
ನವದೆಹಲಿ (ಜ. 06) ದೆಹಲಿ ಸೈಬರ್ ಸೆಲ್ ಪೊಲೀಸರು ಆನ್‌ಲೈನ್ ಸೆಕ್ಸ್‌ಟಾರ್ಷನ್ ದಂಧೆಗೆ ಬ್ರೇಕ್ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ಭಾರತ್‌ಪುರ ಜಿಲ್ಲೆಯ ಮೇವತ್ ಪ್ರದೇಶದ ಆರು ಜನರನ್ನು ಬಂಧಿಸಲಾಗಿದೆ. ನೂರಾರು ಜನರಿಗೆ ಮೋಸ ಮಾಡಿದ್ದು ಆರೋಪಿಗಳ 10 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿ 25 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಅವರ ಸ್ನೇಹ ಸಂಪಾದನೆ ಮಾಡಿಕೊಂಡು ವೀಡಿಯೊ ಚಾಟ್ ಮಾಡಲು ಆಹ್ವಾನಿಸುತ್ತಿದ್ದರು. ಈ ವೇಳೆ ಇದನ್ನು ರೆಕಾರ್ಡ್ ಮಾಡಿಕೊಂಡು ಅದಕ್ಕೆ ಅಶ್ಲೀಲ ದೃಶ್ಯಗಳನ್ನು ಸೇರಿಸಿ ಚಾಟ್ ಮಾಡಿದ ವ್ಯಕ್ತಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಮೂರು ನೂರು ರೂಗಾಗಿ ಪತ್ನಿ ಜತೆಗಿನ ಮಿಲನದ ಕ್ಷಣಗಳೇ ಆನ್ ಲೈನ್ ಗೆ
ಆರೋಪಿಗಳಿಂದ ಈ ಬಗೆಯ 40 ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಮುಂಬೈನಲ್ಲಿ ಇಂಥದ್ದೆ ಪ್ರಕರಣ ಪತ್ತೆ ಮಾಡಲಾಗಿತ್ತು. ಆನ್ ಲೈನ್ ಡೇಟಿಂಗ್ ಆಪ್ ಗಳಿಂದಲೂ ಈ ಬಗೆಯ ವಂಚನೆ ನಡೆಯುತ್ತಿದ್ದು ಡೌನ್ ಲೋಡ್ ಮಾಡುವ ಮುನ್ನ ಎಚ್ಚರ ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ