. ಕಾರಣ ಇದೇ ಉಡುಪುಗಳು, ಬ್ಯಾಗ್‌ಗಳಿಂದ ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇದೀಗ ದೆಹಲಿ ಮೆಟ್ರೋದಲ್ಲಿ ದುರಂತ ನಡೆದಿದೆ. ಮೆಟ್ರೋ ರೈಲಿನಿಂದ ಇಳಿಯುವ ಸಂದರ್ಭ ಸೀರೆ ಮೆಟ್ರೋ ಬಾಗಿಲಿಗೆ ಸಿಲುಕಿದೆ. ಇತ್ತ ರೈಲು ಕೂಡ ಚಲಿಸಿದೆ. ರೈಲು ಮಹಿಳೆಯನ್ನು ಎಳೆದೊಯ್ದಿದೆ. ಪ್ಲಾಟ್‌ಫಾರ್ಮ್ ಗಾಗೂ ರೈಲಿನ ನಡುವೆ ಸಿಲಿಕು ಮಹಿಳೆ ಮೃತಪಟ್ಟಿದ್ದಾರೆ.
ದೆಹಲಿಯ 35 ವರ್ಷದ ಮಹಿಳೆ ನಂಗ್ಲೋಯಿ ನಿಲ್ದಾಣದಿಂದ ಮೋಹನ್ ನಗರಕ್ಕೆ ತೆರಳಿದ್ದಾರೆ. ಆದರೆ ಇಂಡರ್‌ಲಾಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಬದಲಾಯಿಸಲು ಮುಂದಾಗಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಕಾರಣ ನಿಗದಿತ ಸಮಯಕ್ಕೆ ಮೆಟ್ರೋದಿಂದ ಇಳಿಯಲು ಸಾಧ್ಯವಾಗಿಲ್ಲ. ಅವರಸ ಅವರಸವಾಗಿ ಮೆಟ್ರೋದಿಂದ ಒಂದು ಕಾಲು ಹೊರಗಿಡುತ್ತಿದ್ದಂತೆ ರೈಲಿನ ಬಾಗಿಲು ಮುಚ್ಚಿಕೊಂಡಿದೆ.
ತಾಂತ್ರಿಕ ದೋಷದಿಂದ ಕೆಟ್ಟು ನಿಂತ ನಮ್ಮ ಮೆಟ್ರೋ; ರೈಲಿನೊಳಗೆ ಪ್ರಯಾಣಿಕ ಪರದಾಟ!
ಮಹಿಳೆ ಮೆಟ್ರೋದಿಂದ ಇಳಿದರೂ ಮಹಿಳೆಯ ಸೀರೆ ಬಾಗಿಲಿಗೆ ಸಿಲುಕಿಕೊಂಡಿದೆ. ಇತ್ತ ರೈಲು ಚಲಿಸಲು ಆರಂಭಿಸಿದೆ.ನಿಲ್ದಾಣದಲ್ಲಿದ್ದ ಮೆಟ್ರೋ ಸಿಬ್ಬಂದಿಗಳು ವಿಸಿಲ್ ಮೂಲಕ, ಎಮರ್ಜೆನ್ಸಿ ಸೈರನ್ ಮಾಡಿದರೂ ರೈಲು ಕೆಲ ದೂರ ತೆರಳಿದೆ. ಅಷ್ಟರಲ್ಲೇ ಅಪಘಾತ ಸಂಭವಿಸಿದೆ. ಮಹಿಳೆಯನ್ನು ರೈಲು ಕೆಲ ದೂರ ಪ್ಲಾಟ್‌ಫಾರ್ಮ್‌ನಲ್ಲಿ ಎಳೆದೊಯ್ದಿದೆ. ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವೆ ಸಿಲುಕಿದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ರೈಲು ನಿಲ್ಲಿಸಲಾಗಿದೆ. ಬಳಿಕ ಮಹಿಳೆಯನ್ನು ರೈಲಿನಡಿಯಿಂದ ಹೊರತೆಗೆದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶನಿವಾರ(ಡಿಸೆಂಬರ್ 16) ಬೆಳಗ್ಗೆ ಈ ಘಟನೆ ನಡೆದಿದೆ. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಶನಿವಾರ ಸಂಜೆ ವೇಳೆಗೆ ಮಹಿಳೆ ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ ಮೆಟ್ರೋ ಪ್ರಯಾಣಿಕರು ಅತೀವ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಮೃತ ಮಹಿಳೆಯ ಪತಿ 7 ವರ್ಷದ ಹಿಂದೆ ಮೃತಪಟ್ಟಿದ್ದರು. ಮಗ ಹಾಗೂ ಮಗಳು ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ ಮಹಿಳೆ ಇದೀಗ ಮೃತಪಟ್ಟಿದ್ದು, ಮಕ್ಕಳು ಅನಾಥರಾಗಿದ್ದಾರೆ.
ಇದು ಬೆಂಗಳೂರಿನ ಯಾವ ರಸ್ತೆ ಅಂತಾ ಗೆಸ್ ಮಾಡ್ತೀರಾ?