
ದೆಹಲಿ (ಮಾ.23): ಸಂದರ್ಶನಕ್ಕೆ ಹೋಗಿ ಈ ಕೆಲಸ ಸಿಕ್ಕಿದ್ದರೆ ನನ್ನ ಗಂಡನಂತೆಯೇ ನನಗೆ ತಿಂಗಳಿಗೆ 20 ಸಾವಿರ ಸಂಬಳ ಬರುತ್ತಿತ್ತು. ಬಹುಶಃ ನನ್ನ ಮಾವ ನಾನು ಅವರ ಮಗನಿಗಿಂತ ಹೆಚ್ಚು ಸಂಪಾದಿಸುವುದನ್ನು ಬಯಸಲಿಲ್ಲ, ಎಂದು ಹರಿಯಾಣದ ಫರಿದಾಬಾದ್‌ನ ಮನೆಯೊಳಗೆ ಕುಳಿತಿರುವ 26 ವರ್ಷದ ಕಾಜಲ್ ಹೇಳಿದ್ದಾರೆ. ಆಕೆಯ ತಲೆಯ ಮೇಲೆ 17 ಮತ್ತು ಬಲಗೈಯಲ್ಲಿ ಎಂಟು ಹೊಲಿಗೆಗಳಿವೆ. ಮಾರ್ಚ್ 14 ರಂದು, ವಾಯುವ್ಯ ದೆಹಲಿಯ ಪ್ರೇಮ್ ನಗರದಲ್ಲಿ ಕಾಜಲ್ ಅವರ ಮಾವ ಆಕೆಯ ತಲೆಯ ಮೇಲೆ ಇಟ್ಟಿಗೆಯಿಂದ ಹೊಡೆದಿರುವ 43 ಸೆಕೆಂಡುಗಳ ವೀಡಿಯೊ ವೈರಲ್ ಆಗಿತ್ತು.
ಕಾಜಲ್ ಉದ್ಯೋಗ ಪಡೆಯುವ ಸಲುವಾಗಿ ಸಂದರ್ಶನಕ್ಕೆಂದು ತನ್ನ ಮನೆಯಿಂದ ಹೊರಬಂದಾಗ ಅವಳ ಮಾವ ಅಡ್ಡಗಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆಕೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ಕಾಜಲ್ ಅವರ ಕುಟುಂಬದ ಪ್ರಕಾರ, ಆಕೆಯ ಮಾವ ಕುಟುಂಬದ ಮಹಿಳೆಯರು ಮನೆಯ ಹೊರಗೆ ಕೆಲಸ ಮಾಡುವುದನ್ನು ಒಪ್ಪುವುದಿಲ್ಲ. ಜೊತೆಗೆ ಗಂಡನ ಮನೆಯವರು ಅನುಮಾನಾಸ್ಪದ ಸ್ವಭಾವವನ್ನು ಹೊಂದಿದ್ದರು.
ಮಹಿಳೆ ಕೆಲಸ ಮಾಡಲು ಬಯಸಿದ್ದಳು ಆದರೆ ಆಕೆಯ ಅತ್ತೆ ಮತ್ತು ಮಾವ ಅದನ್ನು ವಿರೋಧಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬುಧವಾರ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಮತ್ತು ಆಕೆಯ ಮಾವ ಜಗಳವಾಡುತ್ತಿರುವುದು ಕಂಡು ಬಂದಿದೆ. ಮಾವ ಸೊಸೆಯನ್ನು ಇಟ್ಟಿಗೆಯಿಂದ ಬೆದರಿಸಿದ್ದಾನೆ. ಸೊಸೆ ಹೊರಹೋಗಲು ಪ್ರಯತ್ನಿಸಿದಾಗ, ಮಾವ ಸೊಸೆಯ ತಲೆಗೆ ಎರಡು ಬಾರಿ ಹೊಡೆದನು.
ತೊಂದ್ರೆ ಕೊಟ್ರೆ ಮನೆಗೆ ನುಗ್ಗಿ ಹೊಡಿತೀವಿ, ಕಾಂಗ್ರೆಸ್ ಶಾಸಕನಿಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ
ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಗುರುತಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆಯ ತಲೆಗೆ 17 ಹೊಲಿಗೆಗಳು ಹಾಕಲಾಯಿತು.
ಟಾಟಾ ಕುಟುಂಬದ ಈ ಸೊಸೆ ಬಹುಕೋಟಿ ಕಿರ್ಲೋಸ್ಕರ್ ಸಮೂಹ ಸಂಸ್ಥೆ ಉತ್ತರಾಧಿಕಾರಿ
ಮಹಿಳೆ ಈಗೆ ಚೇತರಿಕೆ ಹೊಂದುತ್ತಿದ್ದಾಳೆ. ಉದ್ಯೋಗ ಸಂದರ್ಶನಕ್ಕೆ ಹೋಗುತ್ತಿದ್ದ ಕಾರಣಕ್ಕೆ ಮಾವ ಆಕೆಯನ್ನು ಥಳಿಸಿದ್ದಾರೆ. ಅವಳು ಕೆಲಸ ಮಾಡಲು ಮತ್ತು ತನ್ನ ಕುಟುಂಬವನ್ನು ಬೆಂಬಲಿಸಲು ಬಯಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೂ ಯಾರ ಬಂಧನವೂ ಆಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ