ಪಾರ್ಶ್ವವಾಯು ಪೀಡಿತ ತಂದೆ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಸಿಟ್ಟಿಗೆದ್ದ ಮಗನಿಂದ ಕತ್ತು ಹಿಸುಕಿ ಕೊಲೆ!

By Gowthami K  |  First Published Feb 6, 2023, 10:31 PM IST

ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ಪಾರ್ಶ್ವವಾಯು ಪೀಡಿತ ತಂದೆಯನ್ನು ಕೊಂದ ಆರೋಪದ ಮೇಲೆ 20 ವರ್ಷದ ಸುಮಿತ್ ಶರ್ಮಾ ಎಂಬ ಯುವಕ ಬಂಧಿಸಲಾಗಿದೆ.


ನವದೆಹಲಿ (ಫೆ.6): ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ಪಾರ್ಶ್ವವಾಯು ಪೀಡಿತ ತಂದೆಯನ್ನು ಕೊಂದ ಆರೋಪದ ಮೇಲೆ 20 ವರ್ಷದ ಸುಮಿತ್ ಶರ್ಮಾ ಎಂಬ ಯುವಕ ಬಂಧಿಸಲಾಗಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಜಿತೇಂದ್ರ ಶರ್ಮಾ ಎಂಬ ವ್ಯಕ್ತಿಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.  ಪೊಲೀಸರು ಸ್ಥಳವನ್ನು ತಲುಪಿದಾಗ, ಶರ್ಮಾ ತನ್ನ ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಆರ್‌ಎಂಎಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶನಿವಾರ ಶವಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕತ್ತು ಹಿಸುಕಿರುವುದು ಬೆಳಕಿಗೆ ಬಂದಿದೆ.

ತನಿಖೆಯ ನಡೆಸಿದ ಪೊಲೀಸರಿಗೆ ಘಟನೆ ನಡೆದ ದಿನದಂದು ಸಂಜೆ 6.30 ರವರೆಗೆ ಜಿತೇಂದ್ರ ಶರ್ಮಾ ಮತ್ತು ಅವರ ಮಗನೊಂದಿಗೆ ಮದ್ಯಪಾನ ಮಾಡುತ್ತಿದ್ದ ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.

Tap to resize

Latest Videos

ತಮ್ಮ ನೆರೆಹೊರೆಯವರು ತಂದೆಯನ್ನು ಕೊಂದಿದ್ದಾರೆ ಎಂದು ಮಗ ಮೊದಲಿಗೆ ಆರೋಪಿಸಿದ್ದಾನೆ. ಆದರೆ, ನಿರಂತರ ವಿಚಾರಣೆ ಬಳಿಕ ಸತ್ಯ ಬಾಯಿ ಬಿಟ್ಟು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಂದೆ ಪಾರ್ಶ್ವವಾಯು ಪೀಡಿತರಾಗಿದ್ದು, ಅವರನ್ನು ನಾನೊಬ್ಬನೇ ನೋಡಿಕೊಳ್ಳಬೇಕು ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಶರ್ಮಾ ಮದ್ಯವ್ಯಸನಿಯಾಗಿದ್ದು, ಘಟನೆ ನಡೆದ ದಿನ ಬೆಳಗ್ಗೆಯಿಂದ ಇಬ್ಬರೂ ಮದ್ಯ ಸೇವಿಸಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. 

ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 

ಸಂಜೆ, ಶರ್ಮಾ ತನ್ನ ಹಾಸಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದರು ಮತ್ತು ಆರೋಪಿ ಮಗ ಹತಾಶೆಯಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಶರ್ಮಾ ಅವರ ಪತ್ನಿ ವರ್ಷಗಳ ಹಿಂದೆಯೇ ಕುಟುಂಬವನ್ನು ತೊರೆದು ಹೋಗಿದ್ದರು. ಏಕೆಂದರೆ ಮದ್ಯ ಸೇವಿಸಿದ ನಂತರ  ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

HIT AND RUN: ಬೈಕ್‌ ಸವಾರನ ತಲೆಮೇಲೆ ಹರಿದ ಶಾಸಕ ಹರತಾಳು ಹಾಲಪ್ಪ ಕಾರು: ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಆಟೋರಿಕ್ಷಾ ಓಡಿಸುವ  ಶರ್ಮಾ ಇದಕ್ಕೂ ಮುನ್ನ ಮೊದಲು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು 2020 ರಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು, ಎಂದು ಪೊಲೀಸರು ತಿಳಿಸಿದ್ದಾರೆ.

click me!