
ನವದೆಹಲಿ (ಮಾ. 25) ದೆಹಲಿ ಗಲಭೆಯ ಆರೋಪಿ ವ್ಯಕ್ತಿಯೊಬ್ಬನಿಗೆ ಬಲಾತ್ಕಾರಯುತವಾಗಿ ಹಿಂದೂಸ್ತಾನ್ ಜಿಂದಾಬಾದ್ ಮತ್ತು ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಲು ಒತ್ತಾಯಿಸಿ ಹಲ್ಲೆ ಮಾಡಿದ್ದಾನೆ ಎಂಬ ಪ್ರಕರಣ ವರದಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಅಜಯ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ವಿಡಿಯೋದಲ್ಲಿ ಗೋಸ್ವಾಮಿ ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡು ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳಿವೆ.
ಚೀನಾ ವಾಕ್ಸಿನ್ ಪಡೆದಿದ್ದ ಪಾಕ್ ಪ್ರಧಾಣಿಗೆ ಕೊರೋನಾ
ಜೋರ್ ಸೇ ಬೋಲೋ ಎಂದು ವ್ಯಕ್ತಿಯನ್ನು ಗದರಿಸುತ್ತಿರುವುದು ಕಂಡು ಬಂದಿದೆ. ವಿಡಿಯೋ ಆಧಾರದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನುಷ್ಯನನ್ನು ಒದೆಯುತ್ತಿರುವ 32 ವರ್ಷದ ಗೋಸ್ವಾಮಿ ಬಳಿ ಹಲ್ಲೆ ಮಾಡಿಸಿಕೊಂಡ ವ್ಯಕ್ತಿ ದಯವಿಟ್ಟು ನನ್ನ ಬಿಟ್ಟುಬಿಡಿ ಎಂದು ಅಂಗಲಾಚಿಕೊಂಡಿದ್ದಾನೆ.
ಖಜುರಿ ಖಾಸ್ ಪ್ರದೇಶದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಮನುಷ್ಯ ಗೋಸ್ವಾಮಿಯ ಡೈರಿಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದ್ದ ಎಂದು ಹೇಳಲಾಗಿದೆ. ಅಜಯ್ ಗೋಸ್ವಾಮಿ, ಈಶಾನ್ಯ ದೆಹಲಿಯ ಓಲ್ಡ್ ಗರ್ಹಿ ಗ್ರಾಮದ ನಿವಾಸಿ. ವೃತ್ತಿಯಲ್ಲಿ ಡೈರಿ ವ್ಯಾಪಾರಿ ಗೋಸ್ವಾಮಿ 2020 ಈಶಾನ್ಯ ದೆಹಲಿ ಗಲಭೆಯಲ್ಲೂ ಇದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ