ಧರ್ಮಗುರು ಕಚಡಾ ಕೆಲಸ.. 50ರ ಮಹಿಳೆ ಮೇಲೆ ರೇಪ್ ..ಖಾಸಗಿ ಅಂಗದ ಮೇಲೆ ಕ್ರೂರತ್ವ

By Suvarna News  |  First Published Jan 6, 2021, 5:07 PM IST

ಧರ್ಮಗುರುವಿನ ಬಳಿ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ/ ಧರ್ಮಗುರು ಸೇರಿ ಆತನ ಇಬ್ಬರು ಶಿಷ್ಯರ ಮೇಲೆ ಪ್ರಕರಣ/  ಪೂಜೆ ಮಾಡಲೆಂದು ಮಹಿಳೆ ತೆರಳಿದ್ದಳು/ ಮಹಿಳೆ ಮೇಲೆ ಎರಗಿದ ಕಾಮುಕರು


ಬರೇಲಿ(ಜ.  06) ಉತ್ತರ ಪ್ರದೇಶದ ಬುದ್ವಾನ್ ಜಿಲ್ಲೆಯಲ್ಲಿ  50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿನ ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಎಫ್‌ಐಆರ್  ಸಿದ್ಧಮಾಡಲಾಗಿದೆ. ಕಾಮುಕರು ಮಹಿಳೆಯ ಖಾಸಗಿ ಅಂಗಗಳ ಮೇಲೆ ಕ್ರೌರ್ಯ ಮೆರೆದಿದ್ದರು. 

ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಧರ್ಮಗುರು ಸೇರಿ ಆತನ ಇಬ್ಬರು ಶಿಷ್ಯರ ಮೇಲೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ. ಇವರಲ್ಲಿ ಒಬ್ಬನನ್ನು ಬಂಧಿಸಿದ್ದು ಪೊಲೀಸರು ವಿಚಾರಣೆಯನ್ನು ನಡೆಸಿದ್ದಾರೆ.

Tap to resize

Latest Videos

ಎಪ್ಪತ್ತರ ವೃದ್ಧೆ ಮೇಲೆ ಎರಗಿದ ತೃತೀಯ ಲಿಂಗಿ

ಸಂತ್ರಸ್ತೆಯ ಗಂಡ ಹೇಳುವಂತೆ ಮಹಿಳೆ ಪೂಜೆ ಮಾಡಲು ತೆರಳುತ್ತೇನೆ ಎಂದು ಹೋಗಿದ್ದರು. ಆದರೆ ಮನೆಗೆ ವಾಪಸ್ ಬರಲೇ ಇಲ್ಲ.  ನಂತರ ಧರ್ಮಗುರುವಿನ ಶಿಷ್ಯರು ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಮಹೀಳೆ ಆಯಾಸದಿಂದ ನೆಲಕ್ಕೆ ಉರುಳಿದಳು ಎಂದು ಕತೆ ಹೇಳಿದ್ದಾರೆ.

ನಂತರ  ಪತ್ನಿ ಮೇಲೆ ದುರುಳರು ಅಟ್ಟಹಾಸ ಮೆರೆದಿರುವುದು ಗೊತ್ತಾಗಿದೆ.  ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪತಿ ಹೇಳುತ್ತಾರೆ. ಪೊಲೀಸರು ಸಹ ಎಲ್ಲ ಕೋನಗಳಲ್ಲಿ ಪ್ರಕರಣ ಕೈಗೆತ್ತಿಕೊಂಡಿದ್ದು ನಾಪತ್ತೆಯಾಗಿರುವ ಧರ್ಮಗುರು  ಬಂಧನಕ್ಕೆ ಬಲೆ   ಬೀಸಿದ್ದಾರೆ. 

click me!