ಡೆಲಿವರಿ ಬಾಯ್ಸ್‌ ಜೀವಕ್ಕಿಲ್ವಾ ಬೆಲೆ? ಅಡ್ರೆಸ್‌ ಕೇಳಿದ್ದಕ್ಕೆ ಚಾಕುನಿಂದ ಚುಚ್ಚಿದ ಮಹಿಳೆ!

By BK Ashwin  |  First Published Aug 25, 2023, 4:09 PM IST

ರಸ್ತೆಯಲ್ಲಿ ಹೋಗ್ತಿದ್ದ ಆರೋಪಿ ಮಹಿಳೆಯನ್ನು ದಾರಿ ಕೇಳಿದಾಗ ಆಕೆ ಜಗಳವಾಡಿದ್ದು, ಮತ್ತು ಅವನನ್ನು ನಿಂದಿಸಲು ಪ್ರಾರಂಭಿಸಿದಳು ಎಂದು ತಿಳಿದುಬಂದಿದೆ.


ನವದೆಹಲಿ (ಆಗಸ್ಟ್‌ 25, 2023): ದೆಹಲಿಯ ದ್ವಾರಕಾ ಸೆಕ್ಟರ್ 23 ರಲ್ಲಿ ಆನ್‌ಲೈನ್ ಕಿರಾಣಿ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್‌ಗೆ 42 ವರ್ಷದ ಮಹಿಳೆಯೊಬ್ಬರು ವಿಳಾಸ ಕೇಳಿದ ನಂತರ ಅನೇಕ ಬಾರಿ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆರೋಪಿ ಮಹಿಳೆ ಡೆಲಿವರಿ ಬಾಯ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಆತನ ದ್ವಿಚಕ್ರ ವಾಹನಕ್ಕೆ ಹಾನಿ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. 

ಇನ್ನು, ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ನಿಯಂತ್ರಿಸಲು ಯತ್ನಿಸಿದಾಗ ಹೈವೋಲ್ಟೇಜ್ ಡ್ರಾಮಾ ನಡೆದಿದೆ. ಈ ವೇಳೆ ಪೊಲೀಸರಿಗೂ ಆಕೆ ಚಾಕು ತೋರಿಸಿ ಬೆದರಿಸಿ ಹಲ್ಲೆ ಕೂಡ ನಡೆಸಿದ್ದಾಳೆ ಎಂದೂ ತಿಳಿದುಬಂದಿದೆ. 

Tap to resize

Latest Videos

ಇದನ್ನು ಓದಿ: ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್‌, 'ಅದನ್ನೇ' ಕಟ್‌ ಮಾಡಿ ಕೊಲೆ ಮಾಡಿದ ಮಹಿಳೆ!

ಆಗಸ್ಟ್ 18 ರಂದು ರಾತ್ರಿ ದ್ವಾರಕಾ ಸೆಕ್ಟರ್ 23 ರ ಡಿಡಿಎ ಫ್ಲ್ಯಾಟ್‌ಗೆ ಗೋಲು ಎಂಬ ಡೆಲಿವರಿ ಬಾಯ್‌ ಸಾಮಗ್ರಿಗಳನ್ನು ನೀಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಹೋಗ್ತಿದ್ದ ಆರೋಪಿ ಮಹಿಳೆಯನ್ನು ಆ ವೇಳೆ ಗೋಲು ದಾರಿ ಕೇಳಿದಾಗ ಆಕೆ ಜಗಳವಾಡಿದ್ದು, ಮತ್ತು ಅವನನ್ನು ನಿಂದಿಸಲು ಪ್ರಾರಂಭಿಸಿದಳು ಎಂದು ತಿಳಿದುಬಂದಿದೆ.
.
ಸ್ವಲ್ಪ ಸಮಯದ ನಂತರ, ಅವನಿಗೆ ಏನೂ ಅರ್ಥವಾಗುವ ಮೊದಲು, ಅವಳು ಅವನ ಕೈಗೆ ಚಾಕುವಿನಿಂದ ಹಲ್ಲೆ ಮಾಡಿದಳು. ಈ ಹಿನ್ನೆಲೆ ತನ್ನ ಸ್ಕೂಟರ್‌ ಬಿಟ್ಟು ಆತ ದೂರ ಓಡಿಹೋದ. ನಂತರ ಮಹಿಳೆ ಆತನ ಸ್ಕೂಟರ್ ಅನ್ನು ಕೆಡವಿ ಅದರ ಟೈರ್ ಅನ್ನು ಚಾಕುವಿನಿಂದ ಪಂಕ್ಚರ್ ಮಾಡಲು ಪ್ರಯತ್ನಿಸಿದ್ದಾಳೆ. ಹಾಗೂ, ಆಕೆ ವಾಹನದ ಕೀಲಿಗಳನ್ನು ಪೊದೆಗಳಿಗೆ ಎಸೆದಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪೆಟ್ರೋಲ್‌ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ 230 ಕಿ.ಮೀ ವೇಗದಲ್ಲಿ ನುಗ್ಗಿದ ರೋಲ್ಸ್ ರಾಯ್ಸ್‌ ಕಾರು: ಇಬ್ಬರು ಬಲಿ

ಅಷ್ಟಕ್ಕೆ ಸುಮ್ಮನಾಗದ ಆಕೆ, ಮತ್ತೆ .ಡೆಲಿವರಿ ಬಾಯ್‌ನನ್ನು ಹಿಂಬಾಲಿಸಿ ಚಾಕುವಿನಿಂದ ಹಲವು ಬಾರಿ ಹಲ್ಲೆ ನಡೆಸಿದ್ದಾಳೆ. ಗಲಾಟೆ ಕೇಳಿದ ಜನರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ ಸುಮ್ಮನಾಗದ ಮಹಿಳೆ, ಪೊಲೀಸರ ಮೇಲೂ ಹಲ್ಲೆ ಮಾಡಿ ಜಗಳವಾಡಿದ್ದಾಳೆ ಎಂದು ತಿಳಿದುಬಂದಿದೆ. 

ಅಲ್ಲದೆ, ಆಕೆ ಕೋಲನ್ನು ಎತ್ತಿಕೊಂಡು ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ವ್ಯಾನ್ ಸೇರಿದಂತೆ ಹಲವು ವಾಹನಗಳಿಗೆ ಹಾನಿ ಮಾಡಲು ಯತ್ನಿಸಿದಳು. ಅಂತಿಮವಾಗಿ ಆಕೆಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಮಹಿಳಾ ಪೊಲೀಸ್ ಅಧಿಕಾರಿಯ ಕೂದಲನ್ನು ಎಳೆದು ಗೀಚುವ ಮೂಲಕ ಆಕೆ ಬಂಧನವನ್ನು ವಿರೋಧಿಸಲು ಪ್ರಯತ್ನಿಸಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಹೆಂಡ್ತಿ ನಟಿಸಿರೋ ಅನುಮಾನ: ಮನಬಂದಂತೆ ಹಲ್ಲೆ ಮಾಡಿದ ಪೋರ್ನ್‌ ಚಟಕ್ಕೆ ಬಿದ್ದ ಪತಿ

click me!