
ಬೆಳಗಾವಿ (ಡಿ.17) : ತಡರಾತ್ರಿ ಸಿಲಿಂಡರ್ ಸ್ಫೋಟಗೊಂಡು 9 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಜನರು ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನಡೆದಿದೆ.
ರಾಜಶ್ರೀ ನಿರ್ವಾಣಿ (42) ಅಶೋಕ ನಿರ್ವಾಣಿ (45) ಸೋಮನಗೌಡ (44) ದೀಪಾ (42) ನವೀನ (14), ವಿದ್ಯಾ (13) ಬಸನಗೌಡ ನಿರ್ವಾಣಿ( 9 ತಿಂಗಳು) ಗಾಯಗೊಂಡವರು. ಘಟನೆಯಲ್ಲಿ ಇಬ್ಬರಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಇನ್ನುಳಿದವರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಲ್ಲಿ ಪದೇಪದೆ ಬೆಂಕಿ ಅವಘಡ: ಕಠಿಣ ಕ್ರಮಕ್ಕೆ ಮುಂದಾದ ಅಗ್ನಿಶಾಮಕ ದಳ
ನಿನ್ನೆ ರಾತ್ರಿ ಅಡುಗೆ ತಯಾರಿಸಿ ಊಟ ಮಾಡಿ ಲೈಟ್ ಆಫ್ ಮಾಡಿ ಮಲಗಿರುವ ಕುಟುಂಬ ಮಧ್ಯರಾತ್ರಿ ಗ್ಯಾಸ್ ಸೋರಿಕೆ ಆಗಿರೋ ವಾಸನೆ ಬಂದಿದೆ. ಹೀಗಾಗಿ ಅಡುಗೆ ಮನೆಯಲ್ಲಿ ಗ್ಯಾಸ್ ಇಟ್ಟಕ್ಕೆ ಜಾಗಕ್ಕೆ ತೆರಳಲು ಮೊಬೈಲ್ ಬ್ಯಾಟರಿ ಆನ್ ಮಾಡಿದ್ದಾರೆ ಗ್ಯಾಸ್ ಬಳಿ ಹೋದಾಗ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಪೋಟದ ರಭಸಕ್ಕೆ ಹಾರಿಹೋದ ಮನೆಯ ಹಂಚುಗಳು. ಚೆಲ್ಲಾಪಿಲ್ಲಿಯಾಗಿ ಬಿದ್ದ ಮನೆಯಲ್ಲಿನ ವಸ್ತುಗಳು. ಮಲಗಿದ್ದ ಕುಟುಂಬ ಸ್ಫೋಟದ ರಭಸಕ್ಕೆ ಬೆಚ್ಚಿಬಿದ್ದಿದೆ. ವಸ್ತುಗಳು ಸಿಡಿದು ಕುಟುಂಬದ ಎಲ್ಲರೂ ಗಾಯಗೊಂಡಿದ್ದಾರೆ.
ಬೆಂಗಳೂರಿಗೆ ಬೆಂಕಿ ದಿನವಾದ ಶನಿವಾರ: ಕಳೆದ ವಾರ ಪಟಾಕಿ ಮಳಿಗೆ, ಈ ವಾರ ಅಗರಬತ್ತಿ ಮತ್ತು ಗುಜರಿ ಅಂಗಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ