ಚೀನಾಕ್ಕೆ ಹೊರಟಿದ್ದ ಪಿಪಿಇ ಕಿಟ್‌ ನೋಡಿ ಅಧಿಕಾರಿಗಳೇ ದಂಗು! ಭರ್ಜರಿ ಬೇಟೆ

By Suvarna NewsFirst Published May 14, 2020, 8:32 PM IST
Highlights

ದೆಹಲಿ ಕಸ್ಟಮ್ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ/ ಅಪಾರ ಪ್ರಮಾಣದ ಪಿಪಿಇ ಕಿಟ್, ಮಾಸ್ಕ್ ವಶ/ ನಮ್ಮ ದೇಶದಿಂದ ಚೀನಾಕ್ಕೆ ಹೊರಟಿತ್ತು

ನವದೆಹಲಿ(ಮೇ 14)  ಕ್ಷಿಪ್ರ ಕಾರ್ಯಾಚರಣೆ ನಡೆಸಿದ ದೆಹಲಿ  ಕಸ್ಟಮ್ ವಿಭಾಗದ ಅಧಿಕಾರಿಗಳು ದೊಡ್ಡ ಮೊತ್ತದ ಪಿಪಿಇ ಕಿಟ್, ಮಾಸ್ಕ್, ಕಚ್ಚಾ ವಸ್ತುಗಳು ಮತ್ತು ಸಾನಿಟೈಸರ್ ವಶ ಪಡಿಸಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಒಂದು ಸುದ್ದಿ ಎನ್ನಬಹುದಿತ್ತು. ಆದರೆ ಇವೆಲ್ಲವೂ ಕಳ್ಳ ದಾರಿಯಲ್ಲಿ ಚೀನಾಕ್ಕೆ ಹೊರಟಿತ್ತು.

"

ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ ಕೊರೋನಾ ವೈರಸ್ ಕಾರಣಕ್ಕೆ ವಿದೇಶದಿಂದ ಇಂಥ ವಸ್ತು ರಫ್ತು ಮಾಡುವುದಕ್ಕೆ ನಿಷೇಧ ಹೇರಿದೆ.  ಮಾರ್ಚ್ 19 ರಿಂದಲೇ ಆದೇಶ ಜಾರಿಯಾಗಿದೆ. ಹಾಗಿದ್ದರೂ ಇಷ್ಟೊಂದು ವಸ್ತುಗಳು ಯಾವ ದಾರಿಯಲ್ಲಿ ಹೊರಟಿದ್ದವು?

ಆರ್ಥಿಕತೆ ಮೇಲೆತ್ತಲೂ ಮೋದಿ ಮೂರು ಆರ್ ಸೂತ್ರ

 ವೆಂಟಿಲೇಟರ್, ಸಾನಿಟೈಸರ್ ಎಲ್ಲದಕ್ಕೂ ನಿಷೇಧ ಹೇರಲಾಗಿದೆ. 5.08 ಲಕ್ಷ ಮಾಸ್ಕ್, 57 ಲೀಟರ್ ಸಾನಿಟೈಸರ್, 952 ಪಿಪಿಇ ಕಿಟ್ ಗಳಿಉ ಕೋರಿಯರ್ ಮೂಲಕ ದೆಹಲಿ ತಲುಪಿದ್ದು ವಶಕ್ಕೆ ಪಡೆಯಲಾಗಿದೆ.

ಇದಲ್ಲದೇ 2480ಕೆಜಿ ಯಚ್ಟು ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ವಸ್ತುಗಳ ಮೇಲೆ ನಿರ್ಬಂಧ ಹೇರಿದ್ದರೂ ಹೇಗೆ ಬಂದವು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

 

click me!