ಒಟಿಟಿ ಫಾರ್ಝಿ ಸೀರಿಸ್‌ನಿಂದ ಪ್ರೇರಿತ, ಬಾಲಿವುಡ್ ರೀಲ್‌ನ್ನು ರಿಯಲ್ ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು!

Published : Oct 07, 2023, 12:50 PM IST
ಒಟಿಟಿ ಫಾರ್ಝಿ ಸೀರಿಸ್‌ನಿಂದ ಪ್ರೇರಿತ, ಬಾಲಿವುಡ್ ರೀಲ್‌ನ್ನು ರಿಯಲ್ ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು!

ಸಾರಾಂಶ

ಒಟಿಟಿಯಲ್ಲಿ ಬಾಲಿವುಡ್ ಫಾರ್ಝಿ ಸೀರಿಸ್ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಕಾಮಿಡಿ ಕ್ರೈಮ್ ಥ್ರಿಲ್ಲರ್ ಸೀರಿಸ್ ಕತೆಯನ್ನೇ ರಿಯಲ್ ಲೈಫ್‌ನಲ್ಲಿ ಮಾಡಲು ಹೋದ ಐವರು ಖದೀಮರು ಇದೀಗ ದೆಹಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.  

ದೆಹಲಿ(ಅ.07) ಶಾಹಿದ್ ಕಪೂರ್, ವಿಜಯ ಸೇತುಪತಿ ಸೇರಿದಂತೆ ಹಲವು ನಟ ನಟಿಯರನ್ನು ಹೊಂದಿರುವ ಫಾರ್ಝಿ ಒಟಿಟಿ ಸೀರಿಸ್ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಕಾಮಿಡಿ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಒಳಗೊಂಡ ಈ ಸೀರಿಸ್‌ನಿಂದ ಪ್ರೇರಣೆ ಪಡೆದು ಅದೇ ಸ್ಟೋರಿಯನ್ನು ರಿಯಲ್ ಲೈಫ್‌ನಲ್ಲಿ ತಂದ ಐವರು ಖದೀಮರು ಇದೀಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ. ಫಾರ್ಝಿ ಸೀರಿಸ್‌ನಲ್ಲಿರುವಂತೆ ಬೀದಿ ಬದಿಯಲ್ಲಿ ಪೈಟಿಂಗ್ ಮೂಲಕ ಜೀವನ ಸಾಗಿಸುತ್ತಿದ್ದ 25 ವರ್ಷದ ಶಾಕೂರ್ ಮೊಹಮ್ಮದ್ ತನ್ನ ಐವರು ಗೆಳೆಯರೊಂದಿಗೆ ಸೇರಿ ನಕಲಿ ನೋಟು ಮುದ್ರಿಸಿದ್ದಾರೆ. ಬಳಿಕ ದೆಹಲಿಯಲ್ಲಿ ಹಂಚಿದ್ದಾರೆ. 500 ರೂಪಾಯಿ ಮುಖಬಲೆಯ ಒಟ್ಟು 19.84 ಲಕ್ಷ ರೂಪಾಯಿ ನಕಲಿ ನೋಟು ಮುದ್ರಿಸಿ ಹಂಚಿದ ಈ ಗ್ಯಾಂಗ್‌ನ್ನು ಪೊಲೀಸರು ಅಷ್ಟೇ ರೋಚಕವಾಗಿ ಸೆರೆ ಹಿಡಿದಿದ್ದಾರೆ.

ಮೊಹಮ್ಮದ್ ಶಾಕೂರ್ ಅದ್ಭುತ ಚಿತ್ರಕಾರ. ಅಕ್ಷರಧಾಮ ಸೇರಿದಂತೆ ದೆಹಲಿಯ ಪ್ರವಾಸಿ ತಾಣಗಳಲ್ಲಿ ಚಿತ್ರ ಬಿಡಿಸುವ ಕಾಯಕದಲ್ಲಿ ತೊಡಗಿದ್ದ. ತಾಣಕ್ಕೆ ಆಗಮಿಸುವವರ ಚಿತ್ರ ಬಿಡಿಸುವುದು, ಆಯಿಲ್ ಪೈಟಿಂಗ್ ಸೇರಿದಂತೆ ಹಲವು ಚಿತ್ರಗಳನ್ನು ಬಿಡಿಸಿ ಮಾರಾಟ ಮಾಡುತ್ತಿದ್ದ. ಆದರೆ ಈ ಕಸುಬಿನಲ್ಲಿ ಜೀವನ ಸಾಗುತ್ತಿತ್ತು. ಆದರೆ ತನ್ನ ಇಚ್ಚಿಸದ ಬದುಕು ಸಿಗಲಿಲ್ಲ. ಇದೇ ವೇಳೆ ಒಟಿಟಿಯಲ್ಲಿ ಫಾರ್ಝಿ ಸೀರಿಸ್ ನೋಡಿ ಪ್ರೇರಿತನಾಗಿದ್ದ.

10 ರೂ. ನಕಲಿ ನೋಟು ಹೊಂದಿದ್ದ ತರಕಾರಿ ವ್ಯಾಪಾರಿಗೆ ಸುಪ್ರೀಂಕೋರ್ಟ್‌ ನೀಡಿದ ಶಿಕ್ಷೆ ಏನು ನೋಡಿ..

ಈ ಚಿತ್ರವೂ ನಕಲಿ ನೋಟು ಮುದ್ರಣ ಕುರಿತಾಗಿದೆ. ಬೀದಿ ಬದಿಯಲ್ಲಿ ಚಿತ್ರ ಬಿಡಿಸುತ್ತಿದ್ದವ ಏಕಾಏಕಿ ಕೋಟ್ಯಾಧೀಶ್ವರನಾಗಿದ್ದ. ನಕಲಿ ನೋಟು ಮುದ್ರಿಸಿ ಅತೀ ದೊಡ್ಡ ನೆಟ್‌ವರ್ಕ್ ಸೃಷ್ಟಿಸಿಕೊಂಡಿದ್ದ. ಈತನ ನಕಲಿ ನಕಲಿ ನೋಟು ಹಾಗೂ ಇಡಿ ತಂಡವನ್ನು ಪೊಲೀಸರು ಪತ್ತೆ ಹಚ್ಚುವುದೇ ಫಾರ್ಝಿ ಚಿತ್ರದ ತಿರುಳು. ಈ ಚಿತ್ರದ ಪ್ರೇರಿತನಾದ ಶಾಕೂರ್ ಮೊಹಮ್ಮದ್ 500 ರೂಪಾಯಿ ನೋಟಿನ ಚಿತ್ರ ಬಿಡಿಸಿದ್ದಾರೆ.  500 ರೂಪಾಯಿ ನೋಟಿನ ಅದೇ ಗಾತ್ರ, ಅದೇ ರೀತಿಯಲ್ಲಿ ನೋಟಿನ ಚಿತ್ರ ಬಿಡಿಸಿದ್ದಾನೆ.

ತನ್ನ ಐವರು ಗೆಳೆಯರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಎಲ್ಲರು ಒಂದೆಡೆ ಸೇರಿದ್ದಾರೆ. ಬಳಿಕ 500 ರೂಪಾಯಿ ನಕಲಿ ನೋಟು ಮುದ್ರಿಸಲು ಪ್ಲಾನ್ ಹಾಕಿಕೊಂಡಿದ್ದಾರೆ. ರಾಜಸ್ಥಾನದ ಅಜ್ಮೆರ್‌ನಲ್ಲಿ ನಕಲಿ ನೋಟು ಮುದ್ರಣ ಮಾಡಲು ಸಂಪರ್ಕಿಸಿದ್ದಾರೆ. ಬಳಿಕ ಶಾಕೂರ್ ಮೊಹಮ್ಮದ್ ಬಿಡಿಸಿದ ಚಿತ್ರವನ್ನು ಆಧಾರವಾಗಿಟ್ಟುಕೊಂಡು 500 ರೂಪಾಯಿ ಮುಖಬೆಲೆಯ ಒಟ್ಟು 19.84 ಲಕ್ಷ ರೂಪಾಯಿ ನಕಲಿ ನೋಟು ಮುದ್ರಿಸಿ ದೆಹಲಿಗೆ ತಂದಿದ್ದಾರೆ.

ಇತ್ತ ದೆಹಲಿಯ ಕೆಲ ಭಾಗದಲ್ಲಿ ನಕಲಿ ನೋಟುಗಳ ಹಾವಳಿ ಕುರಿತು ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸರು ಅಲರ್ಟ್ ಆಗಿದ್ದಾರೆ. ಕಾರ್ಯಾಚರಣೆ ಆರಂಭಿಸಿದ ಪೊಲೀಸರಿಗೆ ಶಾಕೂರ್ ಮೊಹಮ್ಮದ್ ಗ್ಯಾಂಗ್ ನಕಲಿ ನೋಟು ಹಂಚುತ್ತಿರುವ ಮಾಹಿತಿ ಸಿಕ್ಕಿದೆ. ಅಷ್ಟರ ವೇಳೆಗೆ ಶಾಕೂರ್ ಗ್ಯಾಂಗ್ ಲಕ್ಷ ಲಕ್ಷ ರೂಪಾಯಿ ಹಂಚಿದ್ದಾರೆ. ಬಂದ ಹಣದಲ್ಲಿ ಶಾಕೂರ್ ಗ್ಯಾಂಗ್ ಟ್ರಿಪ್ ಹೋಗಿದ್ದಾರೆ.

 

ಇನ್‌ಸ್ಟಾಗ್ರಾಂನಲ್ಲಿ ಖೋಟಾ ನೋಟು ಖರೀದಿಸಿ ದಂಧೆ!

ಟ್ರಿಪ್‌ನಿಂದ ಮರಳಿ ಬಂದ ಗ್ಯಾಂಗ್ ಅಕ್ಷರಧಾಮದ ಬಳಿಕ ನಕಲಿ ನೋಟು ಹಂಚಲು ಆಗಮಿಸಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು ಖದೀಮರ ಗ್ಯಾಂಗ್‌ನನ್ನು ಹಿಡಿದಿದ್ದಾರೆ. ಬಳಿಕ ಮುದ್ರಣಾಲಯಕ್ಕೆ ದಾಳಿ ಮಾಡಿದ ಪೊಲೀಸರು ಪ್ರಿಂಟರ್, ಲ್ಯಾಪ್‌ಟಾಪ್, 19 ಬಾಟಲಿ ಇಂಕ್, ಲ್ಯಾಪ್‌ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!